ಸಾಮಾನ್ಯವಾಗಿ ಎದೆಯ ಎಡ ಭಾಗದಲ್ಲಿ ನೋವು, ಭಾರವಾದಂತೆ ಅನುಭವ, ಎದೆ ಉರಿ, ಮೈ ಬೆವರುವುದು, ನೋವಿನ ಜತೆಗೆ ಉಸಿರಾಟದ ತೊಂದರೆ ಹೃದಯಾಘಾತದ ಲಕ್ಷಣಗಳು. ಕೆಲವರಿಗೆ ಹೊಟ್ಟೆ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಂಡು ವಾಂತಿ ಆಗಬಹುದು, ಕತ್ತು ನೋವು, ಭುಜಗಳಲ್ಲಿ ನೋವು, ಬೆನ್ನಿನ ಮೇಲ್ಭಾಗದಲ್ಲಿ ನೋವು ಬರಬಹುದು. ನೋವಿನ ಜತೆಗೆ ಕಣ್ಣು ಕತ್ತಲೆ, ಭಯ ಹಾಗೂ ಆಂತಕ ಉಂಟಾಗಬಹುದು. ಈ ರೀತಿ ಆದಲ್ಲಿ ತಡ ಮಾಡದೆ, ಹತ್ತಿರದ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯಬೇಕು. ಕೂಡಲೇ ಆಸ್ಪಿರಿನ್ ಮಾತ್ರೆ ಸೇವಿಸಬೇಕು. ಇಲ್ಲವೆ ನೈಟ್ರೇಟ್ ಮಾತ್ರೆ ನಾಲಿಗೆ ಕೆಳಗೆ ಇಟ್ಟುಕೊಳ್ಳಬೇಕು. ಕೆಲ ಸಂದರ್ಭದಲ್ಲಿ ರೋಗಿಗೆ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ, ಉಸಿರಾಟ ಹಾಗೂ ಹೃದಯ ಬಡಿತ ನಿಂತರೆ ಜತೆ ಇರುವವರು ಕೂಡಲೇ ಅವರ ಎದೆಯ ಎಡ ಭಾಗದಲ್ಲಿ ಎರಡೂ ಕೈಗಳಿಂದ ಜೋರಾಗಿ (ನಿಮಿಷಕ್ಕೆ 80 ಬಾರಿ) ಒತ್ತಬೇಕು. ಇದರಿಂದ ಬಹಳಷ್ಟು ಸಂದರ್ಭ ಹೃದಯ ಬಡಿತ ಸರಿಯಾಗುವ ಸಾಧ್ಯತೆ ಇವೆ.
| ಡಾ. ಸಿ.ಎನ್.ಮಂಜುನಾಥ್ ನಿರ್ದೇಶಕ, ಜಯದೇವ ಹೃದಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ
ಕಣ್ಣಿಗೆ ಹಾನಿ ಆದ ಸಂದರ್ಭದಲ್ಲಿ ಉಜ್ಜತೆ, ಯಾವುದೇ ಔಷಧ ಹಾಕದೆ ಶುದ್ಧವಾದ ಒಣ ಬಟ್ಟೆಯನ್ನು ಅಡ್ಡಲಾಗಿ ಇಟ್ಟುಕೊಂಡು ಕೂಡಲೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು. ಕೆಲವೊಮ್ಮೆ ಧೂಳು ಅಥವಾ ರಾಸಾಯನಿಕ ಅಂಶ ಕಣ್ಣಿಗೆ ಬಿದ್ದಾಗ ನೀರಿನಿಂದ ಕಣ್ಣನ್ನು ತೊಳೆದು ತಕ್ಷಣವೇ ನೇತ್ರ ತಜ್ಞರನ್ನು ಸಂರ್ಪಸಬೇಕು. ಕಣ್ಣಿಗೆ ಗಂಭೀರ ಹಾನಿಯಾದಾಗ ಮಿದುಳಿನಿಂದ ಬರುವ ನರಕ್ಕೂ ಅಪಾಯ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
| ಡಾ. ಸುಜಾತಾ ರಾಥೋಡ್, ನಿರ್ದೇಶಕಿ, ಮಿಂಟೋ ಕಣ್ಣಿನ ಆಸ್ಪತ್ರೆ
ಮಧುಮೇಹಿಗಳಲ್ಲಿ ಲೋ ಶುಗರ್ ತುಂಬಾ ಅಪಾಯಕಾರಿ. ತಲೆ ತಿರುಗುವಿಕೆ, ಹೃದಯ ಬಡಿತ ಹೆಚ್ಚಾಗುವುದು, ಬೆವರು, ಸುಸ್ತಾಗಿ ಪ್ರಜ್ಞೆ ಕಳೆದುಕೊಳ್ಳುವುದು (ಡಯಾಬಿಟಿಕ್ ಕೋಮಾ) ಇದರ ಲಕ್ಷಣಗಳು. ನಿರ್ಲಕ್ಷಿಸಿದರೆ ಶಾಶ್ವತವಾಗಿ ಮಿದುಳಿಗೆ ಹಾನಿ ಆಗುತ್ತದೆ. ಇಂತಹ ಸಂದರ್ಭದಲ್ಲಿ ರೋಗಿಗೆ ಕೂಡಲೇ ಸಕ್ಕರೆ ತಿನ್ನಿಸಬೇಕು. ಕೂಡಲೇ ವೈದ್ಯರ ಬಳಿ ಕರೆದೊಯ್ಯಬೇಕು. ಹೈ ಶುಗರ್ ಅಂದರೆ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾದಾಗ ಸುಸ್ತಾಗುವುದು, ಬೆವರುವುದು, ಹೃದಯ ಬಡಿತದಲ್ಲಿ ಏರುಪೇರಾಗುವುದು, ವ್ಯಕ್ತಿ ಮತಿಭ್ರಮಣೆ ಸ್ಥಿತಿ ತಲುಪುವ ಸಾಧ್ಯತೆ ಹೆಚ್ಚು. ಅವರ ಔಷಧ ಹಿನ್ನೆಲೆ ಪಡೆದು ವ್ಯಕ್ತಿ ಎಚ್ಚರ ಇದ್ದರಷ್ಟೇ ಶುಗರ್ ಮಾತ್ರೆ ನುಂಗಿಸಿ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು.
