|ಮಂಡಗದ್ದೆ ಪ್ರಕಾಶ್​ಬಾಬು ಕೆ.ಆರ್.
‘ಯುಗಾದಿ’ ಎಂಬ ಪದ ಸಂಸ್ಕೃತದ ‘ಯುಗ’ ಮತ್ತು ‘ಆದಿ’ ಎಂಬ ಎರಡು ಪದಗಳಿಂದ ಕೂಡಿದೆ. ಯುಗಾದಿ ಕೃತಯುಗದ ಚೈತ್ರ ಶುದ್ಧ ಪಾಡ್ಯದಂದು ಸೃಷ್ಟಿಯ ಕಾರ್ಯವನ್ನು ಬ್ರಹ್ಮನು ಆರಂಭಿಸಿದ್ದಲ್ಲದೆ, ವರ್ಷ, ಋತುಗಳು, ಮಾಸಗಳು, ಗ್ರಹಗಳು, ನಕ್ಷತ್ರಗಳನ್ನು ಸೃಷ್ಟಿಸಿದನೆಂಬ ನಂಬಿಕೆ ಸಹ ಇದೆ. ಯುಗಾದಿಯಲ್ಲಿ ಎರಡು ವಿಧ – ಚಾಂದ್ರಮಾನ ಹಾಗೂ ಸೌರಮಾನ.
ಚಾಂದ್ರಮಾನ ಯುಗಾದಿ ಎಂದರೆ ಹುಣ್ಣಿಮೆ ದಿನ ಚಂದ್ರನು ಯಾವ ನಕ್ಷತ್ರದಲ್ಲಿ ಇರುವನೋ ಆ ನಕ್ಷತ್ರದ ಹೆಸರಿನಿಂದ ಆ ಮಾಸ ಆರಂಭವಾಗುತ್ತದೆ. ಉದಾಹರಣೆಗೆ ಚಿತ್ತ್ತಾ ನಕ್ಷತ್ರ ಹುಣ್ಣಿಮೆ ದಿನ ಇದ್ದರೆ ಚೈತ್ರಮಾಸ ಆರಂಭ. ವಿಶಾಖ ನಕ್ಷತ್ರ ಬಂದರೆ ವೈಶಾಖ ಮಾಸ, ಜ್ಯೇಷ್ಠ ನಕ್ಷತ್ರ- ಜ್ಯೇಷ್ಠಮಾಸ, ಪೂರ್ವಾಷಾಢ ನಕ್ಷತ್ರ- ಆಷಾಢಮಾಸ, ಶ್ರವಣ ನಕ್ಷತ್ರ-ಶ್ರಾವಣಮಾಸ, ಪೂರ್ವಭಾದ್ರ ನಕ್ಷತ್ರ- ಭಾದ್ರಪದ ಮಾಸ, ಅಶ್ವಿನಿ ನಕ್ಷತ್ರ- ಆಶ್ವೀಜಮಾಸ, ಪುಷ್ಯ ನಕ್ಷತ್ರ- ಪೌಷಮಾಸ, ಮಖ ನಕ್ಷತ್ರ- ಮಾಘಮಾಸ, ಪುಬ್ಬಾ ನಕ್ಷತ್ರ- ಫಾಲ್ಗುಣಮಾಸ ಹೀಗೆ. ಎಲ್ಲವೂ ಚಂದ್ರ ಗ್ರಹದಿಂದ ಲೆಕ್ಕಾಚಾರ ಮಾಡುವುದರಿಂದ ಇದನ್ನು ಚಾಂದ್ರಮಾನ ಯುಗಾದಿ ಎನ್ನುತ್ತಾರೆ. ಇದಕ್ಕೆ ಅನುಗುಣವಾಗಿ ಪಂಚಾಂಗವನ್ನು ತಯಾರಿಸುತ್ತಾರೆ. ಚಾಂದ್ರಮಾನ ಯುಗಾದಿ ಹೆಚ್ಚಾಗಿ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರದಲ್ಲಿ ಆಚರಣೆಯಲ್ಲಿದೆ.
