|ಪ್ರಶಾಂತ ರಿಪ್ಪನ್​ಪೇಟೆ
ಭಾರತದ ಧಾರ್ವಿುಕ ಪರಂಪರೆಯಲ್ಲಿ ಜಗತ್ತಿಗೆ ಬೆಳಕನ್ನು ನೀಡುವ ಸೂರ್ಯ ದೇವನಿಗೆ ಪವಿತ್ರ ಸ್ಥಾನವಿದೆ. ಧಾರ್ವಿುಕವಾಗಿಯಷ್ಟೇ ಅಲ್ಲದೆ ವೈಜ್ಞಾನಿಕವಾಗಿ, ಖಗೋಳಶಾಸ್ತ್ರದ ಪ್ರಕಾರವೂ ಇಡೀ ಜಗತ್ತಿನ ಸರ್ವಶಕ್ತ ಸೂರ್ಯ. ಅಂತಹ ಸೂರ್ಯನು ಹುಟ್ಟಿದ ದಿನವೇ ರಥಸಪ್ತಮಿ.
ಸೂರ್ಯನು ಮಾಘಮಾಸದ ಶುಕ್ಲಪಕ್ಷದ ಸಪ್ತಮಿ ತಿಥಿಯಂದು ಅವತಾರವೆತ್ತಿದ್ದಾನೆ. ಈ ಕಾರಣದಿಂದಲೇ ಈ ದಿನವನ್ನು ರಥಸಪ್ತಮಿ ಎಂದು ವಿಶೇಷವಾಗಿ ಆಚರಿಸುವ ಪದ್ಧತಿ ಇದೆ. ಸೂರ್ಯಾರಾಧನೆ ಅತ್ಯಂತ ಪ್ರಾಚೀನ ಧಾರ್ವಿುಕ ನಂಬಿಕೆಯಾಗಿದ್ದು, ಭಾರತ ಮಾತ್ರವಲ್ಲದೆ, ಗ್ರೀಸ್, ಆಫ್ರಿಕಾ, ಏಷ್ಯಾ ಮತ್ತು ಈಜಿಪ್ಟ್ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸೂರ್ಯಾರಾಧನೆಯ ಬಗ್ಗೆ ವಿವಿಧ ರೀತಿಯ ಪರಿಕಲ್ಪನೆಗಳಿವೆ.
ಪ್ರತಿದಿನ ಉದಯ ಮತ್ತು ಅಸ್ತಗಳ ಮೂಲಕ ಜಗತ್ತಿನ ಶ್ರೇಷ್ಠ ಕರ್ತವ್ಯಶೀಲನಾಗಿ ಜಗತ್ತಿನ ಜೀವರಾಶಿಗೆ ಕರ್ತವ್ಯ ಪ್ರಜ್ಞೆಯನ್ನು ಎಚ್ಚರಿಸುವ ಸೂರ್ಯನನ್ನು ಆರಾಧಿಸುವ ಮೂಲಕ ಆರೋಗ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಋಷಿಮುನಿಗಳ ಕಾಲದಿಂದಲೂ ಇದೆ. ಸೂರ್ಯದೇವನು ವೈವಸ್ವತ ಮನ್ವಂತರದ ಆರಂಭದ ದಿನದಂದು ಸಪ್ತಾಶ್ವಗಳ ಏಕಚಕ್ರದ ರಥವನ್ನೇರಿ ಉತ್ತರ ದಿಕ್ಕಿನಲ್ಲಿ ಸಂಚಾರ ಆರಂಭಿಸುವ ದಿನವೇ ರಥಸಪ್ತಮಿ.
ಬೆಳಗಿನ ಹಾಗೂ ಸಂಜೆಯ ಸೂರ್ಯನ ಕಿರಣಗಳಿಂದ ಆರೋಗ್ಯ ವೃದ್ಧಿಯಾಗುವುದಲ್ಲದೆ ರೋಗಾಣುಗಳನ್ನು ನಾಶಪಡಿ ಸುವ ಶಕ್ತಿ ಆ ಕಿರಣಗಳಲ್ಲಿವೆ. ಆದ್ದರಿಂದ ಯಾವುದೇ ರೋಗದಿಂದ ಬಳಲುವವರು ರಥಸಪ್ತಮಿಯಂದು ಸೂರ್ಯೋಪಾಸನೆಯನ್ನು ಮಾಡುವುದರಿಂದ ಅವರು ರೋಗಮುಕ್ತರಾಗು ತ್ತಾರೆ ಎಂದು ಹಲವು ಶಾಸ್ತ್ರದಲ್ಲಿ ಹೇಳಲಾಗಿದೆ.
