ಬೆಂಗಳೂರು:ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪ್ರೋತ್ಸಾಹಿಸುವುದಕ್ಕೆ ಮೀಸಲಾಗಿರುವ ಪಂಚಮ ನಿಷಾದ ಸಂಸ್ಥೆಯ 14ನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ಆಷಾಡ ಏಕಾದಶಿ ವಿಶೇಷ ಬೋಲಾವ ವಿಠಲ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಶನಿವಾರ ಸಂಜೆ 6 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಭಾವಪೂರ್ಣವಾದ ಅಭಂಗಗಳ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕರಾದ ಜಯತೀರ್ಥ ಮೇವುಂಡಿ ಮತ್ತು ದೇವಕಿ ಪಂಡಿತ್ ಅಭಂಗಗಳನ್ನು ಪ್ರಸ್ತುತಪಡಿಸಲಿದ್ದಾರೆ. ಇವರೊಂದಿಗೆ ತಬಲಾದಲ್ಲಿ ನಿಖಿಲ್ ಪಾಠಕ್, ಪಖವಾಜ್‌ನಲ್ಲಿ ಸುಖದ್ ಮುಂಡೆ, ಇತರ ವಾದ್ಯಗಳಲ್ಲಿ ಸೂರ್ಯಕಾಂತ್ ಸುರ್ವೆ, ಹಾರ್ಮೋನಿಯಂನಲ್ಲಿ ಆದಿತ್ಯ ಓಕೆ ಮತ್ತು ಕೊಳಲು ವಾದನದಲ್ಲಿ ಷಡ್ಜ್ ಗೋಡ್ಖಿಂಡಿ ಸಾಥ್ ನೀಡಲಿದ್ದಾರೆ.
ಬೋಲಾವ ವಿಠಲ ಕಾರ್ಯಕ್ರಮ ಭಕ್ತಿಯಲ್ಲಿ ಮುಳುಗೇಳುವ ಒಂದು ಪಯಣವಾಗಿದ್ದು, ಸಂಗೀತದಲ್ಲಿರುವ ಶಕ್ತಿಯ ಮೂಲಕ ಭಕ್ತಿಯನ್ನು ಪ್ರೇಕ್ಷಕರಿಗೆ ತಲುಪಿಸಲು ಈ ಕಾರ್ಯಕ್ರಮವನ್ನು ಆಯೋಜಿಸುರುವುದಾಗಿ ಪಂಚಮ ನಿಷಾದ ಸಂಸ್ಥೆಯ ಸಂಸ್ಥಾಪಕ ಶಶಿವ್ಯಾಸ್ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
