| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ನಾಡು, ನುಡಿ, ಕಲೆ, ಸಾಂಸ್ಕೃತಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಸಂಘಸಂಸ್ಥೆಗಳಿಗೆ ಸರ್ಕಾರ ಕೊಡಮಾಡುವ ಅನುದಾನ ವಿಚಾರದಲ್ಲಿ ಕಲಾವಿದರು ತೀವ್ರ ಅಸಮಾಧಾನಗೊಂಡಿದ್ದು, ಪ್ರತಿರೋಧ ತೋರಿಸಲು ಬಗೆಬಗೆಯ ಮಾರ್ಗ ಅನುಸರಿಸಲು ಆರಂಭಿಸಿದ್ದಾರೆ.
ಕಳೆದ 10-15 ದಿನಗಳಲ್ಲಿ ಲೋಕಾಯುಕ್ತಕ್ಕೆ ಸರಣಿ ದೂರು ಸಲ್ಲಿಕೆಯಾಗಿದ್ದು ಒಂದುಕಡೆಯಾದರೆ, ಅನುದಾನ ಕೊಡದೇ ಸತಾಯಿಸುತ್ತಿರುವ ಅಧಿಕಾರಿಗಳ ವಿರುದ್ಧ ಬೀದಿಗಿಳಿದು ದನಿ ಎತ್ತಲೂ ಕಲಾವಿದರು ಸಜ್ಜಾಗಿದ್ದಾರೆ.
ಸಮಸ್ಯೆ ಹಿನ್ನೆಲೆ:ಕಲೆ, ಸಂಸ್ಕೃತಿ ಚಟುವಟಿಕೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಸಂಘ-ಸಂಸ್ಥೆಗಳಿಗೆ ಸರ್ಕಾರ ವಾರ್ಷಿಕ ಅನುದಾನ ಕೊಡುತ್ತದೆ. ನಿಗದಿತ ಮಾರ್ಗದಲ್ಲಿ ಅರ್ಜಿ ಸ್ವೀಕರಿಸಿ, ಸಮಿತಿಯಿಂದ ದಾಖಲೆಗಳ ಪರಿಶೀಲನೆ ಮಾಡಿಸಿ ಅನುದಾನದ ಶಿಫಾರಸು ಪಡೆದು ಬಳಿಕ ಹಣ ಮಂಜೂರು ಮಾಡಲಾಗುತ್ತದೆ.
ಪ್ರತಿ ವರ್ಷ ಸರಾಸರಿ 8 ಸಾವಿರಕ್ಕೂ ಮಿಕ್ಕಿದ ಸಂಘ ಸಂಸ್ಥೆಗಳು ಅನುದಾನಕ್ಕೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿದರೆ 6 ಸಾವಿರದಷ್ಟು ಸಂಘ ಸಂಸ್ಥೆಗಳಿಗೆ ಅನುದಾನ ದೊರಕುತ್ತದೆ. ಅಂದಾಜು 300ರಷ್ಟು ಸಂಘ-ಸಂಸ್ಥೆಗಳು ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಿ ಶಿಫಾರಸು ಮೂಲಕ ಅನುದಾನ ಪಡೆದುಕೊಳ್ಳುವ ಸಂಪ್ರದಾಯ ಬೆಳೆದು ಬಂದಿದೆ.
ಸಂಘ-ಸಂಸ್ಥೆಗಳು ಕಾರ್ಯಕ್ರಮದ ವರದಿ, ಕಲಾವಿದರಿಗೆ ಹಣ ನೀಡಿದ ಆರ್​ಟಿಜಿಎಸ್​ನ ದಾಖಲೆ, ಆಡಿಟ್ ವರದಿ, ಪ್ರಮಾಣ ಪತ್ರವನ್ನು ಆನ್​ಲೈನ್ ಮೂಲಕ ಸಲ್ಲಿಸಿ ಅನುದಾನಕ್ಕೆ ಬೇಡಿಕೆ ಇಡುತ್ತಾರೆ. ಸರ್ಕಾರ ರಚಿಸಿದ ಸಮಿತಿಯು ದಾಖಲೆ ಪರಿಶೀಲಿಸಿ ಮೊತ್ತವನ್ನು ನಿಗದಿ ಮಾಡಿ ಇಲಾಖೆಗೆ ಶಿಫಾರಸು ಮಾಡುತ್ತದೆ. ಮುಂದಿನ ಹಂತದಲ್ಲಿ ಅರ್ಜಿದಾರರಿಗೆ ಸರ್ಕಾರ ಅನುದಾನವನ್ನು ಜಮಾ ಮಾಡುತ್ತದೆ.
