|ಚಂದ್ರಶೇಖರ ಗಂಧನಹಳ್ಳಿ
ವಿಶ್ವಕರ್ಮರು ಈ ಪ್ರಪಂಚವನ್ನು, ಎಲ್ಲಾ ದೇವರುಗಳನ್ನು, ಜೀವಿಗಳನ್ನು ಸೃಷ್ಟಿಸಿ ಅವುಗಳೊಳಗೆ ಪ್ರವೇಶಿಸಿ ಕರ್ಮಚೈತನ್ಯವಾಗಿ ಉಳಿದರು. ಸೂರ್ಯಚಂದ್ರರ ತಿರುಗಾಟ, ಗಾಳಿಯ ಸಂಚಾರ, ಗಿಡಮರ ಬೆಳೆಯುವುದು, ನಮ್ಮ ಉಸಿರಾಟ ಈ ಎಲ್ಲವನ್ನು ಕರ್ಮ ಎನ್ನುವರು. ಈ ಪ್ರಪಂಚದ ಶಕ್ತಿಚೈತನ್ಯವೇ ಕರ್ಮ. ಕರ್ಮವಿಲ್ಲದಲ್ಲಿ ಜೀವ, ಚೈತನ್ಯವಿಲ್ಲ. ಪ್ರಪಂಚದ ತಂದೆ ವಿಶ್ವಕರ್ಮ ಎಲ್ಲ ದೇವರುಗಳನ್ನು ಸೃಷ್ಟಿಸಿ ಅವರಿಗೆಲ್ಲ ಹೆಸರಿಟ್ಟವರು.
ಭಗವಾನ್ ವಿಶ್ವಕರ್ಮರು ಬ್ರಹ್ಮನನ್ನು ಸೃಷ್ಟಿಸಿ, ಆತನಿಗೆ ಜೀವಿಗಳನ್ನು ಸೃಷ್ಟಿಸುವ ವರ ನೀಡಿದರು. ಇದರಿಂದಾಗಿ ಬ್ರಹ್ಮನು 84 ಲಕ್ಷ ಯೋನಿಗಳನ್ನು ಸೃಷ್ಟಿಸಿದನು ಎಂದು ಪುರಾಣಗಳು ಹೇಳುತ್ತವೆ. ನಂತರ ವಿಶ್ವಕರ್ಮರು ವಿಷ್ಣುವನ್ನು ಸೃಷ್ಟಿಸಿ, ಪ್ರಪಂಚದಲ್ಲಿ ಜನಿಸಿದ ಎಲ್ಲಾ ಜೀವಿಗಳನ್ನು ರಕ್ಷಿಸುವ ಮತ್ತು ಪೋಷಿಸುವ ಕೆಲಸ ಒಪ್ಪಿಸಿದರು. ಸೃಷ್ಟಿಯ ನಂತರ ಅವುಗಳ ವಿನಾಶಕ್ಕಾಗಿ ಬೋಲೆನಾಥ್ (ಶಿವ)ನನ್ನು ಸೃಷ್ಟಿಸಿದರು. ನಾವು ವೇದಗಳ ಕಾಲದಿಂದ ಇತಿಹಾಸ ಮತ್ತು ಪುರಾಣಗಳ ಕಾಲಕ್ಕೆ ಬಂದರೆ ವಿಶ್ವಕರ್ಮರನ್ನು ದೇವತೆಗಳ ಸ್ಥಪತಿ ಎಂದು ವರ್ಣಿಸಿರುವುದನ್ನು ತಿಳಿ ಯುತ್ತೇವೆ.
