|ಪಂಕಜ ಕೆ.ಎಂ., ಬೆಂಗಳೂರು
ರಾಜ್ಯದಲ್ಲಿ ನಾನಾ ರೀತಿಯ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಸಹಸ್ರಾರು. ಈ ಪೈಕಿ ಕಿಡ್ನಿ ಕಸಿಗಾಗಿಯೇ 4,135 ಮಂದಿ ಸರತಿಯಲ್ಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗಿಂತ ಕಿಡ್ನಿ ಸಮಸ್ಯೆ ಹೆಚ್ಚುತ್ತಿದ್ದು, ನಗರ ವಾಸಿಗಳಲ್ಲಿ ಈ ಸಮಸ್ಯೆ ಅತೀ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಯುವಜನರು ಈ ಸಮಸ್ಯೆಗೆ ಹೆಚ್ಚು ಒಳಗಾಗುತ್ತಿರುವುದು ಆತಂಕಕಾರಿ ವಿಷಯ. ಬೆಂಗಳೂರಿನ ನೆಫ್ರೋ ಯುರಾಲಜಿ ಸಂಸ್ಥೆ ಒಂದರಲ್ಲೇ ನಿತ್ಯ 300-350 ಹೊರರೋಗಿಗಳು ಹಾಗೂ 130ರಿಂದ 150 ಒಳರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ನಿತ್ಯ 90 ಮಂದಿಗೆ ಡಯಾಲಿಸಿಸ್ ಸೇವೆ ಒದಗಿಸಲಾಗುತ್ತಿದ್ದು, ಸದ್ಯ 30 ಮಂದಿ ಹೋಮ್ ಡಯಾಲಿಸಿಸ್ (ಸಿಎಪಿಡಿ) ಪಡೆದುಕೊಳ್ಳುತ್ತಿದ್ದಾರೆ. ಸಂಸ್ಥೆಯಲ್ಲಿ ವರ್ಷಕ್ಕೆ 25-30 ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಈವರೆಗೂ 248 ಮಂದಿಗೆ ಕಿಡ್ನಿ ಕಸಿ ಮಾಡಲಾಗಿದೆ. ಇದಲ್ಲದೆ, ರಾಜ್ಯದ ವಿವಿಧೆಡೆ ಸರ್ಕಾರಿ ಹಾಗೂ ಖಾಸಗಿ ಡಯಾಲಿಸಿಸ್ ಕೇಂದ್ರಗಳಲ್ಲಿ ನಿತ್ಯ ಸಾವಿರಾರು ಜನ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲೂ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ.
ಕಿಡ್ನಿ ಸಮಸ್ಯೆಯ ಲಕ್ಷಣಗಳನ್ನು ಅರಿತು ಪರೀಕ್ಷೆ ಮಾಡಿಸಿ ಕೊಳ್ಳಬೇಕು. ಮಧುಮೇಹ, ರಕ್ತದೊತ್ತಡ ಇರುವವರು ಪ್ರತಿ 6 ತಿಂಗಳಿಗೊಮ್ಮೆ ಮೂತ್ರಪಿಂಡ ಪರೀಕ್ಷೆ ಮಾಡಿಸಿಕೊಳ್ಳಬೇಕು. ಉಳಿದಂತೆ 40 ವರ್ಷ ಮೇಲ್ಪಟ್ಟ ಎಲ್ಲರೂ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಅನುವಂಶಿಕವಾಗಿ ಕಿಡ್ನಿ ಸಮಸ್ಯೆ ಇದ್ದಲ್ಲಿ ಅಂತಹವರು ಎಚ್ಚರಿಕೆ ವಹಿಸಬೇಕು.