ಅಸಮಾಧಾನ:2022ರ ಜೂನ್​ನಲ್ಲಿ ಅನುದಾನಕ್ಕೆ ಸಂಘ-ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು, 2023ರ ಮಾರ್ಚ್​ವರೆಗೂ ಪ್ರಕ್ರಿಯೆ ನಡೆಸಲಿಲ್ಲ. ಆರ್ಥಿಕ ವರ್ಷ ಕೊನೆಯಾಗುತ್ತಿದೆ, ಈಗಲೂ ಹಣ ಮಂಜೂರು ಮಾಡದಿದ್ದರೆ ಇಲಾಖೆಯ ಹಣ ವಾಪಾಸು ಹೋಗಲಿದೆ ಎಂದು ಕಲಾವಿದರು ದನಿ ಎತ್ತಿದ ಮೇಲೆ ಸರ್ಕಾರ ಹಂತಹಂತವಾಗಿ ಪಟ್ಟಿ ಬಿಡುಗಡೆ ಮಾಡಿತು. ಆದರೆ, ಸರ್ಕಾರ ರಚಿಸಿದ ಜಿಲ್ಲಾ ಸಮಿತಿಗಳೇ ಶಿಫಾರಸು ಮಾಡಿದ ಮೊತ್ತವನ್ನು ಪೂರ್ಣ ಮಾಡಿಲ್ಲ ಎಂಬುದು ಕಲಾವಿದರು, ಸಂಘಟಕರ ಅಸಮಾಧಾನವಾಗಿದೆ.
ಜಿಲ್ಲಾ ಸಮಿತಿಗಳಿಂದ ಕಡಿಮೆ ಮೊತ್ತ ಶಿಫಾರಸಾದ ಸಂಘಟನೆಗಳಿಗೆ ಹೆಚ್ಚಿನ ಮೊತ್ತ ನೀಡಲಾಗಿದೆ, ಉದ್ದೇಶಪೂರ್ವಕವಾಗಿ ಕೆಲವು ಸಂಘಟನೆಗಳಿಗೆ ಮೊತ್ತ ಕಡಿಮೆ ಮಾಡಲಾಗಿದೆ. ಈ ರೀತಿ ವ್ಯತ್ಯಾಸ ಮಾಡಲು ಬರುವುದಿಲ್ಲ. ಮಾರ್ಗಸೂಚಿ ಉಲ್ಲಂಘನೆಯಾಗುತ್ತದೆ. ಹೀಗಾಗಿ ಲೋಕಾಯುಕ್ತ ಮೆಟ್ಟಿಲೇರಿದ್ದೇವೆ ಎಂದು ಕಲಾ ಸಂಘಟಕ ಜಯಸಿಂಹ ವಿಜಯವಾಣಿಗೆ ತಿಳಿಸಿದ್ದಾರೆ.
ಬೆಳಗಾವಿ, ಕಾರವಾರ ಸೇರಿ ಇನ್ನೂ ಕೆಲವು ಜಿಲ್ಲೆಗಳಿಗೆ 2023 ಜೂನ್​ನಲ್ಲೂ ಅನುದಾನ ಬಿಡುಗಡೆ ಮಾಡಿಲ್ಲ. ನಾವು ಸರ್ಕಾರ ಹೇಳಿದ ಮಾರ್ಗದಲ್ಲೇ ಅರ್ಜಿ ಸಲ್ಲಿಸಿರುತ್ತೇವೆ, ಅದಕ್ಕೂ ಮುನ್ನ ಕಾರ್ಯಕ್ರಮ ನಡೆಸಿ ಖರ್ಚು ಮಾಡಿರುತ್ತೇವೆ, ಕಲಾವಿದರೆ ಹಣ ಕೊಟ್ಟಿರುತ್ತೇವೆ. ಒಂದು ವರ್ಷವಾದರೂ ಅನುದಾನ ಬಾಕಿ ಇಟ್ಟುಕೊಳ್ಳುವುದು ಎಷ್ಟು ಸರಿ ಎಂದು ಕಲಾ ಸಂಘಟಕರು ದನಿ ಎತ್ತಿದ್ದಾರೆ.
ಅನುಮಾನಾಸ್ಪದ ನಡೆ:ಚುನಾವಣೆಗೂ ಮುನ್ನ ಅನುದಾನ ಇಲ್ಲ ಎಂದು ಕೆಲವು ಸಂಘಟನೆಗಳ ಅನುದಾನ ತಡೆ ಹಿಡಿಯಲಾಯಿತು. ಆಸಕ್ತಿಕರ ಸಂಗತಿ ಎಂದರೆ ಮರು ದಿನವೇ, ಆಫ್​ಲೈನ್​ನಲ್ಲಿ ಸಲ್ಲಿಕೆಯಾಗಿದ್ದ ಹತ್ತಾರು ಸಂಘಟನೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ತನಿಖೆಗೆ ಕೋರಲಾಗಿದೆ ಎಂದು ಕಲಾ ಸಂಘಟಕ ಮಹೇಶ್ ಸುರ್ವೆ ತಿಳಿಸಿದ್ದಾರೆ.
