ಬೆಂಗಳೂರು:ರಾಜ್ಯ ಸರ್ಕಾರದ ಜತೆಗೆ ಆಡಳಿತಾರೂಢ ಬಿಜೆಪಿಯನ್ನೂ ಆವರಿಸಿಕೊಂಡಿದ್ದ ಗೊಂದಲಗಳಿಗೆಲ್ಲ ಪಕ್ಷದ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ತೆರೆ ಎಳೆದಿದ್ದು, ಬಿ.ಎಸ್​. ಯಡಿಯೂರಪ್ಪ ನಾಯಕತ್ವಕ್ಕೆ ಜೈಕಾರ ಹಾಕುವ ಜತೆಗೆ ಒಡಕುಧ್ವನಿಗೂ ಬರೆ ಹಾಕಿ ದೆಹಲಿಗೆ ಹಿಂದಿರುಗಿದ್ದಾರೆ.
ಪದೇಪದೆ ನಾಯಕತ್ವ ಬದಲಾವಣೆ ಅಪಸ್ವರ, ವರಿಷ್ಠರು ಸೂಚಿಸಿದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧವೆಂದು ಬಿಎಸ್​ವೈ ನೀಡಿದ ಹೇಳಿಕೆಯಿಂದಾಗಿ ಆತಂಕದ ಕಾಮೋರ್ಡ ಕವಿದಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಬೆಳವಣಿಗೆಯನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಿ ಅರುಣ್​ ಸಿಂಗ್​ ಅವರನ್ನು ಕಳುಹಿಸಿದ್ದರು. ಅಲ್ಲದೆ, “ನಹಿ ಹಿಲ್ನಾ ವಾಲೇ ದಾಂತ್​ ಕೋ ಕ್ಯುಂ ಹಿಲ್ನಾ ಚಾಹತೆ ಹೋ’ (ಅಲುಗಾಡದ ಹಲ್ಲನ್ನು ಅಲುಗಾಡಿಸುವ ಬಯಕೆ ಏಕೆ ?) ಎಂಬುದನ್ನು ಕೇಳಿ, ಸಣ್ಣ&ಪುಟ್ಟ ಸಮಸ್ಯೆಗಳಿದ್ದರೆ ಬಗೆಹರಿಸಿ ಬನ್ನಿ ಎಂಬ ಸೂಚನೆಯನ್ನೂ ನೀಡಿ ದ್ದರೆಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ನಿರೀೆಯಂತೆಯೇ ಬಿಎಸ್​ವೈ ನಾಯಕತ್ವಕ್ಕೆ ನಿಷ್ಠರಾಗಿರುವಂತೆ ಭಿನ್ನಮತೀಯರಿಗೆ ಸೂಚನೆ ನೀಡಿ, ಉಳಿದವರಿಗೂ ಸರ್ಕಾರ ಮತ್ತು ಪಕ್ಷದ ವಿರುದ್ಧ ಧ್ವನಿ ಎತ್ತದಂತೆ ಸಿಂಗ್​ ಖಡಕ್​ ಆಗಿ ಹೇಳಿದ್ದಾರೆ.ಕ್ರಮ ಶತ@ಸಿದ್ಧ: ಸಚಿವ ಆರ್​.ಅಶೋಕ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಮತ್ತು ಪಕ್ಷವಿರೋಧಿ ಹೇಳಿಕೆ ನೀಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದು ಶತ@ಸಿದ್ಧ. ಕೋರ್​ ಕಮಿಟಿ ಸಭೆಯೂ ಸ್ಪಷ್ಟ ಎಚ್ಚರಿಕೆ ನೀಡಿದೆ ಎಂದರು. ಅನಾಥ ಮಕ್ಕಳಿಗೆ 10 ಲಕ್ಷ ರೂ. ನೀಡುವ ಕೇಂದ್ರ ಸರ್ಕಾರದ ತೀರ್ಮಾನ ಹಾಗೂ ಸೋಂಕಿನಿಂದ ಮೃತಪಟ್ಟ ಬಡ ಕುಟುಂಬಗಳಿಗೆ 1 ಲಕ್ಷ ರೂ. ನೀಡುವ ರಾಜ್ಯ ಸರ್ಕಾರ ನಿರ್ಧಾರಕ್ಕೆ ಸಭೆ ಅಭಿನಂದನೆ ಸಲ್ಲಿಸಿದೆ.
