| ಶೈಖುನಾ ಎಂ.ಎಂ. ಅಬ್ದುಲ್ಲ ಫೈಝಿ
ಇಸ್ಲಾಂ ಧರ್ಮದಲ್ಲಿ ಎರಡು ಪ್ರಮುಖ ಹಬ್ಬಗಳಿವೆ. ಅದರಲ್ಲಿ ಒಂದು ಈದುಲ್ ಫಿತ್ರ್ (ರಂಜಾನ್), ಮತ್ತೊಂದು ಈದುಲ್ ಅದ್​ಹಾ (ಬಕ್ರೀದ್). ಈ ಹೊತ್ತಲ್ಲಿ ಆಚರಣೆಗಳು ದೇವರ ಆರಾಧನೆ ಹಾಗೂ ದಾನ, ಧರ್ಮಗಳಿಗೆ ಸೀಮಿತವಾಗಿರá-ತ್ತವೆ. ಈದುಲ್ ಫಿತ್ರ್ ಹಬ್ಬದ ಕುರಿತು ತಿಳಿದುಕೊಳ್ಳುವ ಮೊದಲು ರಂಜಾನ್ ತಿಂಗಳು ಮತ್ತು ಉಪವಾಸದ ಕುರಿತು ತಿಳಿಯಲೇಬೇಕು. ಕಾರಣ, ಸಾಧಾರಣವಾಗಿ ಈದುಲ್ ಫಿತ್ರ್ ಹಬ್ಬವನ್ನು ರಂಜಾನ್ ಹಬ್ಬ ಎಂದೇ ಕರೆಯಲಾಗá-ತ್ತದೆ. ಆದರೆ ನಿಜಕ್ಕೂ ರಂಜಾನ್ ಎಂಬುದು ಹಬ್ಬದ ಆಚರಣೆಯಲ್ಲ.
ಇಸ್ಲಾಮಿಕ್ ಕ್ಯಾಲೆಂಡರ್​ನ 9ನೇ ತಿಂಗಳು ರಂಜಾನ್ ಆಗಿದ್ದು, ಈ ತಿಂಗಳು ಪೂರ್ತಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಮುಸಲ್ಮಾನರು ಕಡ್ಡಾಯವಾಗಿ ಅನ್ನ, ಪಾನೀಯಗಳನ್ನು ತೊರೆದು ಉಪವಾಸ ಮಾಡಬೇಕು. ಇದು ಬುದ್ಧಿಮಾಂದ್ಯರು, ಚಿಕ್ಕ ಮಕ್ಕಳು ಮತ್ತು ಮಹಿಳೆಯರ ವಿಶೇಷ ದಿನಗಳನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಪ್ರತಿಯೊಬ್ಬರೂ ಆಚರಿಸಲೇಬೇಕು.
ರಂಜಾನ್ ವ್ರತಾಚರಣೆ:ಇಸ್ಲಾಂ ಧರ್ಮದ ಪ್ರಮುಖ 5 ಸ್ತಂಭಗಳಲ್ಲಿ ಮೊದಲನೆಯದು ದೇವರ ಮೇಲಿನ ನಂಬಿಕೆ (ಕಲಿಮ), ಎರಡನೆಯದು ನಮಾಜ್, ಮೂರನೆಯದು ಝುಕಾತ್, ನಾಲ್ಕನೆಯದು ರಂಜಾನ್ ತಿಂಗಳ ಉಪವಾಸ ಮತ್ತು ಐದನೆಯದು ಹಜ್ ಯಾತ್ರೆ. ಇದರಲ್ಲಿ ಪ್ರಮುಖವಾಗಿ ನಾಲ್ಕನೆಯ ಸ್ತಂಭವಾದ ರಂಜಾನ್ ತಿಂಗಳ ಉಪವಾಸ ಆಚರಣೆಗಾಗಿ ಮುಸಲ್ಮಾನರು ಮಾನಸಿಕ ಹಾಗೂ ದೈಹಿಕವಾಗಿ ಸಿದ್ಧಗೊಳ್ಳುತ್ತಾರೆ. ಕಾರಣ, ಒಬ್ಬ ವ್ಯಕ್ತಿ ಹೊಟ್ಟೆ ಹಸಿವಿನಿಂದ ಇದ್ದ ಮಾತ್ರಕ್ಕೆ ಆತನ ಉಪವಾಸ ಪೂರ್ಣಗೊಳ್ಳುವುದಿಲ್ಲ. ಅದರ ಜತೆಗೆ ಆತ ತನ್ನ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಅಂತರಂಗ ಶುದ್ಧಿ ಮಾಡಿಕೊಳ್ಳಬೇಕು.