ಸೌರಮಾನ ಯುಗಾದಿ:ರವಿಗ್ರಹವು ಒಂದು ಕ್ರಾಂತಿಯಿಂದ ಮತ್ತೊಂದು ಕ್ರಾಂತಿಯವರೆಗೆ ಭ್ರಮಣ ಮಾಡಲು ಹತ್ತುವ ಕಾಲಕ್ಕೆ ಒಂದು ಮಾಸ ಎನ್ನುವರು. ಅಂದರೆ ರವಿ ಅಮಾವಾಸ್ಯೆ ದಿನ ಮೇಷರಾಶಿಯಲ್ಲಿದ್ದರೆ ಆ ಮಾಸವನ್ನು ಚೈತ್ರಮಾಸ ಎನ್ನುವರು. ವೃಷಭ ರಾಶಿಗೆ ರವಿ ಬಂದರೆ ವೈಶಾಖ ಮಾಸ ಎನ್ನುವರು, ಮಿಥುನಕ್ಕೆ- ಜೇಷ್ಠಮಾಸ, ಕಟಕಕ್ಕೆ- ಆಷಾಢ ಮಾಸ, ಸಿಂಹಕ್ಕೆ- ಶ್ರಾವಣ ಮಾಸ, ಕನ್ಯಾ- ಆಶ್ವೀಜ ಮಾಸ, ವೃಶ್ಚಿಕಕ್ಕೆ- ಕಾರ್ತೀಕ ಮಾಸ, ಧನಸ್ಸಿಗೆ- ಮಾರ್ಗಶಿರ ಮಾಸ, ಮಕರಕ್ಕೆ- ಪುಷ್ಯಮಾಸ, ಕುಂಭಕ್ಕೆ- ಮಾಘಮಾಸ, ಮೀನ- ಫಾಲ್ಗುಣ ಮಾಸ ಎನ್ನುವರು. ಹೀಗೆ ಸೌರಮಾನದಲ್ಲಿ ಹನ್ನೆರಡು ಮಾಸಗಳು ಬರುತ್ತವೆ. ಸೌರಮಾನ ಯುಗಾದಿಗೂ ಚಾಂದ್ರಮಾನ ಯುಗಾದಿಗೂ ಕೆಲವು ದಿನಗಳ ಅಂತರ ಇರುತ್ತದೆ. ಈ ಸೌರಮಾನ ಯುಗಾದಿಯು ಹೆಚ್ಚಾಗಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಚರಣೆಯಲ್ಲಿದೆ. ಉಳಿದಂತೆ ಚೆನ್ನೈ ಮತ್ತು ಕೊಲ್ಕತ್ತಾದಲ್ಲಿ ಬಳಕೆಯಲ್ಲಿದೆ.
ಚಾಂದ್ರಮಾನ ಯುಗಾದಿಯಲ್ಲಿ ಬೇವು ಬೆಲ್ಲವನ್ನು ಸ್ವೀಕರಿಸಿ ಹಬ್ಬವನ್ನು ಆಚರಿಸಿದರೆ, ಸೌರಮಾನ ಯುಗಾದಿಯಲ್ಲಿ ಪ್ರಕೃತಿ ಪೂಜೆಗೆ ವಿಶೇಷ ಒತ್ತು ಕೊಟ್ಟಿರುತ್ತಾರೆ. ತಮ್ಮ ಕೃಷಿಭೂಮಿಯಲ್ಲಿ ಬೆಳೆದ ಫಲಗಳನ್ನಿಟ್ಟು ಪೂಜಿಸಿ ಸಂಪದ್ಭರಿತ, ಕೃಷಿ ಸುಖಜೀವನ, ಸಮೃದ್ಧಿ, ಆರೋಗ್ಯ, ಐಶ್ವರ್ಯ, ನೆಮ್ಮದಿ ಉಂಟಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಮನೆಯಲ್ಲಿಯೇ ಬೆಳೆದ ತರಕಾರಿ, ಹಣ್ಣುಗಳು, ಧಾನ್ಯಗಳನ್ನು, ಆಭರಣಗಳು, ಹೊಸ ವಸ್ತ್ರಗಳು, ತೆಂಗಿನಕಾಯಿ, ಕನ್ನಡಿ, ಕುಂಕುಮ-ಅರಿಶಿನವನ್ನು ಸೌರಮಾನ ಯುಗಾದಿಯ ಹಿಂದಿನ ದಿನ ದೇವರ ಮನೆಯಲ್ಲಿಟ್ಟು ಮಾರನೆ ದಿನ ಬೆಳಗ್ಗೆ ಎದ್ದ ಕೂಡಲೇ ದೇವರಿಗೆ ದೀಪ ಹಚ್ಚಿ, ಅಲ್ಲಿ ಇರುವ ವಸ್ತುಗಳನ್ನು ನೋಡಬೇಕು. ಕನ್ನಡಿಯಲ್ಲಿ ಮುಖವನ್ನು ನೋಡಿ ಪ್ರತಿಯೊಬ್ಬರೂ ಕುಂಕುಮವನ್ನು ಹಚ್ಚಿಕೊಂಡು ಹಿರಿಯರ ಆಶೀರ್ವಾದ ಪಡೆದು ನಂತರ ಸ್ನಾನ ಮಾಡಿ ಹೊಸ ಬಟ್ಟೆಯನ್ನು ಧರಿಸುವ ರೂಢಿ ಇದೆ. ನಂತರ ಆ ವರ್ಷದ ‘ಪಂಚಾಂಗ ಶ್ರವಣ’ ನಡೆಯುವುದು. ದೇವರಿಗೆ ವಿಶೇಷ ಪೂಜೆ ಸಹ ಸಲ್ಲಿಸುವರು. ಈ ಹಬ್ಬವನ್ನು ‘ವಿಷು ಹಬ್ಬ’ ಎನ್ನುವರು. ಈ ಸೌರಮಾನ ಯುಗಾದಿಯನ್ನು ವಿವಿಧ ಹೆಸರುಗಳಿಂದ ಕರೆಯುವರು. ಕೇರಳದಲ್ಲಿ ‘ವಿಷು’, ತಮಿಳುನಾಡಿನಲ್ಲಿ ‘ಉತ್ತಾಂಡ್’, ಪಂಜಾಬ್​ನಲ್ಲಿ ‘ಬೈಶಾಕಿ’ ಎನ್ನುತ್ತಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three + 14 =
Remember me