ಸೂರ್ಯಾರಾಧನೆಯ ಪ್ರಯೋಜನ:ಓಂ ಯೋಗ ಕೇಂದ್ರದ ಯೋಗಸಾಧಕರಾದ ವನಜಾಕ್ಷಮ್ಮ ನಾಗೇಂದ್ರಪ್ಪ ಅವರು ಹೇಳುವ ಪ್ರಕಾರ ಜಗತ್ತಿನಾದ್ಯಂತ ಎಲ್ಲರೂ ಒಪ್ಪಿಕೊಂಡಿರುವ ಯೋಗಾಸನದಲ್ಲಿ ಮೊದಲ ಪ್ರಾಶಸ್ತ್ಯನ್ನು ಸೂರ್ಯ ನಮಸ್ಕಾರಕ್ಕೆ ನೀಡಲಾಗಿದೆ. ಮನಸ್ಸು ಮತ್ತು ದೇಹ ಎರಡನ್ನೂ ಹತೋಟಿಗೆ ತರುವುದರ ಜತೆಗೆ ಉಸಿರಾಟದ ಮೇಲೆ ನಿಯಂತ್ರಣ ಸಾಧಿಸಲು ಸೂರ್ಯನಮಸ್ಕಾರ ಸಹಕಾರಿಯಾಗಿದೆ.
ರಥಸಪ್ತಮಿಯಂದು ಕನಿಷ್ಠ 108 ಸಾಮೂಹಿಕ ಸೂರ್ಯ ನಮಸ್ಕಾರ ಮಾಡುವುದರಿಂದ ಸರ್ವ ದೈಹಿಕ ತೊಂದರೆಗಳ ನಿವಾರಣೆಯ ಜೊತೆಗೆ ಜೀವನದಲ್ಲಿ ನವೋಲ್ಲಾಸ ಮೂಡುತ್ತದೆ. ರಥಸಪ್ತಮಿಯ ದಿವಸ ನಾಡಿನ ನಾನಾಕಡೆಗಳಲ್ಲಿ ಸೂರ್ಯಯಜ್ಞ ಹಾಗೂ ಸಾಮೂಹಿಕ ಸೂರ್ಯ ನಮಸ್ಕಾರ ಮಾಡುತ್ತಾರೆ. ರಥಸಪ್ತಮಿಯಂದು ಸುರ್ಯೋ ದಯಕ್ಕೆ ಸರಿಯಾಗಿ ನದಿ, ಸರೋವರ, ಸಮುದ್ರದಲ್ಲಿ ಸ್ನಾನ ಮಾಡಿ ಸೂರ್ಯದೇವನಿಗೆ ಅರ್ಘ್ಯವನ್ನು ನೀಡಿ ಆರಾಧಿಸುವುದರಿಂದ ಪೂರ್ವಜನ್ಮದ ಪಾಪಗಳು ನಾಶವಾಗಿ ಸೂರ್ಯನ ಅನುಗ್ರಹ ದೊರೆಯುತ್ತದೆ ಎಂಬ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ. ಪವಿತ್ರ ಗಾಯಿತ್ರಿ ಮಂತ್ರದ ಪ್ರತಿಯೊಂದು ಅಕ್ಷರವೂ ಸೂರ್ಯನ ಸಾಮರ್ಥ್ಯವನ್ನೇ ಕೊಂಡಾಡಿವೆ. ಜನ್ಮಕುಂಡಲಿಯಲ್ಲಿ ಯಾವುದೇ ದೋಷಗಳಿದ್ದರೂ ರಥಸಪ್ತಮಿಯಂದು ಸೂರ್ಯನ ಆರಾಧನೆ ಮಾಡುವುದರಿಂದ ಎಲ್ಲ ದೋಷಗಳು ಪರಿಹಾರವಾಗುತ್ತವೆ ಎಂಬುದು ಜ್ಯೋತಿಷ್ಯ ಶಾಸ್ತ್ರದ ನಂಬಿಕೆ ಕೂಡಾ ಆಗಿದೆ.