ರಾಮಾಯಣಕಥಾನಕದಲ್ಲಿ ವಿಶ್ವಕರ್ಮರು:ರಾಕ್ಷಸರಿಗಾಗಿ ಲಂಕಾ ಪಟ್ಟಣ ನಿರ್ವಿುಸಿಕೊಟ್ಟ ರೆಂದು, ಭಾರತದಿಂದ ಲಂಕೆಗೆ(ಸಿಂಹದ್ವೀಪಕ್ಕೆ) ರಾಮಸೇತು ನಿರ್ಮಾಣ ಕ್ಕಾಗಿ ನಳನೆಂಬ ವಾನರನನ್ನು ಸೃಷ್ಟಿಸಿದರೆಂದೂ ಉಲ್ಲೇಖವಿದೆ. ಮಹಾಭಾರತ ಕಥಾನಕದಲ್ಲಿ ಕಲೆಗಳ ಚಕ್ರವರ್ತಿ, ದ್ವಾರಕಾನಗರ ನಿರ್ವತೃ ವಿಶ್ವಕರ್ಮರೆಂದು ಉಲ್ಲೇಖಿಸಲಾಗಿದೆ. ಹೀಗೆ ವೇದಗಳು, ಪುರಾಣಗಳು, ಮಹಾಗ್ರಂಥಗಳಲ್ಲಿ ವಿಶ್ವಕರ್ಮ ರನ್ನು ದೇವರುಗಳ ದೇವರು, ಬ್ರಹ್ಮಾಂಡದ ಸೃಷ್ಟಿಕರ್ತ, ಕಲೆ, ವಾಸ್ತುಶಿಲ್ಪ, ವಿಜ್ಞಾನದ ಸೃಷ್ಟಿಕರ್ತರೆಂದು ವರ್ಣಿಸಲಾಗಿದೆ. ಹಿಂದು ಪುರಾಣಗಳ ಪ್ರಕಾರ ವಿಶ್ವಕರ್ಮರು ಬ್ರಹ್ಮಾಂಡ ಸೃಷ್ಟಿಸಿದ ನಂತರ, ಸೃಷ್ಟಿಯ ನಿರ್ವಹಣೆ ಅಂದರೆ, ಮಾನವನ ಜೀವನ ನಿರ್ವಹಣೆಗೆ ಅತ್ಯವಶ್ಯಕವಾಗಿ ಬೇಕಾಗಿರುವ ವಸ್ತುಗಳ ತಯಾರಿಕೆಗಾಗಿ ಮನು, ಮಾಯಾ, ತ್ವಷ್ಟ್ಯ, ಶಿಲ್ಪಿ ಮತ್ತು ದೇವಜ್ಞ ಎಂಬ ದೈವಪುರುಷರನ್ನು ಸೃಷ್ಟಿಸಿದರು. ಈ ಐವರೂ ಕರಕುಶಲ ಪ್ರವೀಣರಾಗಿದ್ದು, ಕ್ರಮವಾಗಿ ಕಬ್ಬಿಣ ಕೆಲಸ ನಿರ್ವಹಿಸುವ ಕಮ್ಮಾರ, ಮರ ಕೆಲಸ ನಿರ್ವಹಿಸುವ ಬಡಗಿ, ತಾಮ್ರ ಕೆಲಸ ನಿರ್ವಹಿಸುವ ತ್ವಷ್ಟ್ಯ, ಕಲ್ಲು ಕೆತ್ತನೆ ಕೆಲಸ ನಿರ್ವಹಿಸುವ ಶಿಲ್ಪಿ ಮತ್ತು ಚಿನ್ನ ಮತ್ತು ಬೆಳ್ಳಿ ಆಭರಣ ತಯಾರಿಕೆಯಲ್ಲಿ ದೇವಜ್ಞ ಪ್ರವೀಣರಾಗಿದ್ದು, ಈ ವಂಶವು ಬೆಳೆದಂತೆ ಮುಂದೆ ಈ ಐದೂ ವೃತ್ತಿಗಳೂ ವಿಶ್ವಕರ್ಮ ಸಮುದಾಯದ ಉಪಪಂಗಡವಾಗಿ ಗುರುತಿಸಿಕೊಂಡಿವೆ.
