| ಬಸವರಾಜ ಶಿವಪ್ಪ ಗಿರಗಾಂವಿ2019ರಿಂದ ಜಾಗತಿಕವಾಗಿ ವಿಶ್ವ ಹತ್ತಿ ದಿನ ಎಂದು ಆಚರಿಸಲಾಗುತ್ತಿದೆ. ವಿಶ್ವ ವಾಣಿಜ್ಯ ಸಂಸ್ಥೆಯು 2009 ಅಕ್ಟೋಬರ್ 7ರಂದು ವಿಶ್ವ ಹತ್ತಿ ದಿನವನ್ನು ಆಚರಿಸಲು ವಿಶ್ವ ಸಂಸ್ಥೆಗೆ ಪ್ರಸ್ತಾಪ ಮಾಡಿತು. ನಂತರದಲ್ಲಿ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ವಿಶ್ವ ಸಂಸ್ಥೆಯು ಹತ್ತಿಯಿಂದಾಗುವ ಆರೋಗ್ಯಕರ ಬಳಕೆಯನ್ನು ಮನಗಂಡು 2021ರ ಸಾಮಾನ್ಯಸಭೆಯಲ್ಲಿ ಅಂಗೀಕರಿಸುವ ಮೂಲಕ ಪ್ರತಿವರ್ಷ ಅಕ್ಟೋಬರ್ 7ನೆಯ ದಿನಾಂಕವನ್ನು ಅಧಿಕೃತವಾಗಿ ವಿಶ್ವ ಹತ್ತಿ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿತು. ಹತ್ತಿಯು ಅರಿವೆಯಾಗಿ ಮಾತ್ರ ಉಪಯೋಗವಾಗದೆ, ಆಹಾರವಾಗಿಯೂ ಮನುಕುಲದ ಅವಶ್ಯಕತೆಯನ್ನು ಪೂರೈಸುತ್ತಿರುವುದು ವಿಶೇಷ.
ಪ್ರಸ್ತುತ ವಿಶ್ವದಾದ್ಯಂತ ಅಂದಾಜು 80 ದೇಶಗಳಲ್ಲಿ 10 ಕೋಟಿ ಕುಟುಂಬಗಳು ಹತ್ತಿಯಿಂದ ನೇರವಾದ ಪ್ರಯೋಜನ ಪಡೆಯುತ್ತಿವೆ. ಇದರಲ್ಲಿ ಕನಿಷ್ಠ ಅರ್ಧದಷ್ಟು ಮಹಿಳೆಯರು ಇರುವುದು ವಿಶೇಷ. ಹತ್ತಿಯು ಬಡವ-ಬಲ್ಲಿದರೆನ್ನದೆ ಸಮಾಜದಲ್ಲಿನ ಪ್ರತಿಯೊಬ್ಬರಿಗೆ ಮರ್ಯಾದೆಯಿಂದ, ಆರೋಗ್ಯದಾಯಕವಾಗಿ ಹಾಗೂ ಆರಾಮದಾಯಕವಾಗಿ ಬದುಕಲು ಬಹಳ ಅವಶ್ಯವಿದೆ. ಅದರಂತೆ ವಿಶ್ವ ಸಂಸ್ಥೆಯ ಪ್ರಮುಖ ವ್ಯಾಪಾರಿ ಅಂಗಸಂಸ್ಥೆಗಳಾದ ಅಂತಾರಾಷ್ಟ್ರೀಯ ವ್ಯಾಪಾರ ಕೇಂದ್ರ (ಐಟಿಸಿ) ಹಾಗೂ ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಸಹ ಹತ್ತಿಯ ಉತ್ಪಾದನೆ, ವ್ಯಾಪಾರ ಉತ್ತೇಜಿಸಲು ಹಾಗೂ ಸ್ಥಳೀಯ ಸಂಸ್ಕರಣಾ ಸಾಮರ್ಥ್ಯವನ್ನು ಸುಧಾರಿಸಲು ಆಫ್ರಿಕಾದಲ್ಲಿ ಕಾಟನ್-4 ಎಂದು ಕರೆಯಲ್ಪಡುವ ಹತ್ತಿ ಬೆಳೆಯುವ ದೇಶಗಳಾದ ಬೆನಿನ್, ರ್ಬುನಾ ಫಾಸೋ, ಚಾಡ್ ಹಾಗೂ ಮಾಲಿಗೆ ವಿಶೇಷ ಸಹಕಾರ ಕಲ್ಪಿಸಿವೆ.
