ಪ್ರಚಲಿತ ಅಸಮತೋಲನದ ವ್ಯವಸ್ಥೆಯಿಂದ ಆರೋಗ್ಯ ಸೇವಾ ವಲಯದಲ್ಲಿ ಶುಶ್ರೂಷಕರಿಗೆ ದೊರೆಯಬೇಕಾದ ಸ್ಥಾನಮಾನ ದೊರೆತಿಲ್ಲ. ನರ್ಸಿಂಗ್ ಪದವೀಧರರಿಗೆ ವಿದೇಶಗಳಲ್ಲಿ ಒಂದು ವರ್ಷಕ್ಕೆ ಅಂದಾಜು 20-25 ಲಕ್ಷ ರೂ. ವೇತನ ದೊರೆಯುತ್ತದೆ. ಆದರೆ, ರಾಜ್ಯದಲ್ಲಿ ವರ್ಷಕ್ಕೆ 2 ಲಕ್ಷ ರೂ. ವೇತನವೂ ಸಿಗುವುದಿಲ್ಲ. ಹೀಗಾಗಿ ನರ್ಸಿಂಗ್ ಪರ್ಯಾಯ ವೃತ್ತಿಯಾಗಿ ಆಕರ್ಷಣೆ ಕಳೆದುಕೊಂಡಿದೆ. ಸದ್ಯ ಪರಿಶೀಲನೆಯಲ್ಲಿರುವ ‘ನರ್ಸಿಂಗ್ ಹಾಗೂ ಸೂಲಗಿತ್ತಿ ವಿಧೇಯಕ’ ಮೇಲಿನ ಕೆಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಆಶಯವಿದೆ. ಕರೊನಾ ಪಿಡುಗಿನಿಂದ ನರ್ಸಿಂಗ್ ಶಿಕ್ಷಣಕ್ಕೆ ನೀಡಬೇಕಾದ ಆದ್ಯತೆ ಇನ್ನಷ್ಟು ಪ್ರಸ್ತುತ ಎನಿಸಿದೆ. ಈ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನರ್ಸಿಂಗ್ ಸೇವೆ ಮತ್ತು ಶಿಕ್ಷಣಕ್ಕೆ ನ್ಯಾಯ ಒದಗಿಸಲು ಸರ್ಕಾರ ಚಿಂತನೆ ನಡೆಸಬೇಕಾಗಿದೆ.
ಈ ಬಾರಿಯ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಕ್ಕೆ ‘ನರ್ಸ್​ಸ್ ಎ ವಾಯ್್ಸ ಟು ಲೀಡ್’ ಇನ್ವೆಸ್ಟ್ ಇನ್ ನರ್ಸಿಂಗ್, ರೆಸ್ಪೆಕ್ಟ್ ರೈಟ್ಸ್ ಟು ಸೆಕ್ಯುರ್ ಗ್ಲೋಬಲ್ ಹೆಲ್ತ್’ ಎಂಬ ಧ್ಯೇಯವಾಕ್ಯ ಇಟ್ಟುಕೊಳ್ಳಲಾಗಿದೆ. ನಮ್ಮ ದೇಶದಲ್ಲಿ ಆರೋಗ್ಯ ಸೇವೆಯಲ್ಲಿ ನಿರತರಾದ ಒಟ್ಟು ಕಾರ್ಯತರ್ಕರಲ್ಲಿ ಶುಶ್ರೂಷಕರ ಹಾಗೂ ಸೂಲಗಿತ್ತಿಯರ ಪ್ರಮಾಣ 2/3 ಇದ್ದು, ಅವರ ಅನುಪಾತ ಒಂದು ಸಾವಿರ ಮಂದಿಗೆ ಶೇಕಡ 1.7 ಮಾತ್ರ. ಇದು ವಿಶ್ವ ಆರೋಗ್ಯ ಸಂಸ್ಥೆ ನಿಗದಿಸಿರುವ ಪ್ರಮಾಣವಾದ ಶೇ.43ಕ್ಕಿಂತ ಭಾರಿ ಕಡಿಮೆ. ಈ ಪ್ರಮಾಣವನ್ನು ತಲುಪಲು ಇನ್ನೂ 24 ಲಕ್ಷ ಶುಶ್ರೂಷಕರ ಅವಶ್ಯಕತೆ ಇದೆ. ಕಳಪೆ ತರಬೇತಿ, ಪ್ರದೇಶವಾರು ಸಿಬ್ಬಂದಿಯ ಅಸಮಾನತೆ, ಅಪ್ರಮಾಣೀಕೃತ ನಡವಳಿಕೆ ಮುಂತಾದ ಸವಾಲುಗಳನ್ನು ಈ ವಲಯ ಎದುರಿಸುತ್ತಿದೆ.
ನರ್ಸಿಂಗ್ ಶಿಕ್ಷಣ ಹಾಗೂ ತರಬೇತಿ ಗುಣಮಟ್ಟ:ಭಾರತದಲ್ಲಿ ನರ್ಸಿಂಗ್ ಶಿಕ್ಷಣ ಬಹುರೂಪಿಯಾಗಿದ್ದು, ಬಿಎಸ್​ಸಿ ನರ್ಸಿಂಗ್, ಡಿಪ್ಲೊಮಾ ಇನ್ ನರ್ಸಿಂಗ್, ಪೋಸ್ಟ್ ಬೇಸಿಕ್ ನರ್ಸಿಂಗ್, ಎಂಎಸ್​ಸಿ ನರ್ಸಿಂಗ್ ಹಾಗೂ ಎನ್​ಪಿಸಿಸಿ (ನರ್ಸ್ ಪ್ರಾಕ್ಟೀಷನರ್ ಇನ್ ಕ್ರಿಟಿಕಲ್ ಕೇರ್) ಮೊದಲಾದ ಕೋರ್ಸ್​ಗಳಿವೆ. ಭಾರತೀಯ ಶುಶ್ರೂಷ ಮಂಡಳಿ ಈ ಶಿಕ್ಷಣದ ಮಾರ್ಗಸೂಚಿ, ತಪಾಸಣೆ, ಪರೀಕ್ಷೆ ಹಾಗೂ ಪ್ರಮಾಣಪತ್ರಗಳ ಮೂಲಕ ನಿಯಂತ್ರಿಸುತ್ತಿದೆ. ಹಾಲಿ ನರ್ಸಿಂಗ್ ಶಿಕ್ಷಣ ಪದ್ಧತಿ ಹಳೆಯದಾಗಿದ್ದು ವೃತ್ತಿಯ ಅಗತ್ಯ ಈಡೇರಿಸುವುದಿಲ್ಲ ಹಾಗೂ ಉನ್ನತಿ ಸಾಧಿಸಲು ಪೂರಕವಾಗಿಲ್ಲ. ನುರಿತ ವಿಷಯಗಳಲ್ಲಿ ಪರಿಣತಿ ಸಾಧಿಸಲು ಸಾಕಷ್ಟು ಸ್ನಾತಕೋತ್ತರ ಕೋರ್ಸ್​ಗಳಿದ್ದು, ಅವುಗಳ ನ್ಯೂನತೆಗಳನ್ನು ಸರಿಪಡಿಸುತ್ತಿಲ್ಲ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 10 =
Remember me
