ಬೆಂಗಳೂರು:ಲೋಕಸಭೆಯಲ್ಲಿ ‘ ಪ್ಯಾಲೆಸ್ಟೈನ ಗೆ ಜಯಕಾರದ ಘೋಷಣೆ ಕೂಗುವ ಅಸಾದುದ್ದೀನ ಓವೈಸಿಯ ಸಂಸತ್ ಸದಸ್ಯತ್ವ ರದ್ದುಗೊಳಿಸಲು ‘ ವೈಶ್ವಿಕ ಹಿಂದೂರಾಷ್ಟ್ರ ಮಹೋತ್ಸವದಲ್ಲಿ ಠರಾವು ಹೊರಡಿಸಲಾಗಿದೆ ಎಂದು ಹಿಂದು ಜನಜಾಗೃತಿ ಸಮಿತಿ ತಿಳಿಸಿದೆ.
ಎಂ.ಐ.ಎಂ ನ ಭಾಗ್ಯನಗರದ ಸಂಸದ ಅಸದುದ್ದೀನ ಓವೈಸಿ ಲೋಕಸಭಾ ಸದಸ್ಯತ್ವದ ಪ್ರಮಾಣ ವಚನ ಸ್ವೀಕಾರದ ವೇಳೆ ಜಯ ಭೀಮ, ಜಯಮೀಮ, ‘ಅಲ್ಲಾಹು ಅಕಬರ’ ಘೋಷಣೆಗಳ ಜತೆಗೆ  ಜಯ ಫಿಲಿಸ್ತಾನ (ಪ್ಯಾಲೆಸ್ಟೈನ) ಎಂದು ಘೋಷಣೆ ಕೂಗಿರುವುದು ಭಾರತದ ಸಂವಿಧಾನದ ಅನುಚ್ಛೇದ ಕಲಂ 102 (ಅ) ಪ್ರಕಾರ, ಕಾನೂನುಬಾಹಿರ ,ಬೇರೆ ದೇಶಕ್ಕೆ ನಿಷ್ಠೆ ತೊರುವುದು ದೇಶದ್ರೋಹ, ಜತೆಗೆ ಇದು ಭಾರತಕ್ಕೆ ಮಾಡಿದ ಅವಮಾನವಾಗಿದೆ. ಈ ನಿಟ್ಟಿನಲ್ಲಿ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಅಸದುದ್ದೀನ ಓವೈಸಿಯನ್ನು ತೀವ್ರವಾಗಿ ಖಂಡಿಸಿದ್ದಲ್ಲದೇ ಲೋಕಸಭೆ ಸಭಾಪತಿ ಮತ್ತು ಕೇಂದ್ರೀಯ ಸಂಸದೀಯ ವ್ಯವಹಾರಗಳ ಸಚಿವರಿಗೆ ಅಸದುದ್ದೀನ ಓವೈಸಿಯನ್ನು ಸಂಸತ್ತಿನ ಸದಸ್ಯತ್ವದಿಂದ ರದ್ದುಗೊಳಿಸುವ ಬೇಡಿಕೆ ಇಡಲು ಠರಾವು ಮಾಡಲಾಯಿತು.
ಈಗ ಜೈ ಪ್ಯಾಲೆಸ್ಟೈನ್ ಎಂದು ಹೇಳುವವರು ನಾಳೆ ಜೈ ಹಮಾಸ್ ಹಾಗೂ ’ಜೈ ಪಾಕಿಸ್ತಾನ’ ಎಂದು ಹೇಳಲೂ ಹಿಂದು ಮುಂದು ನೋಡುವುದಿಲ್ಲ. ಆದುದರಿಂದ ಓವೈಸಿ ಅವರ ಮೇಲೆ ಚುನಾವಣೆಗೆ ಸ್ಪರ್ಧಿಸಲು ಶಾಶ್ವಸಿದರು.ಹೇರಬೇಕು, ಎಂದು ಆಗ್ರಹಿಸಲಾಯಿತು. ಇದೇ ವೇಳೆ ಪ್ರಮಾಣ ವಚನ ಸ್ವೀಕರಿಸುವಾಗ ಭಾಜಪ ಸಂಸದ ಛತ್ರಪಾಲ ಗಂಗವಾರ ಜಯ ಹಿಂದೂ ರಾಷ್ಟ್ರ ಜಯ ಭಾರತ್ ಎಂದು ಘೋಷಣೆ ಕೂಗಿರುವುದು ನಾವು ಸ್ವಾಗತಿಸುತ್ತೇವೆ’ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ ಶಿಂದೆ ತಿಳಿಸಿದರು.
ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ ಯುವಕರನ್ನು ಸೆಳೆಯಲು ಕರ್ನಾಟಕದ ದೇವಸ್ಥಾನದ ಬಳಿ ಇರುವ ಕೆರೆಗಳನ್ನು ಸ್ವಚ್ಛಗೊಳಿಸುವ ಅಭಿಯಾನ ಪ್ರಾರಂಭಿಸಿದೆವು. ಈವರೆಗೆ 250 ಕ್ಕೂ ಹೆಚ್ಚು ಕೆರೆಗಳನ್ನು ಸ್ವಚ್ಛಗೊಳಿಸಿದ್ದೆವೆ. ಇದರಿಂದ ದೇವಸ್ಥಾನಕ್ಕೆ ಬರುವ ಭಕ್ತರ ಶ್ರದ್ಧೆ ಹೆಚ್ಚಾಗಿದೆ. ನಂತರ ನದಿಗಳ ಸ್ವಚ್ಛತಾ ಅಭಿಯಾನ ಕೈಗೆತ್ತಿಕೊಂಡು ಸ್ಥಳೀಯ ಹಿಂದೂಗಳ ಸಹಕಾರದಿಂದ ರಾಜ್ಯದಲ್ಲಿನ 9ರಿಂದ 10 ನದಿಗಳನ್ನು ಸ್ವಚ್ಛತೆ ಮಾಡಿದ್ದೇವೆ. ಪ್ರಸ್ತುತ, ಕರ್ನಾಟಕದ 5-6 ನದಿಗಳ ಸ್ಥಳಗಳಲ್ಲಿ ಪ್ರತಿ ವರ್ಷ ಆರತಿ ನಡೆಯುತ್ತಿದೆ ಎಂದು ಹೇಳಿದ ಅವರು, ಈ ಅಭಿಯಾನದ ಮೂಲಕವೂ ಅನೇಕ ಯುವಕರು ಧರ್ಮಕಾರ್ಯಕೈ ಜೋಡಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬೆಂಗಳೂರಿನ ರಾಷ್ಟ್ರ ಧರ್ಮ ಸಂಘಟನೆ ಸಂಸ್ಥಾಪಕ ಸಂತೋಷ ಕೆಂಚಾಂಬ ಮಾತನಾಡಿ ಭಾರತದ ಬಗ್ಗೆ 18 ನೇ ಶತಮಾನದಲ್ಲಿ ತಪ್ಪು ಕಲ್ಪನೆಗಳನ್ನು ಇತರ ದೇಶಗಳಲ್ಲಿ ಹರಡಲಾಗಿತ್ತು. ಈಗ ವಾಟ್ಸ್ ಆ್ ಜಗತ್ತು ಅತಿ ದೊಡ್ಡ ವಿಶ್ವವಿದ್ಯಾಲಯವಾಗಿದೆ. ಸದ್ಯ ಮುಖ್ಯ ಪ್ರಸಾರ ಮಾಧ್ಯಮಗಳ ಪ್ರಾಬಲ್ಯ ಕಡಿಮೆಯಾಗಿದ್ದು, ಸಾಮಾಜಿಕ ಮಾಧ್ಯಮಗಳ ಪ್ರಾಬಲ್ಯ ಹೆಚ್ಚಾಗಿದೆ. ಸದ್ಯ ಸಾಮಾನ್ಯ ಜನರು ಹೋರಾಟ, ಘಟನೆ, ಒಳ್ಳೆಯ ಹಾಗೂ ಕೆಟ್ಟ ಪ್ರಸಂಗಗಳಲ್ಲಿ ಮೊದಲು ಮೊಬೈಲ್ ತೆಗೆದು ಚಿತ್ರೀಕರಣ ಮಾಡುವ ಮೂಲಕ ಎಲ್ಲರೂ ಪತ್ರಕರ್ತರಾಗುತ್ತಿದ್ದಾರೆ. ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂ ವಿರೋಧಿ ಪ್ರಸಾರವನ್ನು ಎದುರಿಸುವುದು ಹೇಗೆ ಎಂಬುದು ತಿಳಿಸಿದರು.
ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಡಾ.ಎಸ್ .ಆರ್.ಲೀಲಾ ಮಾತನಾಡಿ ಸದ್ಯ ಭಾರತದಲ್ಲಿ ಸ್ವಾತಂತ್ರ್ಯವಿಲ್ಲ, ಎನ್ನುವ ನರೆಟಿವ್ ವನ್ನು ಹರಡಲಾಗುತ್ತಿದೆ. ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿತು’, ಎನ್ನುವ ನರೆಟಿವ್ ಮೊದಲಿನಿಂದಲೂ ರೂಪಿಸಲಾಗಿದೆ. ಕಾಂಗ್ರೆಸ್ ನಮಗೆ ಸ್ವಾತಂತ್ರ್ಯ ದೊರಕಿಸಿಕೊಡಲಿಲ್ಲ, ಬದಲಾಗಿ ದೇಶದ ವಿಭಜನೆಯನ್ನು ಮಾಡಿದ್ದು,ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ ಭಾರತದ ವಿಭಜನೆಗೆ ಹೊಣೆಯಾಗಿದೆ ಎಂದು ಆರೋಪಿಸಿದ ಅವರು, ಭಾರತದಲ್ಲಿ ಮುಸಲ್ಮಾನರ ಮೇಲೆ ಅನ್ಯಾಯವಾಗುತ್ತಿದೆ, ಎಂದು ಸುಳ್ಳು ನರೆಟಿವ್‌ವನ್ನು ಕಾಂಗ್ರೆಸ್ ಹಬ್ಬಿಸಿದೆ. ಈ ಅಪಪ್ರಚಾರದ ವಿರುದ್ಧ ಪ್ರತಿದಾಳಿ ನಡೆಸುವ ’ನರೆಟಿವ್’ಅನ್ನು ನಮಗೆ ಸಿದ್ಧಪಡಿಸಬೇಕಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
