ಬೆಂಗಳೂರು :ಸಾಮಾಜಿಕ ಸಮಾನತೆಯ ಧ್ವನಿಯಾಗಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಅವರು ಆಂಗ್ಲಭಾಷೆಯ ಜೊತೆಗೆ ಮಾತೃಭಾಷೆ ಕಡ್ಡಾಯವಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅವರ ಆಶಯಕ್ಕೆ ನನ್ನ ಸಂಪೂರ್ಣ ಸಹಮತವಿರಲಿದೆ ಎಂದು ಹೈಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ವತಿಯಿಂದ ಸೋಮವಾರ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು. ಗುಜರಾತಿ ನನ್ನ ಮಾತೃಭಾಷೆಯಾಗಿದ್ದು, ಕನ್ನಡ ನನ್ನ ಕರ್ಮ( ಉದ್ಯೋಗ) ಭಾಷೆಯಾಗಿರಲಿದೆ. ಫೆ1ರಂದು ವಿಶ್ವ ಮಾತೃಭಾಷಾ ದಿನವನ್ನು ಆಚರಿಸಿದ್ದೇವೆ ಎಂದು ನೆನಪಿಸಿದರು.
ನನಗೆ ಕರ್ನಾಟಕದೊಂದಿಗೆ ವಿಶೇಷ ಸಂಬಂಧವಿದೆ. ಮೊದಲಿಗೆ ನಾನು ಫೆಲೋಶಿಪ್ ಸ್ವೀಕರಿಸಿದ್ದು ಕರ್ನಾಟಕದವರಾದ ವಿಶ್ರಾಂತ ಸಿಜೆಐ ಎನ್.ವಿ. ವೆಂಕಟಾಚಲಯ್ಯ ಅವರಿಂದ. ಅಲ್ಲದೆ, ನಾನು ನ್ಯಾಯಮೂರ್ತಿಯಾಗಿ ನೇಮಕಗೊಂಡಾಗ ವೀರಪ್ಪ ಮೊಯ್ಲಿ ಕೇಂದ್ರ ಕಾನೂನು ಸಚಿವರಾಗಿದ್ದರು. ಗುಜರಾತ್ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ನೇಮಕಗೊಂಡಾಗ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಅವರೊಂದಿಗೆ ಪೀಠ ಹಂಚಿಕೊಂಡಿದ್ದೆ. ಬಳಿಕ ಅವರು ಕರ್ನಾಟಕ ಹೈಕೋರ್ಟ್ ಸಿಜೆಯಾಗಿದ್ದರು ಎಂದು ಸ್ಮರಿಸಿದರು.
ಗುಜರಾತ್- ಕರ್ನಾಟಕ ರಾಜ್ಯಗಳ ಮಧ್ಯೆ ಅವಿನಾಭಾವ ಸಂಬಂಧವಿದೆ. ಕರ್ನಾಟಕದಲ್ಲಿ ಚಾಲುಕ್ಯ ರಾಜಮನೆತನ ಗುಜರಾತ್‌ನಲ್ಲಿ ಆಳ್ವಿಕೆ ನಡೆಸಿದೆ. ರಾಷ್ಟ್ರಕವಿ ಕುವೆಂಪು ಮತ್ತು ಗುಜರಾತ್ ಉಮಾಶಂಕರ್ ಜೋಶಿ 1967ರಲ್ಲಿ ಜಂಟಿಯಾಗಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದರು. ನನಗೂ ಸ್ವಲ್ಪ ಸಾಹಿತ್ಯದ ಮೇಲೆ ಒಲವಿದೆ ಎಂದರು.
