ಬೆಂಗಳೂರು:ವಿಶಾಖಪಟ್ಟಣದಲ್ಲಿ ತಯಾರಾಗುವ ಮಾದಕ ದ್ರವ್ಯ ರಾಜ್ಯ ರಾಜಧಾನಿಯ ಕಾಳಸಂತೆಗೆ ಕಾಲಿಟ್ಟಿದ್ದು, ಈ ಜಾಲವನ್ನು ಬೇಧಿಸಿರುವ ಸುದ್ದುಗುಂಟೆಪಾಳ್ಯ ಪೊಲೀಸರು ಇಬ್ಬರು ಡ್ರಗ್ಸ್ ಪೆಡ್ಲರ್​ಗಳನ್ನು ಬಂಧಿಸಿದ್ದಾರೆ.
ಈ ಮಾದಕ ದ್ರವ್ಯದ ಬೆಲೆ ಒಂದು ಗ್ರಾಂಗೆ 3ರಿಂದ 5 ಸಾವಿರ ರೂಪಾಯಿ! ಡ್ರಗ್ಸ್, ಅಫೀಮು, ಗಾಂಜಾ,‌ ಕೊಕೈನ್ ಗಿಂತ ಹೆಚ್ಚು ನಶೆಯಲೇರಿಸುವ ಮಾದಕದ್ರವ್ಯವೇ ‘ಹ್ಯಾಶಿಷ್ ಆಯಿಲ್’. ವಿಶಾಖಪಟ್ಟಣದಲ್ಲಿ ತಯಾರಾಗುವ ಈ ಮಾದಕದ್ರವ್ಯಕ್ಕೆ ಬೆಂಗಳೂರಿಗೆ ಬಹುಬೇಡಿಕೆಯಿದ್ದು, ಈ ಡ್ರಗ್ಸ್​ ಬೆಡ್ಲರ್​ಗಳಿಗೆ ಐಟಿಬಿಟಿ ಉದ್ಯೋಗಿಗಳೇ ಟಾರ್ಗೆಟ್ ಎಂಬ ಆತಂಕಕಾರಿ ವಿಚಾರವೂ ಬಯಲಾಗಿದೆ.
ಇದನ್ನೂ ಓದಿರಿಲಾಕ್​ಡೌನ್​ ವೇಳೆ ಗಾಂಜಾ ಮಾರಾಟ, ಮನೆಯಲ್ಲಿರೋ ವಿದ್ಯಾರ್ಥಿಗಳೇ ಇವರ ಟಾರ್ಗೆಟ್ !
ಆಶ್ಯಿಶ್ ಆಯಿಲ್​ನ್ನು ಬಸ್​ನಲ್ಲೇ ಸರಬರಾಜು ಮಾಡುತ್ತಿದ್ದ ಸುರಕತ್ತಿ ಪ್ರಭಾಕರ್ ಮತ್ತು ಕೊರಳ ಕಾಮರಾಜ್ ಎಂಬುವವರನ್ನು ಸುದ್ದುಗುಂಟೆ ಪೊಲೀಸರು
ಬಂಧಿಸಿದ್ದು, ಅವರ ಬಳಿಯಿದ್ದ 950 ಗ್ರಾಂ‌ ಹ್ಯಾಶಿಷ್ ಆಯಿಲ್, 3 ಕೆಜಿ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ.
ರಾಜ್ಯ ರಾಜಧಾನಿಯ‌ಲ್ಲಿ ಡ್ರಗ್ಸ್ ಜಾಲ ಸಕ್ರಿಯವಾಗಿದ್ದು, ವಿದ್ಯಾರ್ಥಿಗಳು ಮತ್ತು ಯುವಜನಾಂಗವನ್ನೇ ಟಾರ್ಗೆಟ್ ಮಾಡುವ ಗಾಂಜಾ, ಹ್ಯಾಶಿಷ್ ಆಯಿಲ್​ವ್ಯಾಪಾರಿಗಳು ಫೋನ್ ಮೂಲಕವೇ ವ್ಯವಹಾರ ಕುದುರಿಸುತ್ತಾರೆ. ಫೋನ್​ನಲ್ಲೇ ಗ್ರಾಹಕರನ್ನು ಸಂಪರ್ಕಿಸಿ ಗಾಂಜಾ, ಹ್ಯಾಶಿಷ್ ಆಯಿಲ್​ ಸಪ್ಲೈ ಮಾಡುತ್ತಾರೆ.
ಬಿದಿರು ಬೊಂಬಿನಲ್ಲಿ ಕೆಜಿಗಟ್ಟಲೇ ಗಾಂಜಾ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
