ಬೆಂಗಳೂರು:ವಿಶ್ವ ಪರಿಸರ ದಿನದ ಅಂಗವಾಗಿ ವಿದ್ಯುನ್ಮಾನ ತ್ಯಾಜ್ಯ(ಇ–ವೇಸ್ಟ್)ಕುರಿತ ಜಾಗೃತಿ ಮೂಡಿಸಲು ಓರಾಯನ್ ಮಾಲ್ ಬ್ರಿಗೇಡ್ ಗೇಟ್‌ವೇನಲ್ಲಿ25ಅಡಿ ಎತ್ತರದ ಇ–ವೇಸ್ಟ್ ಮ್ಯೂರಲ್(ವಿದ್ಯುನ್ಮಾನ ತ್ಯಾಜ್ಯಗಳಿಂದ ರೂಪಿಸಿದ ಭಿತ್ತಿಚಿತ್ರ)ರೂಪಿಸಿದೆ.
ಇ–ವೇಸ್ಟ್ ಕಲಾಕೃತಿಗಳನ್ನು ರಚಿಸುವಲ್ಲಿ ವಿಶೇಷ ಪರಿಣತಿ ಹೊಂದಿರುವ ಖ್ಯಾತ ಕಲಾವಿದ ದಾವಣಗೆರೆಯ ವಿಶ್ವನಾಥ್ ಮಲ್ಲಬಾಡಿ ಅವರು ಈ ಕಲಾಕೃತಿಯನ್ನು ರಚಿಸಿದ್ದಾರೆ.ಕೀಬೋರ್ಡ್‌ಗಳು,ರಿಮೋಟ್ ಕಂಟ್ರೋಲ್‌ಗಳು,ಇಂಟರ್‌ನೆಟ್ ಕೇಬಲ್‌ಗಳು,ಎಕ್ಸಿಟ್ ಫ್ಯಾನ್‌ಗಳು,ವಿಡಿಯೋ ಕಾನ್ಫೆರೆನ್ಸ್ ಉಪಕರಣಗಳು,ಕ್ಯಾಸೆಟ್‌ಗಳು,ವೈಯರ್‌ಲೆಸ್ ಫೋನ್‌ಗಳು,ಸಿಡಿ,ಡಿವಿಡಿ ಮುಂತಾದ ಇ–ವೇಸ್ಟ್‌ಗಳಿಂದ ಈ ಬೃಹತ್ ಕಲಾಕೃತಿಯನ್ನು ನಿರ್ಮಿಸಲಾಗಿದೆ.
ಮುಂದಿನ ಒಂದು ವರ್ಷದವರೆಗೆ ಈ ಕಲಾಕೃತಿ ಮಾಲ್‌ನಲ್ಲಿ ಖಾಯಂ ಆಗಿ ಇರಲಿದೆ.ಈ ಕಲಾಕೃತಿ ರಚನೆಗಾಗಿ ಕಳೆದ ಎರಡು ತಿಂಗಳಿಂದ ವಿಶೇಷ ಅಭಿಯಾನ ನಡೆಸಿ ಓರಾಯನ್ ಮಾಲ್‌ಗಳಿಂದ ಇ–ವೇಸ್ಟ್ ಸಂಗ್ರಹಿಸಲಾಗಿತ್ತು.
ನಗರದಲ್ಲಿ ಹೆಚ್ಚುತ್ತಿರುವ ವಿದ್ಯುನ್ಮಾನ ತ್ಯಾಜ್ಯದ ಸಮಸ್ಯೆಯನ್ನು ನಿಭಾಯಿಸಲು ಬ್ರಿಗೇಡ್ ಗ್ರೂಪ್ ಮುಂದಾಗಿದೆ.ವಿದ್ಯುನ್ಮಾನ ತ್ಯಾಜ್ಯ ಮರುಬಳಕೆಗೆ ಸರ್ಕಾರದಿಂದ ಅಧಿಕೃತ ಮಾನ್ಯತೆ ಹೊಂದಿರುವ ಝೊಲೋಪಿಕ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಬ್ರಿಗೇಡ್ ಗ್ರೂಪ್,ಇ–ವೇಸ್ಟ್ ಸಂಗ್ರಹಕ್ಕೆ ಶಾಶ್ವತ ಘಟಕ ಸ್ಥಾಪಿಸಿದೆ.
ಪರಿಸರ ಪ್ರಜ್ಞೆಯನ್ನು ಪೋಷಿಸಲು ವರ್ಷಪೂರ್ತಿ ವಿದ್ಯುನ್ಮಾನ ತ್ಯಾಜ್ಯ ಸಂಗ್ರಹಣೆಗೆ ಅವಕಾಶ ಮಾಡಿಕೊಡಲು ಓರಾಯನ್ ಮಾಲ್‌ಗಳಲ್ಲಿ ಶಾಶ್ವತ ಇ–ವೇಸ್ಟ್ ಸಂಗ್ರಹ ಘಟಕವನ್ನು ಸ್ಥಾಪಿಸಿರುವುದಾಗಿ ಬ್ರಿಗೇಡ್ ಗ್ರೂಪ್‌ನ ರಿಟೇಲ್ ವಿಭಾಗದ ಉಪಾಧ್ಯಕ್ಷ ಸುನಿಲ್ ಮುನ್ಷಿ ಹೇಳಿದ್ದಾರೆ.
‘‘ವಿದ್ಯುನ್ಮಾನ ತ್ಯಾಜ್ಯ ಕುರಿತು ಜಾಗೃತಿ ಮೂಡಿಸಲು,ಇ–ವೇಸ್ಟ್‌ನ್ನು ಎಲ್ಲೆಂದರಲ್ಲಿ ಎಸೆಯುವ ಬದಲಿಗೆ ಅವುಗಳನ್ನು ಪುನರ್ ಬಳಕೆ ಮಾಡುವುದರ ಕುರಿತ ಸಂದೇಶ ಹರಡಲು ಈ ಕಲಾಕೃತಿ ಪೂರಕವಾಗಿದೆ.ಮುಂದಿನ ಪೀಳಿಗೆಗಾಗಿ ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ ’’
–ವಿಶ್ವನಾಥ್ ಮಲ್ಲಬಾಡಿ,ಕಲಾವಿದ,ದಾವಣಗೆರೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