ಒಂದು ಅಂದಾಜಿನ ಪ್ರಕಾರ ಒಂದು ಟನ್ ಹತ್ತಿಯು ಸರಾಸರಿ 5 ಜನರಿಗೆ ಉದ್ಯೋಗ ಒದಗಿಸುತ್ತದೆ. ವಿಶ್ವದ ಒಟ್ಟು ಹತ್ತಿ ಉತ್ಪಾದನೆಯ 80ರಷ್ಟನ್ನು ಉಡುಪುಗಳಿಗಾಗಿ ಬಳಸಲಾಗುತ್ತಿದೆ. ಶೇ. 15ರಷ್ಟು ಗೃಹೋಪಯೋಗಿ ಹಾಗೂ ಶೇ. 5ರಷ್ಟು ಇತರೆ ಕಾರಣಕ್ಕಾಗಿ ಉಪಯೋಗಿಸಲ್ಪಡುತ್ತಿದೆ. ವಿಶ್ವದ ಕೃಷಿಯಲ್ಲಿನ ಶೇ. 3ರಷ್ಟು ಪ್ರದೇಶವನ್ನು ಹತ್ತಿ ಆಕ್ರಮಿಸಿಕೊಂಡಿದೆ. ಒಂದು ಟನ್ ಹತ್ತಿ ಬೀಜದಿಂದ ಅಂದಾಜು 320 ಪೌಂಡುಗಳಷ್ಟು ಎಣ್ಣೆಯನ್ನು ಉತ್ಪಾದಿಸಲಾಗುತ್ತದೆ. ಇದನ್ನು ಅಡುಗೆ, ಸೌಂದರ್ಯವರ್ಧಕಗಳು, ಸಾಬೂನು ಹಾಗೂ ಪಶು ಆಹಾರವಾಗಿ ಬಳಸಲಾಗುತ್ತಿದೆ. ಪ್ರಪಂಚದಲ್ಲಿಯೇ ಚೀನಾ, ಭಾರತ, ಅಮೆರಿಕ, ಬ್ರೆಜಿಲ್ ಹಾಗೂ ಪಾಕಿಸ್ತಾನ ದೇಶಗಳು ಅತಿಹೆಚ್ಚು ಹತ್ತಿ ಬೆಳೆಯುವ ದೇಶಗಳಾಗಿವೆ.
ಹತ್ತಿಯಿಂದ ತಯಾರಿಸಲಾದ ಯಾವುದೇ ಬಟ್ಟೆಯು ಮಾನವನ ಶರೀರಕ್ಕೆ ಅತ್ಯಂತ ಮೃದು ಹಾಗೂ ಹಿತಕರವಾದ ಅನುಭವ ನೀಡುತ್ತದೆ. ಹತ್ತಿ ಬಟ್ಟೆಗಳು ಯಾವುದೇ ಬಣ್ಣದಲ್ಲಿದ್ದರೂ ಸಮಾಜದಲ್ಲಿ ಒಂದು ಗೌರವದ ಪ್ರತೀಕವಾಗಿ ಗುರುತಿಸಲ್ಪಡುತ್ತವೆ.
ಉತ್ಪಾದನೆ ಕುಂಠಿತ:ಸದ್ಯ ಯೂಕ್ರೇನ್ ಯುದ್ಧ ಹಾಗೂ ಹತ್ತಿ ಬಟ್ಟೆಯ ಬಳಕೆಯಿಂದಾಗುವ ಆರೋಗ್ಯದಾಯಕ ಕ್ರಮಗಳ ಪರಿಣಾಮದಿಂದ ಹತ್ತಿಗೆ ಉತ್ತಮ ಬೆಲೆ ಬಂದಿದೆ. ಆದರೆ, ದೇಶಾದ್ಯಂತ ಮಳೆ ಕೊರತೆಯ ಪರಿಣಾಮವಾಗಿ 2023-24ನೇ ಹಂಗಾಮಿನಲ್ಲಿ ಹತ್ತಿ ಉತ್ಪಾದನೆಯು ಕುಂಠಿತವಾಗಬಹುದೆಂದು ನಿರೀಕ್ಷಿಸಲಾಗಿದೆ.
