ಬೆಂಗಳೂರು:ವಿಧಾನ ಪರಿಷತ್ ಸದನದಲ್ಲಿ ರಾಜ್ಯ ಸರ್ಕಾರ ಮತ್ತು ಬಿಜೆಪಿ ನಾಯಕರ ಮಾತಿನ ಚಕಮಕಿ ತಾರಕಕ್ಕೇರಿದ್ದು, ಸಿದ್ದರಾಮಯ್ಯ ಅವರ ಆಡಳಿತದ ವಿರುದ್ಧ ಇದೀಗ ಮಾಜಿ ಸಚಿವ ಆರ್.ಅಶೋಕ್ ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಸಾರ್ವಜನಿಕರಿಗೆ ಸೌಲಭ್ಯಗಳ ಅರಿವು ಮೂಡಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ
ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ದಿನೇ ದಿನೇ ವಿಳಂಬ ಮಾಡುತ್ತಿದೆ. ಕಂಡೀಷನ್ ಇಲ್ಲದೇ ಗ್ಯಾರಂಟಿಗಳನ್ನು ಜಾರಿಗೊಳಿಸಿದರೆ 1 ಲಕ್ಷ ಕೋಟಿ ರೂ. ಹಣ ‌ಬೇಕಾಗುತ್ತದೆ. ಐದನೇ‌ ಗ್ಯಾರಂಟಿಯಲ್ಲಿ ಕುಟುಂಬದ ಮಹಿಳೆಗೆ‌ ಮಾಸಿಕ 2 ಸಾವಿರ ರೂ. ‌ಕೊಡುತ್ತೇವೆ ಎಂದು ಹೇಳಿ ಬೆಂಕಿ‌ ಹಚ್ಚಿದ್ದಾರೆ. ಕ್ಯಾಬಿನೆಟ್ ಆದ ದಿನವೇ ನೀಡುತ್ತೇವೆ ಎಂದು ಹೇಳಿದವರು, ಇನ್ನೂ ಕೊಟ್ಟಿಲ್ಲ. ಈಗ ಪೋರ್ಟಲ್ ಹ್ಯಾಕ್ ಅಂತ ಕಾರಣ ನೀಡಿದ್ದಾರೆ ಎಂದು ಹೇಳಿದರು.
ರಾಜ್ಯದ ಜನತೆಗೆ ಐದೂ‌ ಗ್ಯಾರಂಟಿಗಳಲ್ಲಿಯೂ ಗೊಂದಲ ಉಂಟಾಗಿದೆ. ಜನರ ವಿಶ್ವಾಸ ಕಳೆದುಕೊಂಡಿವೆ ಈ‌ ಗ್ಯಾರಂಟಿಗಳು. ಸಿಎಂ ಸಿದ್ದರಾಮಯ್ಯನವರು ಈ ಭರವಸೆಗಳನ್ನು ಈಡೇರಿಸುವುದು ಶತ ಸಿದ್ಧ ಎಂದು ಹೇಳುತ್ತಾರೆ. ಆದ್ರೆ, ಅದರ ಮುಂದೆ ನಾಳೆ ಅಂತ ಬೋರ್ಡ್ ಬರೆದುಕೊಳ್ಳುತ್ತಾರೆ. ಅನ್ನಭಾಗ್ಯ ಯೋಜನೆ ಮುಖ್ಯಮಂತ್ರಿಗಳ ಮೆಚ್ಚಿನ ಯೋಜನೆ. ಅಂದು 10 ಕೆಜಿ ಎಂದು ಹೇಳಿ, ಇಂದು 5 ಕೆಜಿ ಅಕ್ಕಿಯನ್ನು ಪ್ರಧಾನಿ ಮೋದಿ ಅವರ ಬಳಿ ಕೇಳುತ್ತೀರಾ. ಇದು ಮೋಸ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 12 =
Remember me
