ಬೆಂಗಳೂರು:ಇತ್ತೀಚೆಗಷ್ಟೇ ತೈಲ ಬೆಲೆ ಏರಿಸಿದ್ದ ರಾಜ್ಯ ಸರ್ಕಾರ, ಇದೀಗ ಹಾಲಿನ ದರದಲ್ಲಿಯೂ ಸಹ ಹೆಚ್ಚಳ ಮಾಡಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಹಾಲಿನ ದರ ಹೆಚ್ಚಿಸಿದ್ದು, ಪ್ರತಿ ಲೀಟರ್‌ ಪ್ಯಾಕೆಟ್​ಗೆ 2.10 ರೂ. ಏರಿಕೆ ಮಾಡಿದೆ. ಇನ್ನು ಹಾಲಿನ ದರದಲ್ಲಿ ಕಂಡುಬಂದ ದಿಢೀರ್​ ಹೆಚ್ಚಳವನ್ನು ಖಂಡಿಸಿದ ಮಾಜಿ ಸಚಿವ, ಬಿಜೆಪಿ ನಾಯಕ ಅಶ್ವಥ್ ನಾರಾಯಣ, ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿರುವ ಕಾಂಗ್ರೆಸ್‌ ಸರ್ಕಾರ ನಿತ್ಯ ಬೆಲೆ ಏರಿಕೆ ನೀತಿಯನ್ನು ಅನುಸರಿಸುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ನಾನು ಕೂಡ ಅನೇಕ ರಿಲೇಶನ್​ಶಿಪ್​ನಲ್ಲಿದ್ದೆ ಕೊನೆಗೆ… ಕಿರಾತಕ ಬೆಡಗಿ ಓವಿಯಾ ಓಪನ್​ ಟಾಕ್​!
“ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಇಂದಿಗೆ 49 ವರ್ಷ ತುಂಬಿರುವ ಬೆನ್ನಲ್ಲೇ ಹಾಲಿನ ದರವನ್ನು 2 ರೂ.ಗೆ ಏರಿಸಿ, ಬಡವರ ಹೊಟ್ಟೆಗೆ ಬಿಸಿ ನೀರೇ ಗತಿ ಎನ್ನುವ ಪರಿಸ್ಥಿತಿಯನ್ನು ತಂದೊಡ್ಡಿದೆ. ದಿನಸಿ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್‌-ಡೀಸೆಲ್‌ ದರ ಶತಕ ಬಾರಿಸಿದೆ, ವಿದ್ಯುತ್‌ ದರ ಏರಿಕೆ ನಾಡಿನ ಜನತೆಗೆ ಶಾಕ್‌ ನೀಡಿದೆ. ಇದರ ಜತೆ ಬಸ್‌ ಪ್ರಯಾಣದ ದರ ಏರಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಾಗಿದೆ” ಎಂದಿದ್ದಾರೆ.
This Just In: In a ‘hits-and-runs’ incident in Caribbean, 11 Indian men have ‘stolen’ over a billion hearts. Initial investigation points out the revenge of 19/11 as the motive.#INDvsAUS#INDvAUS#T20WorldCup
— Delhi Police (@DelhiPolice)June 24, 2024

“ಕಳೆದ ವರ್ಷ ಆಗಸ್ಟ್‌ನಲ್ಲಿ ಹಾಲಿನ ದರದಲ್ಲಿ 3 ರೂ. ಏರಿಕೆ ಮಾಡಲಾಗಿತ್ತು. ಅದಾಗಿ ವರ್ಷ ಕಳೆಯುವ ಮುನ್ನವೇ ಇನ್ನೂ 2 ರೂ. ಹೆಚ್ಚಿಸಲಾಗಿದೆ. ಬರಿದಾಗಿರುವ ರಾಜ್ಯದ ಖಜಾನೆಯನ್ನು ತುಂಬಿಸಲು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿರುವುದು ಖಂಡನೀಯ” ಎಂದು ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಟೀಮ್​ ಇಂಡಿಯಾದ 11 ಆಟಗಾರರೂ ಸಹ ಈ ‘ಕಳ್ಳತನ’ದಲ್ಲಿ ಭಾಗಿ! ದೆಹಲಿ ಪೊಲೀಸ್​ ಟ್ವೀಟ್ ವೈರಲ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − eight =
Remember me