ಉಪವಾಸನಿರತ ವ್ಯಕ್ತಿ ಸಂಪೂರ್ಣವಾಗಿ ದೇವರ ಆಜ್ಞೆಗೆ ಶರಣಾಗುತ್ತಾನೆ. ಇದರಿಂದಾಗಿ ಆತ ಎಲ್ಲ ರೀತಿಯ ದುಶ್ಚಟ ಮತ್ತು ದುಷ್ಕೃತ್ಯಗಳಿಂದಲೂ ದೂರ ಉಳಿಯುತ್ತಾನೆ. ದೇವರ ಆರಾಧನೆಗಾಗಿ ಒಂದು ತಿಂಗಳು ಮೀಸಲಿಟ್ಟು ತಾನು ಮಾಡಿದ ಪಾಪಕ್ಕೆ ಪಶ್ಚಾತ್ತಾಪಪಟ್ಟುಕೊಳ್ಳುತ್ತಾನೆ. ರಂಜಾನ್ ತಿಂಗಳ ವ್ರತಾಚರಣೆಯು- ಬಡವನೇ ಆಗಿರಲಿ ಬಲಾಢ್ಯರೇ ಆಗಿರಲಿ, ಹೊಟ್ಟೆ ಹಸಿವಿನ ಕಷ್ಟ ಅರಿತುಕೊಳ್ಳಬೇಕೆಂಬ ಉದ್ದೇಶ ಹೊಂದಿದೆ.
ರಂಜಾನ್ ತಿಂಗಳಿನಲ್ಲಿ ವಾರ್ಷಿಕ ವರಮಾನದ ಮೂರನೇ ಒಂದು ಭಾಗವನ್ನು ನಿರ್ಗತಿಕ, ಬಡವ, ಅನಾಥ, ನಿರಾಶ್ರಿತ ಸೇರಿ ಸಮಾಜದ ಅಶಕ್ತರಿಗೆ ದಾನದ ರೂಪದಲ್ಲಿ ಕಡ್ಡಾಯವಾಗಿ ನೀಡಲೇಬೇಕು. ಸಮಾಜದಲ್ಲಿನ ಶ್ರೀಮಂತರು ಬಡವರ ನೆರವಿಗೆ ಬರುವ ಮೂಲಕ ಆರ್ಥಿಕ ಅಸಮತೋಲನ ಹೋಗಲಾಡಿಸಿ ಸರ್ವರೂ ಸುಖೀ ಜೀವನ ನಡೆಸುವಂತಾಗಬೇಕು ಎಂಬá-ದು ಇದರ ಪ್ರಮá-ಖ ಉದ್ದೇಶ. ಇಸ್ಲಾಂ ಬಡ್ಡಿ ವ್ಯವಹಾರವನ್ನು ಸಂಪೂರ್ಣವಾಗಿ ನಿಷೇಧಿಸá-ತ್ತದೆ. ದಾನ, ಧರ್ಮವನ್ನು ಪೋ›ತ್ಸಾಹಿಸುತ್ತದೆ. ಝುಕಾತ್ ನೀಡುವುದರಿಂದ ತಾನು ಮಾಡಿದ ಪಾಪ, ಕರ್ಮಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಮುಸಲ್ಮಾನರಿಗಿದೆ.
