ಬೆಂಗಳೂರು:ಉರಿಗೌಡ-ನಂಜೇಗೌಡ ಪಾತ್ರಗಳನ್ನು ಆಧರಿಸಿರುವ ಸಿನಿಮಾ ನಿರ್ಮಾಣ ಮಾಡಲು ಸಚಿವ ಮುನಿರತ್ನ ಮುಂದಾಗಿದ್ದು, ಈಗಾಗಲೇ ಮುಹೂರ್ತದ ದಿನಾಂಕವನ್ನೂ ಘೋಷಿಸಿದ್ದಾರೆ. ಈ ವೇಳೆ ಮುನಿರತ್ನ ಈ ಸಿನಿಮಾಗೆ ಸಚಿವ ಅಶ್ವತ್ಥ ನಾರಾಯಣ್ ಚಿತ್ರಕಥೆ ಬರೆಯುತ್ತಾರೆ ಎಂದು ಹೇಳಿದ್ದರು. ಇದೀಗ ಈ ವಿಚಾರವಾಗಿ ಅಶ್ವತ್ಥ ನಾರಾಯಣ್ ಸ್ಪಷ್ಟನೆ ನೀಡಿದ್ದು, ಉರಿಗೌಡ-ನಂಜೇಗೌಡ ನಮ್ಮ ಹೆಮ್ಮೆ. ಆದರೆ ನಾವು ಯಾವುದೇ ಚಿತ್ರಕಥೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸ್ವಂತ ತಮ್ಮನನ್ನೇ ಹತ್ಯೆ ಮಾಡಿದ್ದ ಅಕ್ಕ; 8 ವರ್ಷದ ಬಳಿಕ ಪ್ರಿಯಕರನೊಂದಿಗೆ ಪೊಲೀಸರಿಗೆ ಸಿಕ್ಕಿ ಬಿದ್ದಳು!
ನಮ್ಮ ಸ್ನೇಹಿತರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಉರಿಗೌಡ-ನಂಜೇಗೌಡ ಇಬ್ಬರು ಪ್ರಮುಖ ನಾಯಕರು ಇದ್ದದ್ದು ಸತ್ಯ. ಟಿಪ್ಪು ಜಯಂತಿ ಮಾಡಬಾರದು ಎಂದು ನಾವು ಆರಂಭದಿಂದ ಹೇಳಿದ್ದೇವೆ. ಟಿಪ್ಪು ನರಹಂತಕ, ಅವನು ನಮ್ಮ ನಾಡಿನವನಲ್ಲ. ಟಿಪ್ಪು ಸುಲ್ತಾನ್ ವಿಚಾರ ಬೆಳಕಿಗೆ ಬಂದಿದೆ ಅಷ್ಟೇ. ಈ ಬಗ್ಗೆ ಅಧ್ಯಯನ ಮಾಡುವವರು ಮಾಡಲಿ. ನಾವು ಯಾವುದನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿಲ್ಲ. ಉರಿಗೌಡ-ನಂಜೇಗೌಡ ನಮ್ಮ ಪಾಲಿಗೆ ಹೀರೋ ಅಷ್ಟೇ ಎಂದು ಅಶ್ವತ್ಥ ನಾರಾಯಣ್ ಹೇಳಿದರು.
ಇದೇ ವೇಳೆ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ನೀಡುತ್ತಾ, ಉರಿಗೌಡ-ನಂಜೇಗೌಡ ಇದ್ದದ್ದು ಸತ್ಯ. ಸುವರ್ಣ ಮಂಡ್ಯ ಪುಸ್ತಕ ಬರೆದಿರುವುದ ಯಾರು? ಆ ಪುಸ್ತಕದಲ್ಲಿರುವ ಎರಡು ಹೆಸರು ಕಾಲ್ಪನಿಕವಾ? ವಿರೋಧ ಮಾಡುವವರು ಮಾಡುತ್ತಾರೆ. ಅಭಿಮಾನ ಇರುವವರು ಟಿಪ್ಪು ಸುಲ್ತಾನ್ ಫೋಟೋಗಳನ್ನು ತೆಗೆದುಕೊಂಡು ಹೋಗಿ ಅವರವರ ಮನೆಯಲ್ಲಿ, ಕಾರುಗಳ ಮೇಲೆ ಅಂಟಿಸಿಕೊಳ್ಳಲಿ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