|ಡಾ.ಕೇಶವಮೂರ್ತಿನಿರ್ದೇಶಕ, ನೆಫ್ರೋ ಯುರಾಲಜಿ ಸಂಸ್ಥೆ
ಹೆಚ್ಚಿದ ಬೇಡಿಕೆ:ರಾಜ್ಯದಲ್ಲಿ ಇತರ ಅಂಗಾಂಗಗಳಿಗಿಂತ ಕಿಡ್ನಿಗೆ ಬೇಡಿಕೆ ಹೆಚ್ಚು. ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಮಧುಮೇಹ, ರಕ್ತದೊತ್ತಡದಂಥ ಕಾಯಿಲೆಗಳಿಗೆ ತುತ್ತಾಗುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದೇ ಕಿಡ್ನಿ ಸಮಸ್ಯೆ ಹೆಚ್ಚಲು ಕಾರಣ. ಹೀಗಾಗಿ ಕಿಡ್ನಿ ಕಸಿಗೆ ಕಾಯುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಅಂಗಾಂಗ ಕಸಿ ಯೋಜನೆಯಡಿ ಹೆಸರು ನೋಂದಾಯಿಸಿರುವ 5,679 ಮಂದಿಯಲ್ಲಿ ಕಿಡ್ನಿ ಕಸಿಗಾಗಿಯೇ 4,135 ರೋಗಿಗಳು ಕಾಯುತ್ತಿದ್ದಾರೆ. ಇದಲ್ಲದೆ, ಬಹುಅಂಗಾಂಗ ಕಸಿಗಾಗಿ ಕಾಯುವವರಲ್ಲಿ ಲಿವರ್ ಮತ್ತು ಕಿಡ್ನಿಗಾಗಿ 20 ಮಂದಿ ಹಾಗೂ ಕಿಡ್ನಿ ಮತ್ತು ಪ್ಯಾಂಕ್ರಿಯಾಸ್​ಗಾಗಿ 11 ಮಂದಿ ದಾನಿಗಳಿಗಾಗಿ ಎದುರು ನೋಡುತ್ತಿದ್ದಾರೆ.
ಕಾರಣ -ವಿಧಗಳು:ಕಿಡ್ನಿ ಸ್ಟೋನ್, ಕಿಡ್ನಿ ಸೋಂಕು, ಕಿಡ್ನಿ ಕ್ಯಾನ್ಸರ್, ರಕ್ತನಾಳದ ಸಮಸ್ಯೆಗಳಿಂದಲೂ ಕಿಡ್ನಿಯಲ್ಲಿ ನೀರುಗುಳ್ಳೆ ಸೇರಿ ಹಲವು ಬಗೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆರಂಭದಲ್ಲೇ ಚಿಕಿತ್ಸೆ ಪಡೆಯದಿದ್ದರೆ ಕಿಡ್ನಿ ವೈಫಲವಾಗಿ ಕಸಿ ಅನಿವಾರ್ಯವಾಗುತ್ತದೆ. ಹಾಗಾಗಿ ವರ್ಷಕ್ಕೊಮ್ಮೆ ಕಿಡ್ನಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ ಎನ್ನುತ್ತಾರೆ ನಿಫ್ರೋ ಯುರಾಲಜಿ ಸಂಸ್ಥೆಯ ಕಿಡ್ನಿ ತಜ್ಞ ಡಾ. ಎಂ.ಶಿವಲಿಂಗಯ್ಯ.
ರೋಗ ಲಕ್ಷಣಗಳು:ಅತಿಯಾದ ಆಯಾಸ, ಕಾಲುಗಳಲ್ಲಿ ಊತ (ಮೊಣಕಾಲು), ನಡೆಯಲು ಆಗದಿರುವುದು, ವಾಂತಿ ಬರುವಂತೆ ಆಗುವುದು, ಮೂತ್ರ ವಿಜರ್ಸನೆಯಲ್ಲಿ ಏರುಪೇರು, ಉರಿ ಮೂತ್ರ, ಜ್ವರ ಬಂದಾಗ ಸೊಂಟದಲ್ಲಿ ನೋವು ಕಾಣಿಸಿಕೊಳ್ಳುವುದು, ಸಮಸ್ಯೆ ಹೆಚ್ಚಾದರೆ ಉಸಿರಾಟದ ತೊಂದರೆ, ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುವುದು.
ಉಚಿತ ತಪಾಸಣಾ ಶಿಬಿರ:ವಿಶ್ವ ಕಿಡ್ನಿ ದಿನದ ಅಂಗವಾಗಿ ಗುರುವಾರ ಬೆಳಗ್ಗೆ 8 ಗಂಟೆಗೆ ನಿಫ್ರೋ ಯರಾಲಜಿ ಸಂಸ್ಥೆಯಿಂದ ಆಸ್ಪತ್ರೆ ಸುತ್ತಮುತ್ತ ವಾಕಥಾನ್ ಮತ್ತು ಕಿಡ್ನಿ ಆರೋಗ್ಯ ಸಂಬಂಧ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಫೋನ್​ ಪೇ ಮೂಲಕ ಲಂಚ ಪಡೆದಿದ್ದ ಇಬ್ಬರು ಎಸಿಬಿ ಬಲೆಗೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + nineteen =
Remember me
