|ಶ್ರೀ ಶ್ರೀರವಿಶಂಕರ್ಶ್ರೀಕೃಷ್ಣನ ಉತ್ಕೃಷ್ಟವಾದ ಸಾರವನ್ನು ನಮ್ಮದೇ ಚೈತನ್ಯದಲ್ಲಿ ಮತ್ತೊಮ್ಮೆ ಜೀವಂತಗೊಳಿಸುವ ದಿನವೇ ಜನ್ಮಾಷ್ಟಮಿ. ಕೃಷ್ಣನ ಜನನದ ಕಥೆಯು ಸಂಪೂರ್ಣವಾಗಿ ಸಾಂಕೇತಿಕವಾಗಿದ್ದು, ಅಜ್ಞಾನವೆಂಬ ಸಾಗರವನ್ನು ದಾಟಲು ಸಹಾಯ ಮಾಡುವಂತಹ, ಆಳವಾದ ಭಕ್ತಿ ಮತ್ತು ಯೋಗದ ಅಭೇದ್ಯ ರಹಸ್ಯಗಳನ್ನು ಅದು ತೆರೆದಿಡುತ್ತದೆ. ಆ ಕಥೆಯು ಅನೇಕ ಸಾವಿರ ವರ್ಷಗಳ ಹಿಂದೆ ನಡೆದು ಮುಗಿದು ಹೋದ ಘಟನೆಯಲ್ಲ, ನಮ್ಮೊಳಗೆ ಸದಾಕಾಲ ನಡೆಯುತ್ತಲೇ ಇರುವ ಕಥೆಯದು.
ಶ್ರೀ ಕೃಷ್ಣನು ದೇವಕಿ ಮತ್ತು ವಸುದೇವರಿಗೆ ಜನಿಸಿದ ಮಗು. ವು ಎಂದರೆ ಉಸಿರು ಅಥವಾ ಪ್ರಾಣ. ದೇವಕಿಯು ಭೌತಿಕ ಶರೀರದ ಪ್ರತೀಕ. ದೇವಕಿಯ ಸಹೋದರನ ಹೆಸರು ಕಂಸ, ಎಂದರೆ ಅಹಂಕಾರ. ಕಂಸನು ದೇವಕಿ ಮತ್ತು ವಸುದೇವರನ್ನು ಕಾರಾಗೃಹದಲ್ಲಿ ಬಂಧಿಸಿಟ್ಟ, ಎಂದರೆ, ಅಹಂಕಾರವು ದೇಹ ಮತ್ತು ಉಸಿರನ್ನು ಬಂಧಿಸಿತು. ಆದರೆ, ದೇಹ ಹಾಗೂ ಉಸಿರಿನ ಸಂಯೋಗದಿಂದ ಆನಂದವು ಜನಿಸಿತು. ಆದ್ದರಿಂದಲೇ ಕೃಷ್ಣನನ್ನು ನಂದಲಾಲ ಎಂದು ಕರೆಯುವುದು. ನಂದ ಅಥವಾ ಆನಂದವು ಆನಂದ, ಜ್ಞಾನ ಹಾಗೂ ಅನಂತತೆಯ ಸಾಕಾರ. ಅಹಂಕಾರವನ್ನು ಅಡಗಿಸಿದಾಗ, ಇರುವುದು ಕೇವಲ ಸಂತೋಷ ಅಥವಾ ಆನಂದ! ನಿಮ್ಮ ಪುಟ್ಟ ದೇಹದೊಳಗೆ, ಉಸಿರಿನ ಸಹಾಯದಿಂದ, ಅಹಂಕಾರವನ್ನು ದಾಟಿದಾಗ ಈ ಅನಂತ ಆಕಾಶ ಅಥವಾ ಆನಂದವನ್ನು ಅನುಭವಿಸಲು ಸಾಧ್ಯ.
