| ಆರ್.ತುಳಸಿಕುಮಾರ್ ಬೆಂಗಳೂರುಒಂದೂವರೆ ಶತಮಾನದಿಂದ ದೇಶದ ಉದ್ದಗಲಕ್ಕೂ ಕೋಟ್ಯಂತರ ಜನಸಾಮಾನ್ಯರ ಸಂಪರ್ಕ ಸಂಹವನ ವಾಹಕವಾಗಿ ಗುರುತಿಸಿಕೊಂಡಿರುವ ಅಂಚೆ ಇಲಾಖೆ, ವಿಶ್ವದಲ್ಲೇ ಅತಿ ಕಡಿಮೆ ವೆಚ್ಚದಲ್ಲಿ ಸೇವೆ ಒದಗಿಸುತ್ತಿರುವ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬದಲಾದ ಕಾಲಘಟ್ಟದಲ್ಲಿ ಅಂಚೆಯಣ್ಣನಿಂದ ಪತ್ರ ಬಟವಾಡೆ ಕಾರ್ಯ ಈಗ ಡಿಜಿಟಲ್ ಸ್ಪರ್ಶ ಪಡೆದಿದೆ. ಇದರ ಜತೆಗೆ ಇಲಾಖೆಯ ಉಳಿತಾಯ ಖಾತೆ ಯೋಜನೆಗಳು ಎಲ್ಲೆಡೆ ದೊಡ್ಡ ಸದ್ದು ಮಾಡುತ್ತಿದೆ.
ಸುಕನ್ಯಾ ಸಮೃದ್ಧಿ ಶೈನಿಂಗ್:ಅಂಚೆ ಇಲಾಖೆ ಹಾಗೂ ರಾಜ್ಯ ಸರ್ಕಾರದ ಸಹಕಾರದಲ್ಲಿ ಆರಂಭವಾಗಿರುವ ‘ಸುಕನ್ಯಾ ಸಮೃದ್ಧಿ’ ಯೋಜನೆ ದೊಡ್ಡ ಮಟ್ಟದಲ್ಲಿ ಜನಪ್ರಿಯಗೊಂಡಿದೆ. ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಈ ಯೋಜನೆ ಹೆಣ್ಣುಮಕ್ಕಳ ಭವಿಷ್ಯದ ಹೂಡಿಕೆ/ಹಣಉಳಿತಾಯ ಮಾಡಲು ಚಿಮ್ಮುಹಲಗೆಯಾಗಿ ಮಾರ್ಪಟ್ಟಿದೆ. ಯೋಜನೆ ಆರಂಭವಾದ ಎರಡೇ ವರ್ಷ ದಲ್ಲಿ 25.43 ಲಕ್ಷ ಖಾತೆಗಳು ತೆರೆದಿರುವುದು ಸಕನ್ಯಾ ಸಮೃದ್ಧಿ ಯೋಜನೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಅಂಚೆ ಇಲಾಖೆಯ ವಿವಿಧ ಉಳಿತಾಯ ಪತ್ರಗಳ ಯೋಜನೆಗಳು ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗುತ್ತಿವೆ. ಗ್ರಾಮೀಣ ಭಾಗದಲ್ಲೂ ನಮ್ಮ ಇಲಾಖೆಯ ಸಿಬ್ಬಂದಿ ಇಂತಹ ಯೋಜನೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಸಕ್ರಿಯರಾಗಿದ್ದಾರೆ. ‘ಸುಕನ್ಯಾ ಸಮೃದ್ಧಿ ಯೋಜನೆ’ಗೆ ಸಾರ್ವಜನಿಕರಿಂದ ಹೆಚ್ಚು ಸ್ಪಂದನೆ ವ್ಯಕ್ತವಾಗಿದೆ. ಗ್ರಾಹಕರಿಗೆ ಹೆಚ್ಚಿನ ಸೇವೆ ಒದಗಿಸಲು ಸಂಸ್ಥೆ ಬದ್ಧವಾಗಿದೆ.
| ರಾಜೇಂದ್ರಕುಮಾರ್, ಚೀಫ್ ಪೋಸ್ಟ್​ಮಾಸ್ಟರ್ ಜನರಲ್, ಕರ್ನಾಟಕ ವೃತ್ತ
ಪ್ರಧಾನಿ ಮೋದಿಗೆ ಆಪತ್ತಿದೆಯೇ?: ಸಹಾಯಕರ ಸೋಗಿನಲ್ಲಿ ಇರುವವರಿಂದಲೇ ತೊಂದರೆ!; ಏನಿದು ಭವಿಷ್ಯ?

‘ಇಂಡಿಯಾ’ಗೇ ಗುಡ್​​ಬೈ ಹೇಳಿ ‘ಡಿಜಿಟಲ್ ಯುದ್ಧ’ಕ್ಕಿಳಿದ ಇಸ್ರೇಲಿಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 8 =
Remember me