ಈದುಲ್ ಫಿತ್ರ್:ರಂಜಾನ್ ತಿಂಗಳು ಪೂರ್ಣಗೊಂಡ ಬಳಿಕ ಪ್ರಾರಂಭಗೊಳ್ಳುವ ಶವ್ವಾಲ್ ತಿಂಗಳ ಪ್ರಥಮ ದಿನ ಈದುಲ್ ಫಿತ್ರ್ ಆಚರಿಸಲಾಗá-ತ್ತದೆ. ಇಸ್ಲಾಮಿನ ತಿಂಗಳುಗಳು ಚಂದ್ರದರ್ಶನ ಆಧಾರದಲ್ಲಿ ನಿಗದಿಯಾಗಿರá-ವುದರಿಂದ ಪ್ರದೇಶದಿಂದ ಪ್ರದೇಶಕ್ಕೆ ದಿನದ ವ್ಯತ್ಯಾಸ ಕಂಡುಬರುತ್ತದೆ. ಹಾಗಾಗಿ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಒಂದು ದಿನ ಹೆಚ್ಚು ಕಡಿಮೆಯಾಗಿ ಹಬ್ಬ ಆಚರಿಸಲಾಗುತ್ತದೆ. 30 ದಿನ ಉಪವಾಸ ಮಾಡಿದ ಬಳಿಕ ಚಂದ್ರದರ್ಶನ ಆಗದಿದ್ದರೂ ಈದ್ ದಿನ ಹಬ್ಬ ನಿಗದಿಯಾಗಲಿದೆ. ಈದ್ ದಿನದಂದು ಮುಸಲ್ಮಾನರು ಉಪವಾಸ ಇರುವುದನ್ನು ಇಸ್ಲಾಂ ನಿಷೇಧಿಸಿದೆ. ಈದ್ ಸಾಮೂಹಿಕವಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಗುತ್ತದೆ. ಮುಸಲ್ಮಾನರ ಸಂಖ್ಯೆ ಹೆಚ್ಚಾಗಿರುವ ಕಡೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರೆ, ಉಳಿದ ಕಡೆಗಳಲ್ಲಿ ಮಸೀದಿಗಳಲ್ಲಿಯೇ ಪ್ರಾರ್ಥನೆ ಮಾಡಲಾಗುತ್ತದೆ.
ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿ:ಕರೊನಾ ಸಂಕಷ್ಟದಿಂದಾಗಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲದೆ ಇರುವುದರಿಂದ ಸರ್ಕಾರದ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸುವ ಮೂಲಕ ಮನೆಯಲ್ಲಿಯೇ ಕುಟುಂಬ ಸದಸ್ಯರೊಂದಿಗೆ ಪ್ರಾರ್ಥನೆ ಸಲ್ಲಿಸಬೇಕು. ಈದ್ ದಿನದ ಪ್ರಾರ್ಥನೆಯಲ್ಲಿ ಕರೊನಾ ಸಂಕಷ್ಟದಿಂದ ಪ್ರಪಂಚಕ್ಕೆ ಮುಕ್ತಿ ದೊರೆಯುವಂತೆಯೂ, ಪ್ಯಾಲೆಸ್ತಿನ್​ನಲ್ಲಿ ಭುಗಿಲೆದ್ದ ಹಿಂಸಾಚಾರದಿಂದ ಆ ಜನತೆಯನ್ನು ಕಾಪಾಡುವ ಮೂಲಕ ಶಾಂತಿ ನೆಲೆಸುವಂತೆಯೂ ಸರ್ವರೂ ವಿಶೇಷ ಪ್ರಾರ್ಥನೆ ಸಲ್ಲಿಸಬೇಕು. ಅರ್ಹರಿಗೆ ದಾನದ ಹಣ ತಲುಪಿಸುವ ಮೂಲಕ ಸಂಕಷ್ಟದಲ್ಲಿ ಇರುವವರ ನೆರವಿಗೆ ಧಾವಿಸಬೇಕು. ಕರೊನಾವನ್ನು ತೊಡದು ಹಾಕುವ ನಿಟ್ಟಿನಲ್ಲಿ ಜಾತಿ, ಧರ್ಮ ಬದಿಗಿಟ್ಟು ಎಲ್ಲರೂ ಒಟ್ಟಾಗಿ ಕೆಲಸ ನಿರ್ವಹಿಸಬೇಕು.
