ಬೆಂಗಳೂರು:ಇಂದು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಅಶ್ವಥ್ ನಾರಾಯಣ್​, ಪ್ರಧಾನಿ ನರೇಂದ್ರ ಮೋದಿಗೆ ಸವಾಲ್​ ಹಾಕಿದ ಸಿಎಂ ಸಿದ್ದರಾಮಯ್ಯ ವಿರುದ್ಧ ತಮ್ಮ ಹೇಳಿಕೆಯ ಮುಖೇನ ಇದೀಗ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ವಿಪ್ರ ಸಮಾಜದ ಚಟುಚಟಿಕೆಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ: ಶಾಸಕ ಚನ್ನಬಸಪ್ಪ
“ಗ್ಯಾರಂಟಿ ಭಾಗ್ಯಗಳನ್ನು ಚುನಾವಣೆಗೂ ಮೊದಲೇ ಘೋಷಣೆ ಮಾಡಿ ಇಂದು ಅಧಿಕಾರಕ್ಕೆ ಬಂದಿದ್ದಾರೆ. ಯೋಜನೆಗಳನ್ನು ಮಾಡಿದ್ದು ಷರತ್ತುಗಳಿಲ್ಲದೆ. ಕಂಡೀಷನ್​ ಇಲ್ಲದೇ ಘೋಷಣೆ ಮಾಡುತ್ತೀವಿ ಎಂದು ಹೇಳಿದ್ದರು. ಆದ್ರೆ, ಮಾತು ಉಳಿಸಿಕೊಳ್ಳದೇ ಗ್ಯಾರಂಟಿ ಯೋಜನೆಯನ್ನು ನಾಡಿಗೆ ಕೊಟ್ಟಿದ್ದಾರೆ” ಎಂದು ಹೇಳಿದರು.
“ಗ್ಯಾರಂಟಿ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮೋದಿ ಅವರಿಗೆ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಲಭಿಸಬೇಕು. ಬಡವರು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸಿದ್ದರಾಮಯ್ಯ ಅವರೇ, ನಿಮಗೆ ಬಹಳ ವರ್ಷದ ಅನುಭವವಿದೆ ಅಲ್ವಾ? ಕೌಶಲ್ಯತೆ ಹಾಗೂ ಉತ್ತಮ ಶಿಕ್ಷಣ ಕೊಡುವ ತಾಕತ್ತಿದ್ದರೆ, ನಿಮ್ಮ ಕಾಳಜಿ ಹಾಗೂ ಅನುಭವವನ್ನು ಗುಣಮಟ್ಟದ ಶಿಕ್ಷಣ ಕೊಡುವ ಮೂಲಕ ತೋರಿಸಿ” ಎಂದು ಹೇಳಿದರು.
ಇದನ್ನೂ ಓದಿ:ಮರದಿಂದ ಕೆಳಗೆ ಬಿದ್ದು ಮಾಜಿ ಶಾಸಕ ಅಪ್ಪಚ್ಚು ರಂಜನ್ ಗನ್​ಮ್ಯಾನ್​ ದುರಂತ ಸಾವು
“ನಿಮಗೆ ಯಾರು ವಿದ್ಯಾವಂತರು ಆಗಬಾರದು. ಅವಿದ್ಯಾವಂತರು ಅಸಹಾಯಕರು ಆಗಿರಬೇಕು. ಉತ್ತಮ‌ ಗುಣಮಟ್ಟದ ಶಿಕ್ಷಣ ಯಾವ ರೀತಿ ಕೊಡಬೇಕು ಎಂಬುದು ಗೊತ್ತಿದೆಯೇ? ಭ್ರಷ್ಟಾಚಾರ ರಹಿತ ಆಡಳಿತ ಕೊಡುವ ಮೂಲಕ ನಿಮ್ಮ ತಾಕತ್​ ಪ್ರದರ್ಶಿಸಿ. ಬರೀ ವರ್ಗಾವಣೆಗೆ ಎಲ್ಲಾ ಪೇಮೆಂಟ್ ಪೇಮೆಂಟ್.. ಪೇಮೆಂಟ್” ಎಂದು ಹೇಳುವ ಮುಖೇನ ಸಿಎಂ ಸಿದ್ದರಾಮಯ್ಯ ಅವರಿಗೆ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಎಚ್​​ಡಿಕೆ ನಿದ್ರೆ-ನೆಮ್ಮದಿ ಹಾರಿ ಹೋಗಿದೆ: ಸಚಿವ ದಿನೇಶ್​ ಗುಂಡೂರಾವ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + eighteen =
Remember me
