|ಇಬ್ರಾಹಿಂ ಸುತಾರಪದ್ಮಶ್ರೀ ಪುರಸ್ಕೃತರು
ಪರಮಾತ್ಮರೂಪ ಪರತತ್ತ್ವವಾಗಲೀ, ಪರಮಾತ್ಮನ ಸಾಕ್ಷಾತ್ಕಾರದ ಯಾವುದೇ ಸಾಧನಗಳಾಗಲೀ ಮತ್ತು ಪರಮಾತ್ಮನ ದಿವ್ಯವಾಣಿರೂಪ ಸಂದೇಶವಾಗಲೀ ಇವು ಯಾವುದೇ ಒಂದು ಜನಾಂಗದ ಅಥವಾ ಸಂಪ್ರದಾಯದ ಸ್ವತ್ತು ಅಲ್ಲವೆಂದು ದಿಟ್ಟತನದಿಂದ ಬೋಧಿಸಿದವರು ಶಿಶುನಾಳದ ಶರೀಫ ಸಾಹೇಬರು. ಅವರು ಸರ್ವಧರ್ಮ ಸಮನ್ವಯದ ಸಾಕಾರಮೂರ್ತಿ. ಪರಮಾತ್ಮನು ದೇಶ-ಕಾಲಕ್ಕೆ ತಕ್ಕಂತೆ ಅನೇಕ ಋಷಿಮುನಿಗಳನ್ನು, ಪೀರಪೈಗಂಬರರನ್ನು, ಶರಣ ಸಂತರನ್ನು ಸಾಧನವನ್ನಾಗಿ ಮಾಡಿಕೊಂಡು ತನ್ನ ಸಂದೇಶ ಬೀರಿದಾಗ ಜನರು ಪರಮಾತ್ಮನ ಸಂದೇಶವನ್ನು ಮರೆತು ಈ ಮಹಾತ್ಮರನ್ನೆ ಮುಖ್ಯವಾಗಿಟ್ಟುಕೊಂಡಿದ್ದರಿಂದ ಜಗತ್ತಿನಲ್ಲಿ ವ್ಯಕ್ತಿ ಪೂಜೆ ಪ್ರಾರಂಭವಾಗಿ ಅನೇಕ ಧರ್ಮಗಳು, ಪಂಥಗಳು, ಮತಗಳು, ಸಂಪ್ರದಾಯಗಳು ಹುಟ್ಟಿಕೊಂಡವು. ಇದನ್ನು ಗಮನಿಸಿದ ಶರೀಫರು, ಸಮನ್ವಯದ ಸಂದೇಶ ಸಾರಿದರು. ಸೂಫಿ, ಶರಣ ಹಾಗೂ ಅದ್ವೈತ ತತ್ತ್ವದ ತ್ರಿವೇಣಿ ಸಂಗಮವಾಗಿ ಬೆಳೆದರು.
ಶರೀಫ ಸಾಹೇಬರನ್ನು ಹೀಗೆ ಬೆಳೆಸುವಲ್ಲಿ ಅವರ ತಂದೆ ಇಮಾಮ ಸಾಹೇಬರು, ತಾಯಿ ಹಜ್ಜುಮಾ ಅವರ ಪಾತ್ರ ಪ್ರಮುಖವಾದದ್ದು. ಹುಲಗೂರಿನ ಸೂಫಿ ಸಂತರಾದ ಹಜರೇಶಾ ಕಾದ್ರಿಯವರ ವರಪ್ರಸಾದದಿಂದ ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಜನಿಸಿದ ಶರೀಫರಿಗೆ ಇಮಾಮ ಸಾಹೇಬರು ಉತ್ತಮ ಸಂಸ್ಕಾರ ಕೊಡಿಸಿದರು. ಶಿಶುನಾಳದಲ್ಲಿಯೇ ಇದ್ದ ಹಿರೇಮಠದ ಸಿದ್ಧರಾಮಯ್ಯ, ಶರಣ ಸಾಹಿತ್ಯ, ಶೂನ್ಯ ಸಂಪಾದನೆ, ಪ್ರಭುಲಿಂಗಲೀಲೆ ಮೊದಲಾದ ಗ್ರಂಥಗಳನ್ನು ಸಾಮಾನ್ಯ ಜನರಿಗೂ ಮನಮುಟ್ಟುವಂತೆ ಪ್ರತಿಪಾದಿಸುತ್ತಿದ್ದರು. ಅವರ ಬಳಿ ಶರೀಫರು ಕನ್ನಡ ಕಲಿತು ವಚನ ಸಾಹಿತ್ಯವನ್ನು ಅಭ್ಯಾಸ ಮಾಡಿ ಕಳಸ ಗ್ರಾಮಕ್ಕೆ ಹೋಗಿ ಗುರು ಗೋವಿಂದಭಟ್ಟರ ಅನುಯಾಯಿಯಾದರು. ಗೋವಿಂದಭಟ್ಟರು ತಮ್ಮಲ್ಲಿರುವ ಸಕಲ ವಿದ್ಯೆಯನ್ನು ಶರೀಫರಿಗೆ ಧಾರೆ ಎರೆದರು.
