ಬೆಂಗಳೂರು:ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಚಿವ ವಿ ಸೋಮಣ್ಣ ಅವರ ಪುತ್ರ ಹೆಸರು ಹೇಳದೆ ಗುಡುಗಿದ್ದಾರೆ. ಇದೀಗ ಅರುಣ್ ಸೋಮಣ್ಣ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು ಹೊಸ ವಿವಾದ ಹುಟ್ಟಿದೆ.
ಸಚಿವ ವಿ ಸೋಮಣ್ಣ ಪುತ್ರ ಅರುಣ್ ಸೋಮಣ್ಣ, ಕಾರ್ಯಕ್ರಮವೊಂದರಲ್ಲಿ ‘ನಮ್ಮ ಪಕ್ಷದಲ್ಲಿ ಹಿರಿಯ ನಾಯಕರು ಇದ್ದಾರೆ. ಅವರು ತಮ್ಮ ಸೀಟನ್ನು ತ್ಯಾಗ ಮಾಡಿ ತಮ್ಮ ಮಗನನ್ನ ಕೂರಿಸಿದ್ದಾರೆ. ಈಗ ಅವನು ಇಡೀ ಕರ್ನಾಟಕಕ್ಕೆ ಅವನೇ ನೆಕ್ಸ್ಟ್ ಲೀಡರ್ ಅನ್ನೊ ರೀತಿ ಓಡಾಡ್ತಿದಾನೆ. ನಾನು ನಿನ್ನೆ ಫೋನ್ ಮಾಡಿದ್ರೆ ಮಹಾಪುರುಷ ಏಕ ವಚನದಲ್ಲಿ ಮಾತಾಡಿದ್ದಾನೆ.
ಇದನ್ನೂ ಓದಿ:ನಾನು ಬಿಜೆಪಿ ಬಿಟ್ಟು ಹೋಗಲ್ಲ; ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿದ ಸಚಿವ ವಿ.ಸೋಮಣ್ಣ
ಅದಕ್ಕೆ ನಾನು ‘ಸರ್ ಮರ್ಯಾದೆ ಕೊಟ್ಟು ಮಾತಾಡ್ತಿದೀನಿ. ನಾನು ಏಕವಚನದಲ್ಲಿ ಮಾತನಾಡಬಹುದು’ ಎಂದು ನಾನು ತಿರುವಾಕ್ಕೊಂಡು ಏಕ ವಚನದಲ್ಲಿ ಮಾತನಾಡಿದೆ. ನಾನು ರಾಜಕಾರಣಿಯಾಗಿ ಹುಟ್ಟಿಲ್ಲ, ನಾನು ರಾಜಕಾರಣಿಯಾಗಿ ಸಾಯಲ್ಲ’ ಎಂದು ಹೆಸರು ಹೇಳದೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಪುತ್ರ ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ.
ಇದನ್ನೂ ಓದಿ:ವಿ.ಸೋಮಣ್ಣ, ಡಿಕೆಶಿ ಜತೆ ಜತೆಯಲಿ; ಕಾಂಗ್ರೆಸ್​ ಸೇರ್ತಾರಾ ಸಚಿವರು?
ಇದೀಗ ವಿಜಯೇಂದ್ರ ವಿರುದ್ಧ ಅರುಣ್ ಸೋಮಣ್ಣ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು ಈ ಘಟನೆ ಬಿಜೆಪಿಯ ಒಳಗೂ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − nineteen =
Remember me