ಅಶಿಸ್ತು ಗಂಭೀರ ಪರಿಗಣನೆಶುಕ್ರವಾರ ಸಂಜೆ ಕೋರ್​ ಕಮಿಟಿ ಸಭೆಯ ಮೂಲಕ ಅಂತ@ಕಲಹ, ವಾಕ್ಸಮರಕ್ಕೆ ತಾರ್ಕಿಕ ಅಂತ್ಯ ಕಾಣಿಸಿದ್ದು, ನಾಯಕತ್ವ ವಿಚಾರ ಹೊರತುಪಡಿಸಿ ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿ ಹಾಗೂ ಸಮನ್ವಯ ಸಾಧಿಸುವುದರ ಮೇಲೆ ಅರುಣ್​ ಸಿಂಗ್​ ಬೆಳಕು ಚೆಲ್ಲಿದ್ದಾರೆ. ಪಕ್ಷ ಮತ್ತು ಸರ್ಕಾರದ ವಿರುದ್ಧ ಹೇಳಿಕೆ ನೀಡಿದವರ ವಿರುದ್ಧ ನಿರ್ದಾಣ್ಯ ಕ್ರಮಗಳಾಗಲಿವೆ. ಯಾರೂ ಎಲ್ಲೆ ಮೀರಿ ಮಾತನಾಡದಂತೆ ಸೂಚಿಸಿ, ಅಂತಹ ಚಟುವಟಿಕೆಗಳ ಮೇಲೆ ನಿಗಾವಹಿಸಲು ಸೂಚಿಸಿದರೆಂದು ಮೂಲಗಳು ತಿಳಿಸಿವೆ. ಏನೇ ಕುಂದುಕೊರತೆಯಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು, ಸಾಧನೆಗಳು ಮಾತ್ರವೇ ಬಹಿರಂಗ ಹೇಳಿಕೆಯಾಗಬೇಕು ಎಂದು ತಾಕೀತು ಮಾಡಿದ್ದಾರೆ. ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್​ ಸಿಂಗ್​, “ಗೊಂದಲಗಳಿಂದ ಪಕ್ಷದ ಕಾರ್ಯಕರ್ತರಿಗೆ ನೋವುಂಟಾಗಿದೆ. ಹೀಗಾಗಿ ಪಕ್ಷವಿರೋಧಿ ಹೇಳಿಕೆ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇಬ್ಬರು ಮೂವರು ವೈರುಧ್ಯದ ಹೇಳಿಕೆ ನೀಡಿದ್ದು, ಸಕಾಲದಲ್ಲಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ. ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿಯೇ ಆದ್ಯತೆಯಾಗಬೇಕು ಎಂಬ ಸಲಹೆ ನೀಡಲಾಗಿದೆ’ ಎಂದು ಹೇಳಿದರು.
ವರದಿಯತ್ತ ಚಿತ್ತವರಿಷ್ಠರ ಅಣತಿಯಂತೆ ಅರುಣ್​ ಸಿಂಗ್​ ರಾಜ್ಯ ಪ್ರವಾಸದ 3 ದಿನ ಸರಣಿ ಸಭೆ ನಡೆಸಿ ಶುಕ್ರವಾರ ರಾತ್ರಿ ದೆಹಲಿಗೆ ಮರು ಪ್ರಯಾಣ ಬೆಳೆಸಿದ್ದಾರೆ. ಸಚಿವರ ಸಭೆ, ಶಾಸಕರ ಅಭಿಪ್ರಾಯ ಸಂಗ್ರಹ ಹಾಗೂ ಕೋರ್​ ಕಮಿಟಿ ಸಭೆಯಲ್ಲಿನ ಚರ್ಚೆ ಆಧರಿಸಿ ವರಿಷ್ಠರಿಗೆ ನೀಡಲಿರುವ ವರದಿ ಕಡೆಗೆ ಕುತೂಹಲದ ಚಿತ್ತ ನೆಟ್ಟಿದೆ. ಮೊದಲ ದಿನ ಸಚಿವರ ಸಭೆ ನಡೆಸಿದ್ದ ಅರುಣ್​ ಸಿಂಗ್​, ಇಲಾಖೆವಾರು ಪ್ರಗತಿ ವರದಿ ಪಡೆದುಕೊಂಡಿದ್ದರು. ಜತೆಗೆ ನಾಯಕತ್ವ ಬದಲಾವಣೆಗೆ ಕಾರಣಗಳೇನು ಎಂದು ತಿಳಿಯಲೂ ಪ್ರಯತ್ನಿಸಿದ್ದರು. ಮರುದಿನ ಶಾಸಕರೊಂದಿಗೆ ಮುಖಾಮುಖಿ ಸಮಾಲೋಚಿಸಿ ಅಭಿಪ್ರಾಯ ಪಡೆಯುವ ಜತೆಗೆ ಕರ್ತವ್ಯ, ಜವಾಬ್ದಾರಿಗಳ ಬಗ್ಗೆಯೂ ತಿಳಿಸಿದ್ದರು.
ವಿಶೇಷ ಸಭೆ ಫಿಕ್ಸ್​ಜೂನ್​ ಕೊನೆಯ ವಾರದಲ್ಲಿ ಅರುಣ್​ ಸಿಂಗ್​ ಪುನ@ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಜೂ.25ರಂದು ನಡೆಯಲಿರುವ ಪಕ್ಷದ ರಾಜ್ಯ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳುವರು. ಅಲ್ಲದೆ, ಪಕ್ಷದ ರಾಜ್ಯ ಸಮಿತಿ ಕಾರ್ಯಕಾರಿಣಿ ವಿಶೇಷ ಸಭೆ ಜೂ.26ರಂದು ನಿಗದಿಯಾಗಿದ್ದು, ಈ ಸಭೆಯಲ್ಲೂ ಸಿಂಗ್​ ಹಾಜರಿರಲಿದ್ದಾರೆ. ಇದೇ ಸಂದರ್ಭದಲ್ಲಿ ಸರ್ಕಾರದಲ್ಲಿನ ಗೊಂದಲ ನಿವಾರಣೆ ಹಾಗೂ ಸಂಟನಾ ಚಟುವಟಿಕೆಗಳಿಗೆ ಮಾಡಿಕೊಂಡ ತಯಾರಿಯನ್ನೂ ಪರಾಮರ್ಶಿಸಲಿದ್ದಾರೆಂದು ಮೂಲಗಳು ಹೇಳಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
