|ಮಂಡಗದ್ದೆ ಪ್ರಕಾಶ ಬಾಬು ಕೆ. ಆರ್.
ಹಿಂದು ಪಂಚಾಗದ ಪ್ರಕಾರ ಪ್ರಥಮ ಏಕಾದಶಿ ಬರುವುದು ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನ. ಏಕಾದಶಿಗಳಲ್ಲಿ ಇದು ವಿಶೇಷವಾದದ್ದು. ಏಕೆಂದರೆ ಮಹಾವಿಷ್ಣುವು ಆಷಾಢ ಶುದ್ಧ ಏಕಾದಶಿಯಿಂದ ಕಾರ್ತಿಕ ಶುದ್ಧ ಉತ್ಥಾನ ದ್ವಾದಶಿಯವರೆಗೆ ಅಂತಮುಖಿಯಾಗಿ ದಿವ್ಯ ನಿದ್ರೆಯಲ್ಲಿರುತ್ತಾನೆ. ಆ ಸಮಯದಲ್ಲಿ ಯತಿಗಳು, ಸನ್ಯಾಸಿಗಳು ಹಾಗೂ ಸಾಧುಗಳು ಅಂತಮುಖಿಗಳಾಗಿ ಸಾಧನೆಯಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಪ್ರಥಮ ಏಕಾದಶಿ ದಿನದಿಂದಲೇ ಕೆಲವು ಸಾಧು ಸಂತರು ಚಾತುರ್ವಸ್ಯ ವ್ರತ ಪ್ರಾರಂಭಿಸುತ್ತಾರೆ.
ಏಕಾದಶಿ ಹಾಗೂ ಅದರ ಮಹತ್ವ:ಏಕಾದಶಿ ಎಂದರೆ ಹನ್ನೊಂದು. ಐದು ಕರ್ಮೇಂದ್ರಿಯ, ಐದು ಜ್ಞಾನೇಂದ್ರಿಯ ಹಾಗೂ ಮನಸ್ಸು. ಧರ್ಮ, ಕರ್ಮ, ಜ್ಞಾನ ಸಾಧನ ಕಾರಣಗಳಿಂದ ಭಗವತ್ ಚಿಂತನೆಗೆ ತೊಡಗಿಸುವ ಕ್ರಿಯೆಯೇ ಏಕಾದಶಿ. ಈ ಏಕಾದಶಿಗೆ ಸಾಕ್ಷಾತ್ ಶ್ರೀಹರಿಯೇ ಅಭಿಮಾನಿ ದೇವರು. ಆ ಕಾರಣಕ್ಕೆ ಆ ದಿನವನ್ನು ಹರಿದಿನ ಎಂತಲೂ ಕರೆಯುವರು. ಏಕಾದಶಿ ಎನ್ನುವ ದೇವಿಯು ವಿಷ್ಣುವಿನಿಂದ ಉದ್ಭವಳಾಗಿ ‘ಮುರ’ ಎನ್ನುವ ರಾಕ್ಷಸನನ್ನು ಸಂಹರಿಸಲು ವಿಷ್ಣುವಿಗೆ ಸಹಾಯ ಮಾಡುತ್ತಾಳೆ.
ಇದರಿಂದ ಸಂಪ್ರೀತನಾದ ವಿಷ್ಣುವು ಏನಾದರೂ ವರ ಕೇಳು ಎಂದಾಗ ಪ್ರಥಮ ಏಕಾದಶಿ ದಿನ ಯಾರು ನಿನ್ನನ್ನು ಪೂಜಿಸುವರೋ ಹಾಗೂ ಉಪವಾಸ ವ್ರತ ಮಾಡುವರೋ ಅವರ ಪಾಪ ಪರಿಹರಿಸಿ ಮೋಕ್ಷವನ್ನು ಕರುಣಿಸು ಎಂದು ವರವನ್ನು ಕೇಳುತ್ತಾಳೆ. ಇದಕ್ಕೆ ವಿಷ್ಣು ತಥಾಸ್ತು ಎನ್ನುತ್ತಾನೆ.
