ರಾಯಚೂರು:ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಆ.21ರಿಂದ ಆ.27ರವರೆಗೆ ಶ್ರೀಗುರು ರಾಯರ 350ನೇ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ತಿಳಿಸಿದರು. ಶ್ರೀಮಠದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಕೋವಿಡ್ ಮಾರ್ಗಸೂಚಿಯಂತೆ ವಿವಿಧ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲೆಕ್ಟ್ರಾನಿಕ್ ಸ್ಕ್ರೀನಿಂಗ್ ನಡೆಸಿ ಭಕ್ತರನ್ನು ಒಳಗೆ ಬಿಡಲಾಗುವುದು. ಸ್ಯಾನಿಟೈಸರ್, ಮಾಸ್ಕ್ ಹಾಕದಿದ್ದರೆ ಅಲಾರಾಂ ಹೊಡೆಯುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಆ.21ರಂದು ಧ್ವಜಾರೋಹಣ ಮೂಲಕ ಆರಾಧನೆಗೆ ಚಾಲನೆ ಸಿಗಲಿದೆ. ಆ.22ರಂದು ರಜತ ಮಂಟಪೋತ್ಸವ, ಆ.23ರಂದು ಪೂರ್ವಾರಾಧನೆ, ಆ.24ರಂದು ಮಧ್ಯಾರಾಧನೆ ನಡೆಯಲಿದೆ. ಅಂದು ಟಿಟಿಡಿಯಿಂದ ರಾಯರಿಗೆ ಶೇಷ ವಸ್ತ್ರ ಸಮರ್ಪಣೆ ನಡೆಯಲಿದೆ. ಆ.25ರಂದು ಉತ್ತರಾರಾಧನೆ ಮತ್ತು ಮಹಾರಥೋತ್ಸವ ನೆರವೇರಲಿದೆ. ಆ.26ರಂದು ಪೂರ್ವ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥರ ಆರಾಧನೆ ನಡೆಯಲಿದೆ. ಆ.27ರಂದು ಆರಾಧನಾ ಮಹೋತ್ಸವ ಸಮಾಪ್ತಿಗೊಳ್ಳಲಿದೆ. ಪ್ರತಿನಿತ್ಯ ಸಂಜೆ ಯೋಗೀಂದ್ರ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರಿಗೆ ವಸತಿ-ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ನದಿ ಪಾತ್ರದಲ್ಲಿ ಸ್ನಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಂಗವಿಕಲರು, ವೃದ್ಧರಿಗೆ ಶೀಘ್ರ ದರ್ಶನದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವಿವರಿಸಿದರು. ಶ್ರೀಮಠದ ಸಹಾಯಕ ವ್ಯವಸ್ಥಾಪಕ ಐ.ಪಿ.ನರಸಿಂಹಾಚಾರ್ ಹಾಗೂ ಗೌತಮಾಚಾರ್ ಉಪಸ್ಥಿತರಿದ್ದರು.