ವಿಶ್ವಕರ್ಮ ಸಮುದಾಯವು ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿದ್ದು, ವಿವಿಧ ಉದ್ಯೋಗಗಳಲ್ಲಿ ತೊಡಗಿಸಿ ಕೊಂಡಿದೆ. ಭಾರತದ ಇತಿಹಾಸದಲ್ಲಿ ವಿಶ್ವಕರ್ಮರು ತಮ್ಮ ಸೃಜನಶೀಲ ಕೆಲಸಕ್ಕೆ ಹೆಸರುವಾಸಿಯಾಗಿದ್ದು, ಕಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ವಿಶ್ವಕರ್ಮ ಸಮುದಾಯವು ಸಾಂಪ್ರದಾಯಿಕ ಕರಕುಶಲ ವೃತ್ತಿಯನ್ನೇ ಇಂದಿಗೂ ಹೆಚ್ಚಾಗಿ ಅವಲಂಬಿಸಿದೆ. ತಾಂತ್ರಿಕತೆ ಬೆಳೆದಂತೆ ವಿಶ್ವಕರ್ಮರು ತಮ್ಮ ವೃತ್ತಿ ನೈಪುಣ್ಯತೆಯಲ್ಲಿ ಸಾಕಷ್ಟು ಬದಲಾವಣೆ ಕಂಡುಕೊಳ್ಳುತ್ತಿದ್ದರೂ ಕೈಗಾರೀಕರಣ ಮತ್ತು ಜಾಗತೀಕರಣದ ಪ್ರಭಾವ ವಿಶ್ವಕರ್ಮರ ಸಾಂಪ್ರದಾಯಿಕ ವೃತ್ತಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೈಚಳಕದಿಂದಲೇ ಅದ್ಭುತ ಕರಕುಶಲಗಳನ್ನು ಮಾಡುತ್ತಿದ್ದ ವಿಶ್ವಕರ್ಮರು, ಇಂದು ತಮ್ಮ ವೃತ್ತಿ ನಿರ್ವಹಣೆಯಲ್ಲಿ ಯಂತ್ರೋಪಕರಣಗಳನ್ನು ಬಲವಂತವಾಗಿ ಬಳಸುವಂತಾಗಿದೆ. ಶಿಲ್ಪಾಚಾರ್ಯರ ಇತಿಹಾಸ ಕನ್ನಡ ಸಾಹಿತ್ಯಕ್ಕೂ ಪ್ರಾಚೀನವಾದುದು. ಇದು ಶಾಸನಗಳಿಂದ ಬೆಳಕಿಗೆ ಬಂದಿದೆ. ಕ್ರಿಸ್ತ ಶಕ 3-4ನೇ ಶತಮಾನದಿಂದ ಕನ್ನಡ ಸಾಹಿತ್ಯದ ಯುಗ ಆರಂಭವಾದರೆ ಇದಕ್ಕೂ ಹಿಂದಿನ ಶತಮಾನಗಳಲ್ಲೇ ಕನ್ನಡಿಗ ಶಿಲ್ಪಿಗಳು ರಾಜ್ಯ, ಹೊರ ರಾಜ್ಯದಲ್ಲಿ ತಮ್ಮ ಕಲಾ ಚತುರತೆ ತೋರಿರುವುದು ಅನೇಕ ಶಾಸನಗಳಿಂದ ಬೆಳಕಿಗೆ ಬರುತ್ತದೆ. ಭೋಜ, ನಾಡೋಜ, ಆಚಾರಿ, ಕಲ್ಲುಕುಟಿಕ, ಸೂತ್ರಧಾರಿ, ರೂವಾರಿ, ವಾಸ್ತುಶಿಲ್ಪಿ ಹೆಸರುಗಳು ಅನೇಕ ದೇವಾಲಯಗಳಲ್ಲಿ ಸಿಕ್ಕಿರುವ ಶಾಸನಗಳಲ್ಲಿ ಕೆತ್ತಲ್ಪಟ್ಟಿದೆ. ರಾಜಾಶ್ರಯದಲ್ಲಿದ್ದ ಶಿಲ್ಪಕಲೆಗೆ ಹಿಂದೆ ಹೆಚ್ಚಿನ ಮನ್ನಣೆ ಇದ್ದುದು ಚರಿತ್ರೆಯಿಂದ ತಿಳಿದುಬರುತ್ತದೆ. ಕರ್ನಾಟಕದ ಶಿಲ್ಪಕಲಾಚಾರ್ಯರ ಅಧ್ಯಯನಕ್ಕೂ ವಿಶ್ವಕರ್ಮ ಜನಾಂಗದ ಕಲೆ-ಸಂಸ್ಕೃತಿಗೂ ಸಂಬಂಧವಿದ್ದು, ಶಿಲ್ಪಕಲೆಯ ಅಧ್ಯಯನವನ್ನು ಜನಾಂಗವನ್ನು ಹೊರತುಪಡಿಸಿ ಮಾಡಲು ಸಾಧ್ಯವಿಲ್ಲ.
ಕನ್ನಡಿಗರನ್ನು ಕೆರಳಿಸುತ್ತಿರುವ ಮರಾಠಿ ‘ಬಾಯ್ಸ್​’; ಸಿನಿಮಾವನ್ನೇ ನಿಷೇಧಿಸುವಂತೆ ಎದ್ದಿದೆ ವಾಯ್ಸ್​..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine + eight =
Remember me