ಉಪ ಎಂದರೆ ಹತ್ತಿರ, ವಾಸ ಎಂದರೆ ಇರುವುದು. ಭಗವಂತನ ಸಮೀಪ ವಾಸಿಸುವುದೇ ಉಪವಾಸದ ಅರ್ಥ. ಉಪವಾಸದ ಸಮಯದಲ್ಲಿ ಕೆಟ್ಟ ಯೋಚನೆ, ಕೆಟ್ಟ ಕೆಲಸ ಮಾಡಬಾರದು. ಪಂಚೇಂದ್ರಿಯಗಳ ಹತೋಟಿ ಹಾಗೂ ಆತ್ಮ ಶೋಧನೆಯೇ ಇದರ ಉದ್ದೇಶ. ಪ್ರಥಮ ಏಕಾದಶಿ ದಿನ ಧ್ಯಾನ, ಭಜನೆ, ಜಪ ಹಾಗೂ ವಿಷ್ಣು ಸಹಸ್ರನಾಮವನ್ನು ಹೇಳಿಕೊಂಡು ಪೂಜೆ ಮಾಡಿದರೆ ವಿಷ್ಣುವು ಎಲ್ಲ ಸೌಭಾಗ್ಯವನ್ನು ಕೊಟ್ಟು ಅಂತ್ಯದಲ್ಲಿ ಮೋಕ್ಷವನ್ನು ಕರುಣಿಸುವನು ಎಂದು ವಿಷ್ಣು ಪುರಾಣದಲ್ಲಿದೆ. ಆರೋಗ್ಯದ ದೃಷ್ಟಿಯಿಂದಲೂ ಉಪವಾಸ ಒಳ್ಳೆಯದು.
‘ನಾರಾಯಣ’ ಎಂದರೇನು?:ಶ್ರೀವಿಷ್ಣು ಎಂಬುದಕ್ಕೆ ಎಲ್ಲವನ್ನು ವ್ಯಾಪಿಸಿಕೊಂಡಿರುವನು, ಎಲ್ಲದರಲ್ಲೂ ಅಂತರ್ಗತನಾಗಿರುವವನು ಎಂಬ ವಿಶೇಷ ಅರ್ಥವಿದೆ. ಶ್ರೀವಿಷ್ಣುವಿನ ಮತ್ತೊಂದು ಹೆಸರು ‘ನಾರಾಯಣ’. ಈ ನಾರಾಯಣದಲ್ಲಿ ಒಂದೊಂದು ಅಕ್ಷರಕ್ಕೂ ವಿಶೇಷತೆ ಇದೆ.
ನಾ= ಎಂದರೆ ಕಾರಣ ರೂಪ ಜಲದ ಮೇಲೆ ನಿವಾಸವನ್ನು ಕಟ್ಟಿಸಿಕೊಂಡಿರುವವನು. ರಾ= ಎಂದರೆ ಎಲ್ಲ ಮಾನವರೂ ನೆಲೆಗೊಳ್ಳುವ ಸ್ಥಾನ. ಯ= ಎಂದರೆ ಎಲ್ಲರ ಹೃದಯದಲ್ಲಿ ವಾಸಿಸುವವನು. ಣ= ಎಂದರೆ ಮಾನವ ಕೋಟಿಯ ಅಂತಿಮ ಗಮ್ಯಸ್ಥಾನ. ಏಕಾದಶಿ ದಿನ ನಾರಾಯಣ ಜಪವನ್ನು ನಿರಂತರವಾಗಿ ಮಾಡಿದರೆ ಅಂತ್ಯದಲ್ಲಿ ವೈಕುಂಠ ಸೇರಬಹುದು ಎಂದು ವಿಷ್ಣು ಪುರಾಣದಲ್ಲಿದೆ.