ಕಾರಾಗೃಹದ ದ್ವಾರಪಾಲಕರು ನಿದ್ದೆಯಲ್ಲಿ ಜಾರಿದಾಗ:ಶ್ರೀ ಕೃಷ್ಣನು ಮಧ್ಯ ರಾತ್ರಿಯಲ್ಲಿ, ಕಾರಾಗೃಹದಲ್ಲಿ ಜನಿಸಿದಾಗ, ಎಲ್ಲ ದ್ವಾರಪಾಲಕರೂ ಹಾಗೆಯೇ ನಿದ್ದೆಯಲ್ಲಿ ಜಾರಿದ್ದರು. ಈ ದ್ವಾರಪಾಲಕರು ಯಾರು? ಅವರು ಯಾವುದರ ಪ್ರತೀಕ? ದ್ವಾರಪಾಲಕರು ಪಂಚೇಂದ್ರಿಯ ಪ್ರತಿನಿಧಿಸುತ್ತಾರೆ- ಕಣ್ಣುಗಳು, ಕಿವಿಗಳು, ನಾಲಿಗೆ, ಮೂಗು ಮತ್ತು ಚರ್ಮ. ಈ ಐವರು ದ್ವಾರಪಾಲಕರು ಸದಾ ನಿಮ್ಮನ್ನು ಬಾಹ್ಯದಲ್ಲೇ ನಿರತರಾಗಿರಿಸಿರುತ್ತಾರೆ, ಇದರಿಂದಾಗಿ ಆಂತರ್ಯದಲ್ಲಿರುವ ಅನಂತ ಆಕಾಶವು ನಿಮ್ಮ ಅನುಭವಕ್ಕೆ ಬರುವುದೇ ಇಲ್ಲ . ಈ ದ್ವಾರಪಾಲಕರು ನಿಮ್ಮನ್ನು ಆಂತರ್ಯದೊಳಗೆ ಹೋಗಲು ಬಿಡುವುದಿಲ್ಲ. ಹೀಗಾಗಿ ನಿಮ್ಮ ಆತ್ಮವನ್ನು ಅನುಭವಿಸಲು ಬಿಡುವುದಿಲ್ಲ. ಆದ್ದರಿಂದ, ಎಲ್ಲಾ ದ್ವಾರಪಾಲಕರೂ ನಿದ್ದೆಗೆ ಜಾರಿದಾಗ ಶ್ರೀಕೃಷ್ಣ ಜನಿಸಿದ. ದ್ವಾರಪಾಲಕರು ನಿದ್ದೆಯಲ್ಲಿದ್ದುದ್ದರಿಂದಲೇ ವಾಸುದೇವ ಅಂದರೆ ಪ್ರಾಣವು ಭೇದಿಸಿ, ಆ ಸಂತೋಷವನ್ನು, ಆನಂದವನ್ನು ಇಡೀ ವಾತಾವರಣದಲ್ಲಿ ಹರಡಲು ಸಾಧ್ಯವಾಯಿತು.
ಅಹಂಕಾರ ಮತ್ತು ಆನಂದ:ಆ ಮಗುವನ್ನು ಕಂಸನಿಂದ (ಅಹಂಕಾರ) ರಕ್ಷಿಸಲು ವಸುದೇವನು ಮಗುವನ್ನು ಗೋಕುಲಕ್ಕೆ, (ಭಕ್ತಿ ಹಾಗೂ ಪ್ರೇಮದ ಸಾಕಾರವಾದ) ಯಶೋಧೆಯ ಬಳಿಗೆ ಕರೆದೊಯ್ದ, ಇಲ್ಲವಾದರೆ ಕಂಸನು ಆ ಮಗುವನ್ನು ಕೊಲ್ಲಲು ಸಿದ್ಧನಾಗಿದ್ದ. ಆನಂದವೇ ಆಗಿರá-ವವನನ್ನು ಕೊಲ್ಲಲು ಅಹಂಕಾರಕ್ಕೆ ಹೇಗೆ ಸಾಧ್ಯ? ಇದು ಹೇಗೆಂದರೆ, ಒಬ್ಬರು ಆನಂದವನ್ನು ಅನುಭವಿಸಿದಾಗ, ಆ ಆನಂದವೇ ಅಹಂಕಾರಕ್ಕೆ ನಾಂದಿಯಾಗುತ್ತದೆ. ಅಂತಿಮವಾಗಿ ಇದರಿಂದ ಅನಂತತೆ, ಆನಂದ ಹಾಗೂ ಸಂತೋಷ ನಾಶವಾಗುತ್ತದೆ. ಆದ್ದರಿಂದ ಶ್ರೀಕೃಷ್ಣನನ್ನು (ಅನಂತತೆ, ಆನಂದ ಮತ್ತು ಸಂತೋಷ) ರಕ್ಷಿಸುವ ಸಲುವಾಗಿ, (ಪ್ರಾಣ ಅಥವಾ ಉಸಿರಾದ) ವಾಸá-ದೇವನು, (ಪ್ರೇಮದ ಪ್ರತೀಕವಾದ) ಯಮುನೆಯುೂಲಕ ಕೃಷ್ಣನನ್ನು ಕರೆದೊಯ್ದ.