ಸೂರ್ಯದೇವನ ಪೌರಾಣಿಕ ಹಿನ್ನೆಲೆ:ರಥಸಪ್ತಮಿಯ ನಂತರ ಚಳಿಗಾಲ ಅಂತ್ಯಗೊಂಡು ಸೂರ್ಯನ ಪ್ರಕಾಶ ಹೆಚ್ಚುವುದರಿಂದ ಮನುಷ್ಯನಿಗೆ ಚೈತನ್ಯ ಹೆಚ್ಚಾಗುವುದರ ಜೊತೆಗೆ ಕಾರ್ಯಕ್ಷಮತೆ ವೃದ್ಧಿಯಾಗುತ್ತದೆ. ಈ ಕಾರಣಕ್ಕಾಗಿ ಸೂರ್ಯೋಪಾಸನೆಯನ್ನು ಮಾಡಿ ಆತನನ್ನು ಪೂಜಿಸುವುದರಿಂದ ಉತ್ತಮ ಆರೋಗ್ಯ ಮತ್ತು ಆಹಾರಗಳು ಲಭ್ಯವಾಗುತ್ತವೆ ಎಂದು ಸ್ಕಂದ ಮತ್ತು ವರಾಹ ಪುರಾಣಗಳಲ್ಲಿ ಉಲ್ಲೇಖಿಸಿದೆ.
ದ್ವಾಪರ ಯುಗದಲ್ಲಿ ಯಶೋವರ್ಮನೆಂಬ ರಾಜನ ಪುತ್ರನಿಗೆ ಅಂಟಿದ್ದ ರೋಗವನ್ನು ಸೂರ್ಯಾರಾಧನೆಯಿಂದ ಗುಣಪಡಿಸಲಾಗಿತ್ತು ಎಂಬ ಕತೆ ಮಹಾಭಾರತದಲ್ಲಿ ಬರುತ್ತದೆ. ಕೃಷ್ಣನ ಆದೇಶದಂತೆ ಪಾಂಡವರು ರಥಸಪ್ತಮಿ ವ್ರತವನ್ನಾಚರಿಸಿ ಸೂರ್ಯನಿಂದ ಅಕ್ಷಯ ಪಾತ್ರೆಯನ್ನು ಪಡೆದರೆಂಬ ಉಲ್ಲೇಖ ಸಹ ಮಹಾಭಾರತದಲ್ಲಿದೆ.
ತ್ರೇತಾಯುಗದಲ್ಲಿ ಶ್ರೀರಾಮನು ಆದಿತ್ಯಹೃದಯ ವ್ರತವನ್ನು ಮಾಡಿ ಸೂರ್ಯನನ್ನು ಸಂತುಷ್ಠಗೊಳಿಸಿ ಶಕ್ತಿ ಸಂಪಾದಿಸಿಕೊಂಡು ರಾವಣನನ್ನು ಸಂಹಾರ ಮಾಡಿದನೆಂಬ ಬಗ್ಗೆ ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ಸೂರ್ಯಾರಾಧನೆ ಮೂಲಕ ಶಮಂತಕ ಮಣಿಯನ್ನು ಪಡೆದ ಸತ್ರಾಜಿತ ಕತೆಯು ಹರಿವಂಶದಲ್ಲಿ ಕಂಡು ಬರುತ್ತದೆ. ಮಯೂರನೆಂಬ ಕವಿಯು ಸೂರ್ಯ ಶತಕ ಎಂಬ ಗ್ರಂಥವನ್ನು ಬರೆದು ಕಳೆದುಕೊಂಡಿದ್ದ ಕಣ್ಣನ್ನು ಮರಳಿ ಪಡೆದಿದ್ದ ಎಂಬ ಉಲ್ಲೇಖ ಪುರಾಣಗಳಲ್ಲಿದೆ. ಇಂತಹ ಸೂರ್ಯ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೈವ. ದೇಶದಲ್ಲಿ ಸೂರ್ಯನ ದೇವಾಲಯ ಎಂದ ತಕ್ಷಣ ನೆನಪಿಗೆ ಬರುವುದು ಕೊನಾರ್ಕ್. ಈ ದೇವಾಲಯಕ್ಕೆ ಜಗತ್ತಿನ ವಿವಿಧೆಡೆಯ ಪ್ರವಾಸಿಗರು ಆಗಮಿಸುತ್ತಾರೆ. ರಥಸಪ್ತಮಿಯಂದು ಇಲ್ಲಿ ಭಕ್ತರ ದಂಡೇ ಹರಿದು ಬರುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + sixteen =
Remember me