ನಂತರ, ಶರೀಫರು ತತ್ತ್ವಪದಗಳನ್ನು ರಚಿಸಿ ಹಾಡತೊಡಗಿದರು. ಸಾಧಕನಿಗೆ ಅವನ ಪೂರ್ವದ ಹೀನ ಸಂಸ್ಕಾರಗಳು ಹೇಗೆ ವಿಘ್ನ ಮಾಡುತ್ತವೆ ಎಂಬುದನ್ನು ಒಂದು ರೂಪಕ ಮಾಡಿ ಹಾಡಿದರು. ಅಜ್ಞಾನಿಯಾದ ಜೀವನು ಸಂಸಾರದ ವ್ಯಾಮೋಹದಲ್ಲಿ ಮುಳುಗಿ ಅಮೂಲ್ಯವಾದ ಆಯುಷ್ಯ ಕಳೆದು, ಮುಪ್ಪಿನಾವಸ್ಥೆಯಲ್ಲಿ ಕೂಡ ಅಧ್ಯಾತ್ಮದ ಕಡೆ ಮುಖ ಮಾಡದವನನ್ನು ‘ಬಿದ್ದಿಯಬೇ ಮುದುಕಿ ಬಿದ್ದಿಯಬೇ…’ ಎಂಬ, ಈಗ ಪ್ರಸಿದ್ಧವಾಗಿರುವ, ಗೀತೆಯನ್ನು ರಚಿಸಿದರು. ಪರಮಾತ್ಮನ ಸಾಕ್ಷಾತ್ಕಾರ ಹೊರಗೆ ಎಲ್ಲಿಯೂ ಸಾಧ್ಯವಿಲ್ಲ. ಅಂತಮುಖಿಗಳಾಗಿ ದೇಹವೆಂಬ ದೇವಾಲಯದಲ್ಲಿಯೇ ಅವನನ್ನು ಕಾಣಬೇಕೆಂಬ ಸಂದೇಶ ನೀಡುತ್ತ ‘ಗುಡಿಯ ನೋಡಿರಣ್ಣ ದೇಹದ ಗುಡಿಯ ನೋಡಿರಣ್ಣ’ ಎಂದು ಹಾಡಿದರು.
ಶರೀಫ ಸಾಹೇಬರು ಅಧ್ಯಾತ್ಮ ಸಾಧನೆಯ ಜತೆಗೆ ಆಗಿನ ಕಾಲದಲ್ಲಿ ಕನ್ನಡದಲ್ಲಿ ಮುಲ್ಕಿ ಪರೀಕ್ಷೆ ಮುಗಿಸಿಕೊಂಡು ಕೆಲವು ಗ್ರಾಮಗಳಲ್ಲಿ ಶಿಕ್ಷಕರಾಗಿಯೂ ಸೇವೆ ಮಾಡಿದರು. ಇದೇ ಸಂದರ್ಭದಲ್ಲಿ ಕುಂದಗೊಳದ ಫಾತಿಮಾ ಅವರ ಜೊತೆಗೆ ಲಗ್ನವಾಗಿ ಗೃಹಸ್ಥ ಜೀವನವನ್ನು ನಡೆಸಿದರು. ಅವರ ದಾಂಪತ್ಯ ಜೀವನದ ಫಲವಾಗಿ ಒಂದು ಹೆಣ್ಣು ಮಗು ಹುಟ್ಟಿತು. ಆ ಹೆಣ್ಣು ಮಗು ಬಹಳ ಕಾಲ ಬದುಕಲಿಲ್ಲ. ಆ ಮಗುವಿನ ಚಿಂತೆಯಲ್ಲಿ ಫಾತಿಮಾ ಅವರೂ ಅನಾರೊಗ್ಯದಿಂದ ತೀರಿಕೊಂಡರು. ಜೀವನದುದ್ದಕ್ಕೂ ಈ ನಾಡಿನ ತುಂಬೆಲ್ಲ ಸಂಚರಿಸಿ, ಜನಜಾಗೃತಿಯನ್ನು ಉಂಟು ಮಾಡುತ್ತ 70 ವರ್ಷಗಳ ಕಾಲ ಬದುಕಿ 1889 ಜುಲೈ 3ರಂದು ‘ಎಲ್ಲರಿಗೂ ಹೇಳಿ ಕೇಳಿ, ಬಿಡತೇನಿ ದೇಹ ಬಿಡತೇನಿ…’ ಎಂದು ಹಾಡುತ್ತ ವಿದೇಹ ಕೈವಲ್ಯವನ್ನು ಪಡೆದ ಮಹಾನ್ ವ್ಯಕ್ತಿ ಶಿಶುನಾಳ ಶರೀಫ ಸಾಹೇಬರು. ಅವರ ದಿವ್ಯ ಸಂದೇಶ ನಮ್ಮೆಲ್ಲರಿಗೆ ದಾರಿದೀಪವಾಗಲಿ.
ಎರಡೂ ಡೋಸ್ ಲಸಿಕೆ ಪಡೆದರೆ ಕೋವಿಡ್​ನಿಂದಾಗಿ ಸಾಯದಿರುವ ಸಾಧ್ಯತೆ ಎಷ್ಟು?

ಕೋವಿಡ್​ನಿಂದಾದ ಸಾವುಗಳ ಪೈಕಿ 3ನೇ ಸ್ಥಾನದಲ್ಲಿ ಭಾರತ; ಇದುವರೆಗೆ ಸತ್ತವರ ಸಂಖ್ಯೆ 4 ಲಕ್ಷಕ್ಕೂ ಅಧಿಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + twelve =
Remember me