ಯಶೋಧೆಯ ಬಳಿಗೆ ಕೃಷ್ಣನನ್ನು ಕರೆದೊಯ್ದ ವಾಸುದೇವ:ಅನಂತತೆಯು ಯೋಗ ಮತ್ತು ಧ್ಯಾನದ ಮೂಲಕ ಜನಿಸುತ್ತದೆ. ಆದರಿಸá-ವುದುದಿಂದ ಮಾತ್ರವೇ ಅದನ್ನು ನಿಭಾಯಿಸಲು ಅಸಾಧ್ಯ. ಆನಂದವನ್ನು ಪೋಷಿಸಲು ಭಕ್ತಿ ಮತ್ತು ಪ್ರೇಮವು ಅವಶ್ಯಕ. ಯಶೋಧೆಯು ಭಕ್ತಿ ಮತ್ತು ವಿಶ್ವಾಸದ ಪ್ರತೀಕ. ಗೋಕುಲದಲ್ಲಿ ವಸುದೇವನು ಯಶೋಧೆಯ ಮನೆಯನ್ನು ತಲುಪಿ, ಕೃಷ್ಣನನ್ನು ಮಧ್ಯರಾತ್ರಿಯಲ್ಲಿ,ಯಶೋಧೆಯ ಮಗ್ಗುಲಲ್ಲಿ ಮಲಗಿಸಿದ. ಕೃಷ್ಣನು ಅಲ್ಲಿಯೇ ಬೆಳೆದ. ಹೀಗೆ ಅರ್ಥೈಸುವುದು- ನಮ್ಮಲ್ಲಿ ಆನಂದವನ್ನು ಪೋಷಿಸಲು ಕೇವಲ ಭಕ್ತಿಗೆ ಮಾತ್ರಸಾಧ್ಯ.
ಯಮುನೆಯು ಉಕ್ಕಿ ಹರಿದಳು:ಮುದ್ದು ಹಸುಳೆ ಶ್ರೀ ಕೃಷ್ಣನನ್ನು ಒಂದು ಬುಟ್ಟಿಯಲ್ಲಿರಿಸಿ, ತಲೆಯ ಮೇಲೆ ಹೊತ್ತು, ಯಮುನೆಯನ್ನು ದಾಟಿದ ನಂತರವೇ ವಸುದೇವನಿಗೆ ಗೋಕುಲವನ್ನು ತಲುಪಲು ಸಾಧ್ಯವಾಗಿತ್ತು. ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲೇ ನದಿಯನ್ನು ದಾಟಲು ವಸುದೇವನು ಆರಂಭಿಸಿದ. ನದಿಯ ನೀರು ಮತ್ತಷ್ಟು ಉಕ್ಕುತ್ತಾ ಹೋಯಿತು. ಯುಮುನೆ( ಎಂದರೆ ಪ್ರೇಮವು), ಅನಂತತೆಯನ್ನು ಸಂಧಿಸಲು ಮೇಲಕ್ಕೆ, ಇನ್ನಷ್ಟು ಎತ್ತರಕ್ಕೆ ಏರುತ್ತಲೇ ಇತ್ತು .ಅನಂತತೆಯನ್ನು ಸಂಧಿಸಿದ ಕ್ಷಣದಿಂದ, ಆನಂದದಲ್ಲಿ ಅದು ಮೌನವಾಗಿ ಬಿಟ್ಟಿತು.