ಸಾಂಸ್ಕೃತಿಕವಾಗಿ ಕರ್ನಾಟಕವು ಶ್ರೀಮಂತವಾಗಿದ್ದು ಖ್ಯಾತನಾಮ ಸಂಗೀತಗಾರರು, ಕವಿಗಳ ತವರೂರಾಗಿದೆ. ಭೀಮಸೇನ ಜೋಶಿ, ಕುಮಾರ ಗಂಧರ್ವರು ಇಲ್ಲಿನವರೇ ಆಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.ಹೈಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳು, ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ, ವಕೀಲರ ಪರಿಷತ್ ಅಧ್ಯಕ್ಷ ವಿಶಾಲ್ ರಘು ಸೇರಿ ಹಲವು ವಕೀಲರು ಭಾಗವಹಿಸಿದ್ದರು.
ಇ-ಐಎಲ್‌ಆರ್‌ಗೆ ಚಾಲನೆತೀರ್ಪುಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಒದಗಿಸುವ ಇ-ಐಎಲ್‌ಆರ್‌ಗೆ (ಇಂಡಿಯನ್ ಲಾ ರಿಪೋರ್ಟ್) ಕರ್ನಾಟಕ ಹೈಕೋರ್ಟ್ ಚಾಲನೆ ನೀಡಿದೆ. ಇ-ಕೋರ್ಟ್ ಪ್ರಾಜೆಕ್ಟ್ ಭಾಗವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ನ್ಯಾಯಾಧೀಶರು, ವಕೀಲರು ಮತ್ತು ಸಾರ್ವಜನಿಕರು ಉಚಿತವಾಗಿ ಈ ಸೇವೆ ಪಡೆಯಬಹುದು ಎಂದು ಹೈಕೋರ್ಟ್ ತಿಳಿಸಿದೆ. ನ್ಯಾಯಮೂರ್ತಿಗಳು, ನ್ಯಾಯಾಂಗ ಅಧಿಕಾರಿಗಳು, ವಕೀಲರು, ದಾವೆದಾರರು, ಸರ್ಕಾರಿ ಅಧಿಕಾರಿಗಳು, ಕಾನೂನು ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಇದನ್ನು ರೂಪಿಸಲಾಗಿದೆ. ಬಳಕೆದಾರರ ಸ್ನೇಹಿ ಅಂಶಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಇ-ಕೋರ್ಟ್ ಯೋಜನೆಯ ಮೂರನೇ ಫೇಸ್ ಭಾಗವಾಗಿ ಇದನ್ನು ಪರಿಚಯಿಸಲಾಗಿದೆ. ಹೈಕೋರ್ಟ್ ಸಮಗ್ರ ಮತ್ತು ವರದಿ ಮಾಡಬಹುದಾದ ಕೇಸ್ ಲಾಗಳನ್ನು ಇದು ಒಳಗೊಂಡಿದೆ. ಹೈಕೋರ್ಟ್ ನೆರವಿನೊಂದಿಗೆ ಕರ್ನಾಟಕ ಕಾನೂನು ವರದಿಗಾರಿಕೆ ಒಕ್ಕೂಟ ಇದನ್ನು ಪರಿಚಯಿಸಿದೆ
ಕೋಟ್:ನ್ಯಾಯದಾನ ಮಾಡಲು ಶುಭ ಸೂಚಕ ಮತ್ತು ಬಲ ಎರಡೂ ಬೇಕು. ಇವೆರಡನ್ನೂ ಗಣೇಶ ಮತ್ತು ಹನುಮ ದರ್ಶನದ ಮೂಲಕ ಪಡೆದಿದ್ದೇನೆ. ಬೆಂಗಳೂರು ಅತ್ಯುತ್ತಮ ವಾತಾವರಣ ಹೊಂದಿರುವ ನಗರವಾಗಿದ್ದು, ಇಂಥ ಜಾಗದಲ್ಲಿ ಕೆಲಸ ಮಾಡುವ ಇಚ್ಛೆ ಹೊಂದಿದ್ದೆ. ಈಗ ನಾವೆಲ್ಲರೂ ಕೂಡಿ ಸಾಂವಿಧಾನಿಕ ವಾತಾವರಣವನ್ನು ಎತ್ತಿ ಹಿಡಿಯೋಣ.-ಎನ್.ವಿ. ಅಂಜಾರಿಯ, ಹೈಕೋರ್ಟ್ ಸಿಜೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