| ಡಾ. ಶಿವಕುಮಾರ್ ಮಧುಮೇಹ ತಜ್ಞರು, ವಿಕ್ಟೋರಿಯಾ ಆಸ್ಪತ್ರೆ
ಅತೀಸಾರ ಮತ್ತು ವಾಂತಿಯಿಂದ ಮಕ್ಕಳಲ್ಲಿ ನಿರ್ಜಲೀಕರಣವಾಗುತ್ತದೆ. ಹೀಗಾಗುತ್ತಿದ್ದಂತೆ ಮೊದಲಿಗೆ ನಾಲಿಗೆ ಒಣಗಿ ಬಾಯಾರಿಕೆ ಹೆಚ್ಚಾಗುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತಾ ಹೋಗುತ್ತದೆ. ಜೀವಕೋಶಗಳು ಬದುಕುವುದಕ್ಕೆ ನೀರಿನ ಅಂಶ ಬೇಕು. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ರಕ್ತ ಸಂಚಾರ ಕಡಿಮೆಯಾಗುತ್ತದೆ. ಮಗುವಿಗೆ ಕಿರಿಕಿರಿ ಉಂಟಾಗಿ ಅಳಲು ಆರಂಭಿಸುತ್ತದೆ. ಸುಸ್ತು, ನಿತ್ರಾಣ ಕಂಡು ಬರುತ್ತದೆ. ಇದಕ್ಕೆ ಪ್ರಥಮ ಚಿಕಿತ್ಸೆ ಅಂದರೆ ಒಆರ್​ಎಸ್ ಕೊಡಬಹುದು. ಇಲ್ಲವೆ ಒಂದು ಲೋಟ ನೀರಿಗೆ ಒಂದು ಚಮಚ ಸಕ್ಕರೆ, ಸ್ವಲ್ಪ ಉಪು್ಪ ಬೆರೆಸಿ ಬೇಕಿದ್ದರೆ ಸ್ವಲ್ಪ ನಿಂಬೆ ರಸ ಸೇರಿಸಿ ಕುಡಿಸಬೇಕು. ಎಳನೀರು, ಸ್ವಲ್ಪ ಉಪು್ಪ ಹಾಕಿರುವ ಗಂಜಿ ಸಹ ಕೊಡಬಹುದು. ಪುಟಾಣಿ ಮಕ್ಕಳಲ್ಲಿ ನಿರ್ಜಲೀಕರಣವಾದಾಗ ಅವರು ಮೂತ್ರ ಮಾಡುವ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ ಮತ್ತು ನಾಲಿಗೆ ಒಣಗಿ ಅವರ ಚಟುವಟಿಕೆ ಕಡಿಮೆಯಾಗುತ್ತದೆ. ಅದನ್ನು ಗಮನಿಸಿ ಪಾಲಕರು ಎಚ್ಚೆತ್ತುಕೊಳ್ಳಬೇಕು.