ಮಂತ್ರಾಲಯದ ಅಭಿವೃದ್ಧಿ ಹಿನ್ನೆಲೆಯಲ್ಲಿ 2 ಸಾವಿರ ಕೋಟಿ ರೂ.ಗಳ ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ. ಕೇಂದ್ರ-ರಾಜ್ಯ ಸರ್ಕಾರ, ಶ್ರೀಮಠ ಮತ್ತು ಭಕ್ತರ ಸಹಕಾರದೊಂದಿಗೆ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದು ಡಾ.ಸುಬುಧೇಂದ್ರ ತೀರ್ಥರು ತಿಳಿಸಿದರು. ನಾಲ್ಕು ಹಂತದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಒಳಚರಂಡಿ, ಕುಡಿವ ನೀರಿನ ವ್ಯವಸ್ಥೆ, ಸ್ನಾನಘಟ್ಟ ನಿರ್ಮಾಣ ಸೇರಿ ಹತ್ತು ಹಲವು ಕಾರ್ಯಕ್ರಮ ರೂಪಿಸಲಾಗಿದೆ. ಈಗಾಗಲೆ ಶ್ರೀಮಠದ ಮುಂಭಾಗ ರಸ್ತೆ ವಿಸ್ತರಣೆಯಾಗಿದ್ದು, ಸುಂದರ ಕಾರಿಡಾರ್ ನಿರ್ವಿುಸಲಾಗುತ್ತಿದೆ. ಹೊಸದಾಗಿ ಸುಸಜ್ಜಿತ 116 ಕೊಠಡಿ ನಿರ್ಮಾಣ ಮಾಡಲಾಗಿದೆ. ಥೀಮ್ ಪಾರ್ಕ್ ಕಾರ್ಯ ನಡೆಯುತ್ತಿದ್ದು, ಮ್ಯೂಸಿಯಂ ಕಾರ್ಯ ಸಂಪೂರ್ಣವಾಗಿದೆ. ರಾಯರ ಬೃಂದಾವನಕ್ಕೆ ನವರತ್ನ ಮುಖ ಕವಚ ನಿರ್ವಣದ ಉದ್ದೇಶವಿದ್ದು, ಕರೊನಾ ಹಿನ್ನೆಲೆಯಲ್ಲಿ ಸಂಪೂರ್ಣ ವಾಗಿಲ್ಲ. ಭಕ್ತರಿಂದ ಬಂದ ಬಂಗಾರದಿಂದ 14 ಕೆಜಿಯ ಪೂಜಾ ಸಾಮಗ್ರಿ, ಚಾಮರ ಸಿದ್ಧಪಡಿಸಲಾಗಿದೆ.
ಆರಾಧನೆ ಸಂದರ್ಭ ರಂಗ ಸಭಾಂಗಣ ಲೋಕಾರ್ಪಣೆಯಾಗಲಿದೆ. ಅಭಯ ಆಂಜನೇಯ ಮೂರ್ತಿ ಎದುರಿನ 3.5 ಎಕರೆ ಸ್ಥಳದಲ್ಲಿ ಅಯೋಧ್ಯೆ ಮಾದರಿಯಲ್ಲಿ ರಾಮಮಂದಿರ ನಿರ್ವಣವಾಗಿದೆ. ಇದರಲ್ಲಿ ಶ್ರೀರಾಮನ ಭವ್ಯ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ಮಂತ್ರಾಲಯದಲ್ಲಿ ವಿಮಾನ ನಿಲ್ದಾಣ ನಿರ್ವಣಕ್ಕೆ ಖಾಸಗಿಯವರು ಮುಂದೆ ಬಂದಿದ್ದಾರೆ. ಇದಕ್ಕೆ ಬೇಕಾದ ಭೂಮಿ ಪರಿಶೀಲನೆ ನಡೆದಿದೆ. ರಾಯಚೂರಿನಲ್ಲಿ ವಿಮಾನ ನಿಲ್ದಾಣವಾದಲ್ಲಿ ರಾಯರ ಹೆಸರಿಡುವುದು ಔಚಿತ್ಯ ಎಂದರು.
ಕರೊನಾ ಹಿನ್ನೆಲೆಯಲ್ಲಿ ಶಾಲೆ ಆರಂಭ ಪ್ರಸ್ತುತ ಸೂಕ್ತವಲ್ಲ. ಪರಿಸ್ಥಿತಿ ಗಮನಿಸಿ ಸೆಪ್ಟೆಂಬರ್ ನಂತರ ಆರಂಭಿಸಬಹುದು. ಕರೊನಾದಿಂದ ಎಲ್ಲರೂ ಸಂಕಷ್ಟದಲ್ಲಿದ್ದು, ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ರಾಯಚೂರಿನಲ್ಲಿ ಏಮ್್ಸ ಸ್ಥಾಪನೆಗೆ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು. ಏಮ್್ಸ ಸ್ಥಾಪನೆಯಾದಲ್ಲಿ ಮಂತ್ರಾಲಯಕ್ಕೂ ಅನುಕೂಲವಾಗಲಿದೆ.
|ಶ್ರೀ ಸುಬುಧೇಂದ್ರ ತೀರ್ಥರುಪೀಠಾಧಿಪತಿ, ಮಂತ್ರಾಲಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