ಅಧಿಕಾರಿಗಳು ಸರ್ಕಾರದ ಮಾರ್ಗಸೂಚಿ ಬದಿಗಿಟ್ಟು ‘ವ್ಯವಹಾರ’ ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಯಬೇಕು ಎಂಬುದು ನಮ್ಮ ಆಗ್ರಹ. ಜಂಟಿ ನಿರ್ದೇಶಕರ ವಿರುದ್ಧವೇ ಏಳು ದೂರು ಕೊಡಲಾಗಿದೆ, ಲೋಕಾಯುಕ್ತದಿಂದ ನ್ಯಾಯ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಜತೆಗೆ ಮೂರು ಜಂಟಿ ನಿರ್ದೇಶಕರನ್ನು ಬದಲಿಸಿ ಕನ್ನಡ ಸಂಸ್ಕೃತಿ ಇಲಾಖೆಯನ್ನು ರಕ್ಷಿಸಿ ಎಂಬುದು ಕಲಾವಿದರ ಒಕ್ಕೊರಲ ಆಗ್ರಹ. ಈ ದನಿಯನ್ನು ಸರ್ಕಾರಕ್ಕೆ ಮುಟ್ಟಿಸಲು ಕನ್ನಡ ಭವನದ ಮುಂದೆ ಹೋರಾಟವನ್ನೂ ಹಮ್ಮಿಕೊಂಡಿದ್ದೇವೆಂದು ತಿಳಿಸಿದರು.
ಸರ್ಕಾರದ ಮಾರ್ಗಸೂಚಿ ಬದಿಗಿಟ್ಟು ಅನುದಾನ ನೀಡಲಾಗಿದೆ. ಕೆಲವು ಸಂಘಸಂಸ್ಥೆಗಳಿಗೆ ಕೈತುಂಬ ಅನುದಾನ ಕೊಡಲಾಗಿದೆ. ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು.
| ಮಹೇಶ್ ಸುರ್ವೆ, ಕಲಾ ಸಂಘಟಕ
ರಾಜ್ಯದ ಉದ್ದಗಲಕ್ಕೂ ಇರುವ ಕಲಾ ಸಂಘಟಕರು ಕಲೆ ಸಂಸ್ಕೃತಿ ಚಟುವಟಿಕೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಎಲ್ಲರೂ ಶ್ರೀಮಂತರೇನಲ್ಲ, ಸಾಲಸೋಲ ಮಾಡಿ ಕಾರ್ಯಕ್ರಮ ನಡೆಸುತ್ತಾರೆ, ಕಲಾವಿದರಿಗೆ ಗೌರವಧನ ನೀಡುತ್ತಾರೆ. ಸರ್ಕಾರ ಅನುದಾನ ನೀಡಿದಾಗ ತಮ್ಮ ಹೊರೆ ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ, ಇಲಾಖೆ ಕೊಡಬೇಕಾದ ಅನುದಾನದಲ್ಲಿ ದೊಡ್ಡ ಮೊತ್ತ ಕಡಿತ ಮಾಡಿ ನೋವು ಕೊಟ್ಟಿದೆ ಎಂದು ರಾಮನಗರದ ಕಲಾ ಸಂಘಟಕ ಜಯಸಿಂಹ ಬೇಸರ ವ್ಯಕ್ತಪಡಿಸಿದರು. 3.5 ಲಕ್ಷ ರೂ. ಮಂಜೂರಾದವರಿಗೆ 2.5 ಲಕ್ಷ ರೂ. ಕೊಟ್ಟಿದ್ದಾರೆ, 5 ಲಕ್ಷ ಮಂಜೂರಾದವರಿಗೆ 3 ಲಕ್ಷ ಬಿಡುಗಡೆ ಮಾಡಿದ್ದಾರೆ. ಬಹಳಷ್ಟು ಕಲಾಸಂಘಟಕರು ಈ ತೀರ್ವನದಿಂದ ರೋಸಿಹೋಗಿದ್ದಾರೆಂದರು.
ಲೇಡಿ ಕಾನ್​​ಸ್ಟೆಬಲ್​ ಹೃದಯಾಘಾತದಿಂದ ಸಾವು; 2021ರಲ್ಲಿ ಪತಿ ಕರೊನಾಗೆ ಬಲಿ, ಈಗ ಒಂದೂವರೆ ವರ್ಷದ ಮಗು ಅನಾಥ

ಚಲಿಸುತ್ತಿದ್ದ ರೈಲಿನಡಿಗೆ ಸಿಲುಕಿಯೂ ಸಾವಿನಿಂದ ಪಾರಾದ ಮಹಿಳೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × four =
Remember me