ರಂಜಾನ್ ತಿಂಗಳು ಪೂರ್ತಿ ಉಪವಾಸವಿದ್ದ ಸಂದರ್ಭ ತನಗರಿತೋ, ಅರಿವಿಲ್ಲದೆಯೋ ಆಗಿರಬಹುದಾದ ಲೋಪದೋಷಗಳ, ಪಾಪ ಮುಕ್ತಿಗಾಗಿ ಫಿತ್ರ್ ಝುಕಾತ್ (ದವಸ, ಧಾನ್ಯಗಳ ಕಡ್ಡಾಯ ದಾನ) ಮಾಡಬೇಕು. ಈ ದಾನವನ್ನು ರಂಜಾನ್ ತಿಂಗಳ ಸೂರ್ಯ ಅಸ್ತಮದ ಬಳಿಕ ಶವ್ವಾಲ್ ತಿಂಗಳ ಸೂರ್ಯೋದಯದ ಮುನ್ನ ನೀಡಬೇಕು. ತಾನು, ತನ್ನ ಹೆಂಡತಿ, ಮಕ್ಕಳು ಮತ್ತು ತನ್ನ ಆಶ್ರಯದಲ್ಲಿ ಇರುವವರ ಖರ್ಚು ಕಳೆದು ತನ್ನಲ್ಲಿ ಉಳಿದ ಸಂಪತ್ತಿದ್ದರೆ ಆ ವ್ಯಕ್ತಿ ಕಡ್ಡಾಯವಾಗಿ ಫಿತ್ರ್ ಝುಕಾತ್ ನೀಡಬೇಕು. ಫಿತ್ರ್ ಝುಕಾತ್ ನೀಡಲು ತಾನು ವಾಸಿಸುವ ಪ್ರದೇಶದಲ್ಲಿ ಜನರು ಬಳಸುವ ಧಾನ್ಯಗಳನ್ನೇ ನೀಡಬೇಕು.
ಹಬ್ಬ ಆಚರಣೆ ದಿನ ಯಾರೂ ಹೊಟ್ಟೆ ಹಸಿವಿನಿಂದ ಇರಕೂಡದು ಎಂಬ ಮಹತ್ತರ ಸಂದೇಶವನ್ನು ಈ ಮೂಲಕ ಸಾರಲಾಗಿದೆ. ನಿಮ್ಮ ಪೈಕಿ ಸ್ವತಂತ್ರರು, ಮಹಿಳೆಯರು, ಪುರುಷರು, ಮಕ್ಕಳು, ವಯಸ್ಕರು ಎಂಬ ವ್ಯತ್ಯಾಸವಿಲ್ಲದೆ ಗೋಧಿ ಅಥವಾ ಪ್ರಮುಖ ಆಹಾರಧಾನ್ಯಗಳನ್ನು ಕಡ್ಡಾಯವಾಗಿ ದಾನ ನೀಡಿ. ಆ ಮೂಲಕ ನಿಮ್ಮ ಪೈಕಿ ಸಿರಿವಂತರನ್ನು ಅಲ್ಲಾಹು ಶುದ್ಧೀಕರಿಸುತ್ತಾನೆ. ಬಡವನಿಗೆ ಆತ ನೀಡಿದ್ದಕ್ಕಿಂತಲೂ ದುಪ್ಪಟ್ಟು ಅಲ್ಲಾಹ ನೀಡುತ್ತಾನೆ.
(ಲೇಖಕರು ಕೊಡಗು ಜಿಲ್ಲಾ ಉಸ್ತುವಾರಿ ಖಾಝಿ ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯರು)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 − two =
Remember me
