ನರೇಗಲ್ಲ(ಗದಗ):ಲಾಕ್​ಡೌನ್ ನಿಯಮ ಉಲ್ಲಂಘಿಸುವವರಿಗೆ ಬುದ್ಧಿ ಹೇಳಲು ಸ್ವತಃ ಆಶಾ ಕಾರ್ಯಕರ್ತೆಯರೇ ಲಾಠಿ ಹಿಡಿದು ಬೀದಿಗಿಳಿದಿದ್ದಾರೆ.
ಸಮೀಪದ ಮಾರನಬಸರಿ ಹಾಗೂ ಜಕ್ಕಲಿಯ ಆಶಾ ಕಾರ್ಯಕರ್ತೆಯರು ಗ್ರಾಮಗಳಲ್ಲಿ ಬೇಕಾಬಿಟ್ಟಿಯಾಗಿ ತಿರುಗಾಡುವ ವಾಹನ ಸವಾರರಿಗೆ, ಹರಟೆ ಕಟ್ಟೆಗಳ ಮೇಲೆ ಗುಂಪು ಗುಂಪಾಗಿ ಕುಳಿತು ಹರಟೆ ಹೊಡೆಯುವವರಿಗೆ ಹಾಗೂ ಮಾಸ್ಕ್ ಧರಿಸದೇ ಓಡಾಡುವರಿಗೆ ಬುದ್ಧಿ ಕಲಿಸುತ್ತಿದ್ದಾರೆ.
ತಿಳಿವಳಿಕೆ ಹೇಳಿದರೂ ಗ್ರಾಮಸ್ಥರು ಮಾಸ್ಕ್ ಧರಿಸದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದರು. ಗುಂಪು ಗುಂಪಾಗಿ ಕುಳಿತು ಹರಟೆ ಹೊಡೆಯುತ್ತಿದ್ದರು. ಪೊಲೀಸರು ಬರುತ್ತಿದ್ದಂತೆ ಎಲ್ಲರೂ ಓಡಿ ತಮ್ಮ ಮನೆಗಳನ್ನು ಸೇರುತ್ತಿದ್ದರು. ಆದ್ದರಿಂದ, ನಾವು ಸ್ವಯಂ ಪ್ರೇರಣೆಯಿಂದ ಲಾಠಿ ಹಿಡಿದು ಬುದ್ಧಿ ಹೇಳಲು ಮುಂದಾಗಿದ್ದೇವೆ. ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸುವ ಮೂಲಕ ನಮ್ಮ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ಕಾರ್ಯಕರ್ತೆಯರಾದ ಬಸಮ್ಮ ಅಂಗಡಿ, ಪದ್ಮಾ ಅಬ್ಬಿಗೇರಿ, ರತ್ನಾ ತಳವಾರ ತಿಳಿಸಿದರು.
ಕ್ರೀಡೆ ನಿಂತರೂ, ತರಬೇತಿ ಮುಂದುವರಿಕೆ! ಕ್ರಿಕೆಟ್, ಬ್ಯಾಡ್ಮಿಂಟನ್, ಫುಟ್​ಬಾಲ್​ನಲ್ಲೂ ಆನ್​ಲೈನ್ ಪಾಠ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