ವಿಷ್ಣುವಿಗೆ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಪದ್ಮ ಇದೆ. ಶಂಖವು ಪಂಚಭೂತಗಳನ್ನು, ಚಕ್ರವು ಸಮಸ್ತ ಚಿತ್ತವನ್ನು ಸೂಚಿಸಿದರೆ ಗದೆಯು ಸಮಸ್ತ ಬುದ್ದಿಗಳ ದ್ಯೋತಕ ಮತ್ತು ಪದ್ಮವು ಸೃಷ್ಟಿಸಲ್ಪಡುವ ಪ್ರಪಂಚದ ಸಂಕೇತ. ಬುಧ ಗ್ರಹಕ್ಕೆ ವಿಷ್ಣು ಅಧಿಪತಿ. ಯಾರಿಗೆ ಬುಧ ದೋಷ, ಬುಧ ನೀಚ ಸ್ಥಾನದಲ್ಲಿದ್ದರೆ ಪಾಪಗ್ರಹಳು ಜತೆಯಲ್ಲಿದ್ದರೆ ಹಾಗೂ ಪಾಪಗ್ರಹಗಳ ದೃಷ್ಟಿಗೆ ಒಳಗಾಗಿದ್ದರೆ ಅಂತಹವರು ಏಕಾದಶಿ ದಿನ ವಿಷ್ಣು ಸಹಸ್ರನಾಮ, ವಿಷ್ಣು ಅಷ್ಟೋತ್ತರ ಪಠಿಸಿದರೆ ಬುಧ ಗ್ರಹದಿಂದ ಆಗುವ ದುಷ್ಟಪರಿಣಾಮ ಕಡಿಮೆ ಆಗುವುದು. ಮುಖ್ಯವಾಗಿ ಏಕಾದಶಿ ದಿನ ಮೌನ ಆಚರಿಸಬೇಕು. ಇದರಿಂದ ಮನಸ್ಸು ಶುದ್ಧಿ ಆಗುವುದು. ಕೆಲವು ಸಾಧು ಸಂತರು, ಪೀಠಾಧಿಪತಿಗಳು ಏಕಾದಶಿ ದಿನ ಮೌನ ಆಚರಿಸುತ್ತಾರೆ.
ಪ್ರಥಮ ಏಕಾದಶಿ ದಿನ ತಪ್ತಮುದ್ರಾಧಾರಣ:ಪ್ರಥಮ ಏಕಾದಶಿ ದಿನ ಎಲ್ಲ ವೈಷ್ಣವ ಮಠಗಳಲ್ಲಿ ತಪ್ತ ಮುದ್ರಾಧಾರಣ ನಡೆಯುವುದು. ಏಕಾದಶಿ ದಿನ ಚಕ್ರತೀರ್ಥದಲ್ಲಿ ಶಂಖ, ಚಕ್ರದ ತಪ್ತ ಚಿಹ್ನೆಗಳನ್ನು ಧಾರಣೆ ಮಾಡಬೇಕು. ಏಕೆಂದರೆ ಮನುಷ್ಯನು ತನ್ನ ಒಳಿತನ್ನು ಬಯಸಿ ನಾರಾಯಣನ ಸ್ಮರಣೆ ಮಾಡಬೇಕು ಮತ್ತು ನಾರಾಯಣನ ಆಯುಧಗಳ ಚಿಹ್ನೆಯನ್ನು ತಪ್ತಮುದ್ರಣ ಮಾಡಿಕೊಂಡರೆ ಆತನು ಸಂಸಾರ ಸಾಗರವನ್ನು ದಾಟುವ ಬಯಕೆಯಿಂದ ಸ್ವರ್ಗ ಲೋಕದಲ್ಲಿ ಇಂದ್ರನಾಗಿ ಶೋಭಿಸುತ್ತಾನೆ ಎಂದು ಪದ್ಮ ಪುರಾಣದಲ್ಲಿ ಹೇಳಿದೆ.
ರಿಯಲ್ ಚಾರ್ಲಿ-777: ಶ್ವಾನದೊಂದಿಗೆ ಬೈಕ್​ನಲ್ಲಿ ಲಡಾಕ್​ಗೆ ಹೊರಟ ಸು’ಧೀರ’

ತೋಟಕ್ಕೆ ಕೆಲಸಕ್ಕೆಂದು ಹೋಗಿದ್ದ ರೈತ, ಕಾಲು ಜಾರಿ ಬಾವಿಗೇ ಬಿದ್ದು ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − thirteen =
Remember me