ಮುಂಚೂಣಿಯಲ್ಲಿ ಭಾರತ:ಬಿಳಿ ಬಂಗಾರ ಎಂದು ಕರೆಯಲ್ಪಡುವ ಹತ್ತಿಯನ್ನು ಭಾರತವು ವಿಶ್ವದ ಬೇಡಿಕೆಯ ಶೇ. 25ರಷ್ಟು ಪಾಲನ್ನು ಪೂರೈಸುತ್ತಿದೆ. ಅದರಂತೆ ವಿಶ್ವ ಮಟ್ಟದಲ್ಲಿ ಅತಿಹೆಚ್ಚು ಸ್ವದೇಶಿ ಬೇಡಿಕೆಯನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತವು 2ನೆಯ ಸ್ಥಾನದಲ್ಲಿದೆ. ಭಾರತದಲ್ಲಿ ಅಂದಾಜು 5 ಕೋಟಿ ಜನರು ಪರೋಕ್ಷ ಹಾಗೂ ಅಪರೋಕ್ಷವಾಗಿ ಈ ಹತ್ತಿಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಭಾರತ ದೇಶದಲ್ಲಿ ಮಹಾರಾಷ್ಟ್ರ ರಾಜ್ಯವು ಹತ್ತಿ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ.
ತೆರಿಗೆ ವಿನಾಯಿತಿಗೆ ಬೇಡಿಕೆ:ಹತ್ತಿ ಬೇಡಿಕೆಯು ವಿಶ್ವದಾದ್ಯಂತ ಹೆಚ್ಚಿದ್ದರೂ ಮಧ್ಯವರ್ತಿಗಳ ಹಾವಳಿ, ಪ್ರತಿಕೂಲ ಹವಾಮಾನ ಹಾಗೂ ಅನಿಶ್ಚಿತ ಬೆಲೆಗಳ ಪರಿಣಾಮದಿಂದ ಬೆಳೆಗಾರರು ನಷ್ಟ ಅನುಭವಿಸುತ್ತಿರುವುದು ಸುಳ್ಳೇನಲ್ಲ. ಈ ಹಿನ್ನೆಲೆಯಲ್ಲಿ ಗುಜರಾತ್ ರಾಜ್ಯದಲ್ಲಿ ಹತ್ತಿ ಬೆಳೆಗಾರರಿಗೆ ನೀಡಿದಂತೆ ತೆರಿಗೆ ವಿನಾಯಿತಿಯನ್ನು ದೇಶಾದ್ಯಂತ ವಿಸ್ತರಿಸಬೇಕೆಂಬ ಬೇಡಿಕೆ ಇದೆ. ದೇಶದಲ್ಲಿರುವ ಬಹುತೇಕ ಸ್ಪಿನ್ನಿಂಗ್ ಮಿಲ್​ಗಳು ಆಡಳಿತದಲ್ಲಿನ ಏರು-ಪೇರುಗಳಿಂದಾಗಿ ನಷ್ಟದಲ್ಲಿ ಮುಂದುವರಿದಿರುವುದು ಸುಳ್ಳೇನಲ್ಲ. ಇದಕ್ಕಾಗಿ ಸರ್ಕಾರವು ಸ್ಥಳೀಯ ಮಟ್ಟದಲ್ಲಿ ಹತ್ತಿ ಬೆಳೆಗಾರರೊಂದಿಗೆ ಸಮನ್ವಯ ಸಮಿತಿಗಳನ್ನು ರಚನೆ ಮಾಡುವ ಅಗತ್ಯತೆ ಇದೆ.
ಧಾರ್ಮಿಕ ಸಂಘರ್ಷ ತಪ್ಪಿಸಿದ ಸರ್ಕಲ್​ ಇನ್​ಸ್ಪೆಕ್ಟರ್​: ಪಿಡಿಒಗೂ ತರಾಟೆ, ವೈರಲ್ ಆಗುತ್ತಿದೆ ವಿಡಿಯೋ

ಹೊಸದೂ ಬೇಡ, ಹಳೇದೂ ಬೇಡ: ಏನಿದು ಮಹಿಳೆಯರ ಒತ್ತಾಯ?; ಮಾನಿನಿಯರು ಒಲಿಯದ ಏಕೈಕ ಭಾಗ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + fourteen =
Remember me