(ಅಂದರೆ ನದಿಯ ವೇಗ ತಗ್ಗಿತು) ಸಂಗೀತದಲ್ಲೂ ಅಥವಾ ಸತ್ಸಂಗದಲ್ಲೂ ಇದನ್ನು ನಾವು ಅನುಭವಿಸುತ್ತೇವೆ ಹಾಡಿನ ಸಾಲುಗಳನ್ನು ಶಾಂತ ಭಾವದಲ್ಲಿ, ಪೂರ್ಣವಾದ ಮೌನ ಸ್ಥಿತಿಯಲ್ಲಿ, ಪೂರೈಸುವ ಮುನ್ನ, ಧ್ವನಿಯು ಮೇಲೇರಿ ಇಳಿಯುತ್ತದೆ. ಆ ಮೌನದಲ್ಲಿ ಮನಸ್ಸು ಅಂತಮುಖವಾಗುತ್ತದೆ. ಎರಡು ಹಾಡುಗಳ / ಭಜನೆಗಳ ನಡುವೆ ಈ ಮೌನವನ್ನು ಅನುಭವಿಸುವುದು ಬಹಳ ಅವಶ್ಯಕ. ಆ ಮೌನವು ಅನಂತತೆಯ ಆನಂದದ ಒಂದು ಸುಳಿವನ್ನು ನೀಡುತ್ತದೆ. ಅನಂತ ಆನಂದದ ಸ್ವರೂಪವೇ ಆತ್ಮ ಎಂದು ತಿಳಿಯದೆ, ಪ್ರತಿಯೊಂದು ಆತ್ಮವೂ ಆಧ್ಯಾತ್ಮಿಕತೆಯ ಮೂಲಕವಾಗಲಿ ಅಥವಾ ಭೌತಿಕ ಪ್ರಪಂಚದ ಮೂಲಕವಾಗಲಿ, ಚಲನಚಿತ್ರಗಳಲ್ಲಿರಲಿ ಅಥವಾ ಮದ್ಯದ ಅಂಗಡಿಗಳಲ್ಲಿರಲಿ, ದೇವಸ್ಥಾನ ಅಥವಾ ಚರ್ಚುಗಳಲ್ಲಿ, ಹಣದಲ್ಲಿ, ಖ್ಯಾತಿಯಲ್ಲಿ ಅಥವಾ ಅಧಿಕಾರದಲ್ಲೇ ಆಗಿರಲಿ, ಈ ಯಾವುದರ ಮೂಲಕವಾದರೂ ಸಂತೋಷವನ್ನು ಹುಡುಕುತ್ತಿರುತ್ತದೆ. ಸೂಕ್ತ ಅರ್ಹತೆ ಪಡೆದ ಸಂತೋಷವೇ ಆನಂದ. ಪ್ರೇಮವಾದರೋ ನೋವಿನೊಡನೆ ಬರುತ್ತದೆ. ಉದ್ವೇಗದಿಂದ, ಸಂಕಷ್ಟಗಳಿಂದ, ನೋವಿನಿಂದ ಮುಕ್ತವಾದ ಸಂತೋಷವೇ ಆನಂದ. ಆ ಆನಂದವೇ ಕೃಷ್ಣ.
ಹಿಂದೂ ಧರ್ಮ ಯಾವಾಗ ಹುಟ್ಟಿತು‌‌‌.. ಯಾರು ಹುಟ್ಟಿಸಿದ್ದರು?: ಗೃಹ ಸಚಿವ ಡಾ.ಜಿ.ಪರಮೇಶ್ವರ್​

ಚಂದ್ರಯಾನ-3 ಮಹಾಕ್ವಿಜ್​: ಇಲ್ಲಿದೆ ಒಂದು ಲಕ್ಷ ರೂ. ಗೆಲ್ಲುವ ಅವಕಾಶ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 10 =
Remember me