| ಡಾ. ನಿಜಗುಣ ಮಕ್ಕಳ ತಜ್ಞರು, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ
ಅಧಿಕ ರಕ್ತದೊತ್ತಡದಿಂದ ತಲೆನೋವು, ಕಣ್ಣು ಮಂಜು ಹಾಗೂ ಬೆವರು ಕಾಣಿಸಿಕೊಳ್ಳುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬೇಕು. ಇಲ್ಲದಿದ್ದರೆ ಹೃದಯಾಘಾತ, ಪಾರ್ಶ್ವವಾಯು ಆಗುತ್ತದೆ. ಜತೆಗೆ, ಕಿಡ್ನಿ ಮೇಲೂ ಪರಿಣಾಮ ಬೀರುತ್ತದೆ. ಲೋ ಬಿಪಿಯಿಂದ ತಲೆಸುತ್ತು, ಬೆವರು ಮತ್ತು ಕಣ್ಣು ಮಂಜು ಆಗುತ್ತದೆ. ಮುಂಜಾಗ್ರತಾವಾಗಿ ವೈದ್ಯರ ಸಲಹೆ ಮೇರೆಗೆ ಔಷಧ ತೆಗೆದುಕೊಳ್ಳಬೇಕು. ಒತ್ತಡದಿಂದ ಮುಕ್ತವಾಗಬೇಕು. ಆರು ತಿಂಗಳಿಗೊಮ್ಮೆ ಇಸಿಜಿ ಪರೀಕ್ಷೆ ಮಾಡಿಸಿಕೊಳ್ಳಬೇಕು.
| ಡಾ. ಆರ್.ಜಗದೀಶ್ ರಕ್ತದೊತ್ತಡ ಮತ್ತು ಮಧುಮೇಹ ತಜ್ಞ, ವಿಕ್ಟೋರಿಯಾ ಸಿಎಂಒ
ಬೆಂಕಿ ಅವಘಡದಲ್ಲಿ ಸಿಲುಕಿದವರನ್ನು ಪಾರು ಮಾಡಲು ಯತ್ನಿಸುವವರು ಮೊದಲು ತಮ್ಮ ರಕ್ಷಣೆ ನೋಡಿಕೊಳ್ಳಬೇಕು. ಬೆಂಕಿ ಅವಘಡ ನಡೆದಾಗ ಮೊದಲು ನೀರಿನಿಂದ ಬೆಂಕಿ ನಂದಿಸಬೇಕು. ಅದರ ಜತೆಗೆ ಗಾಯಾಳುವನ್ನು ಪಾರು ಮಾಡಲು ಪ್ರಯತ್ನಿಸಬೇಕು. ಗಾಯಾಳುವನ್ನು ಸ್ವಚ್ಛವಾದ ಬಟ್ಟೆಯಿಂದ ಸುತ್ತಿಕೊಂಡು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು. ಇನ್ನು ವಿದ್ಯುತ್ ಅವಘಡಗಳು ಮತ್ತು ಪೆಟ್ರೋಲ್ ಬಂಕ್​ನಲ್ಲಿ ಅವಘಡಗಳು ನಡೆದ್ದಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಅಪಾಯದಲ್ಲಿ ಸಿಲುಕಿದವರನನ್ನು ಪಾರು ಮಾಡಬೇಕಾಗುತ್ತದೆ.
| ಡಾ. ಕೆ.ಟಿ.ರಮೇಶ್, ಪ್ರೊಪೆಸರ್ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥರು, ವಿಕ್ಟೋರಿಯಾ ಆಸ್ಪತ್ರೆ
ರಸ್ತೆ ಅಪಘಾತ ಸಂದರ್ಭದಲ್ಲಿ ಗಾಯಾಳುವಿಗೆ ರಕ್ತಸ್ರಾವ ಆಗುತ್ತಿದ್ದರೆ ಅದನ್ನು ನಿಲ್ಲಿಸಲು ಆಸ್ಪತ್ರೆ ತಲುಪುವವರೆಗೂ ಬಟ್ಟೆಯಿಂದ ಗಟ್ಟಿಯಾಗಿ ಒತ್ತಿ ಹಿಡಿಯಬೇಕು. ತಲೆಗೆ ಪೆಟ್ಟಾಗಿ ಮೂಗು ಅಥವಾ ಕಿವಿಯಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಸಮಯ ವ್ಯರ್ಥ ಮಾಡದೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಬೇಕು. ಈ ವೇಳೆ ಅವರಿಗೆ ಮೂಗಿನಲ್ಲಿ ಉಸಿರಾಡಲು ಕಷ್ಟವಾಗಿದ್ದರೆ ಬಾಯಿಯಲ್ಲಿ ಏನಾದರೂ ಸಿಕ್ಕಿಹಾಕಿಕೊಂಡಿದ್ದರೆ ಅದನ್ನು ತೆರವುಗೊಳಿಸಿ ಬಾಯಿ ಮೂಲಕ ಉಸಿರಾಡಲು ಹೇಳಬೇಕು. ವಾಂತಿ ಆಗುತ್ತಿದ್ದರೆ ಗಾಯಾಳುವನ್ನು ಪಕ್ಕಕ್ಕೆ ತಿರುಗಿಸಿ ಮಲಗಿಸಬೇಕು. ಬಳಿಕ ಆಸ್ಪತ್ರೆಗೆ ಕರೆದೊಯ್ಯಬೇಕು.
| ಡಾ. ಜಿ.ಲೋಕೇಶ್ ಸಿಎಂಒ, ಎಮರ್ಜೆನ್ಸಿ ಟ್ರಾಮಾ ಸೆಂಟರ್, ಬಿಎಂಸಿಆರ್​ಐ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − four =
Remember me
