ಬೆಂಗಳೂರು: ಸಣ್ಣಪುಟ್ಟ ಸಮಸ್ಯೆಗಳಿಗಾಗಿ ಪೊಲೀಸ್ ಠಾಣೆಗಳಿಗೆ ಅಲೆಯುವುದನ್ನು ತಪ್ಪಿಸಲು, ಇ-ಲಾಸ್ಟ್  ಪೋರ್ಟಲ್, ಸುರಕ್ಷಾ ಆ್ಯಪ್, ನಮ್ಮ 100 ಸೇವೆಯ ಸದ್ಬಳಕೆ ಮಾಡಿಕೊಳ್ಳುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್  ತಿಳಿಸಿದ್ದಾರೆ. ಸಾರ್ವಜನಿಕರ ಜತೆ ಟ್ವಿಟರ್‌ನಲ್ಲಿ ನಗರದ ಸಮಸ್ಯೆ ಹಾಗೂ ಸಲಹೆಗಳನ್ನು ಆಲಿಸಲು ಶನಿವಾರ ‘ಬೆಂಗಳೂರು ಪೊಲೀಸ್ ಕಮಿಷನರ್‌ರನ್ನು ಕೇಳಿ’ ಎಂಬ ಸಂವಾದ ನಡೆಸಿದರು. ಈ ವೇಳೆ ಸಾರ್ವಜನಿಕರಿಂದ ದೂರು ಹಾಗೂ ಸಲಹೆಗಳನ್ನು ಆಲಿಸಿ ಪ್ರತಿಕ್ರಿಯಿಸಿದರು.
ಇ-ಲಾಸ್ಟ್ ಪೋರ್ಟಲ್ ಬಳಸಿ:ಸಣ್ಣ ವಿಷಯಗಳಿಗಾಗಿ ದೂರು ಕೊಡಲು ಜನರು ಪೊಲೀಸ್ ಠಾಣೆಗೆ ಹೋಗಬೇಕಾಗುತ್ತದೆ. ಆನ್‌ಲೈನ್ ಮೂಲಕ ದೂರು ಸ್ವೀಕರಿಸುವ ವ್ಯವಸ್ಥೆ ಏಕೆ ಹೊಂದಿಲ್ಲ ಎಂದು ನಿತೀನ್ ಯಡೇಹಳ್ಳಿ ಎಂಬುವರು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಪಂತ್, ಮೊಬೈಲ್, ಲ್ಯಾಪ್‌ಟಾಪ್, ಅಂಕಪಟ್ಟಿ ಇನ್ನಿತರ ವಸ್ತುಗಳು ಕಳುವಾದರೆ ನೀವಿದ್ದಲ್ಲಿಂದಲೇ ದೂರು ನೀಡಲು ‘ಇ-ಲಾಸ್ಟ್’ ಪೋರ್ಟಲ್ ಇದೆ. ಇದರ ಮೂಲಕ ತನಿಖೆ ಕೈಗೊಂಡು, ಪತ್ತೆ ಹಚ್ಚಲಾಗುವುದು. ಇತರೆ ಸಮಸ್ಯೆಗಳಿದ್ದಲ್ಲಿ ‘ನಮ್ಮ 100’ಗೆ ಕರೆ ಮಾಡಿ. ಇಲ್ಲವೇ, ಸುರಕ್ಷಾ ಆ್ಯಪ್ ಬಳಸಿದರೆ ಹೊಯ್ಸಳ ಗಸ್ತು ವಾಹನ ಕೆಲವೇ ನಿಮಿಷಗಳಲ್ಲಿ ಸ್ಪಂದಿಸುತ್ತಾರೆ. ಸಮೀಪದ ಪೊಲೀಸ್ ಠಾಣೆಯ ೆನ್ ನಂಬರ್ ಬೇಕಿದ್ದರೆ, ಕೆಎಸ್‌ಪಿ ಆ್ಯಪ್‌ನಲ್ಲಿಯೂ ಸಿಗುತ್ತದೆ ಎಂದು ಸಲಹೆ ನೀಡಿದರು.
ಸೈಕಲ್‌ಪಥ ಬಳಸಿ:ಪಾದಚಾರಿಗಳಿಗೆ ಹಾಗೂ ಸೈಕಲ್ ಪಥಕ್ಕಾಗಿ ಹಲವು ವರ್ಷಗಳಿಂದ ಬೇಡಿಕೆ ಇದೆ. ಇದರಿಂದ ನಗರದ ಸಂಚಾರ ದಟ್ಟಣೆ ಹಾಗೂ ವಾಯುಮಾಲಿನ್ಯ ಕಡಿಮೆ ಮಾಡಬಹುದು ಎಂದು ಶಶಿ ಭಾಸ್ಕರ್ ಎಂಬುವರು ಸಲಹೆ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಪಂತ್, ನಿಮ್ಮ ಸಲಹೆಯನ್ನು ಸಂಪೂರ್ಣವಾಗಿ ಒಪ್ಪುತ್ತೇವೆ. ಆದರೆ, ಇಂತಹ ಸೌಕರ್ಯ ಕಲ್ಪಿಸಲು ನಗರದಲ್ಲಿ ಕೆಲವು ಮಿತಿಗಳಿವೆ. ಆದಾಗ್ಯೂ, ನಗರದ ಕೆಲವು ಪ್ರದೇಶಗಳಲ್ಲಿ ಸೈಕಲ್‌ಪಥ ವ್ಯವಸ್ಥೆ ಇದೆ ಎಂದರು. ನಗರದಲ್ಲಿ ಪೆಟ್ರೋಲ್ ಬಂಕ್‌ಗಳು ಮೀಟರ್‌ಗಳನ್ನು ತಿರುಚಿ ವ್ಯವಹಾರ ನಡೆಸುತ್ತಿದ್ದಾರೆ. ಟ್ಯಾಂಕ್‌ಗೆ ಇಂಧನ ತುಂಬಿಸಿಕೊಳ್ಳುವುದರಿಂದ ಗೊತ್ತಾಗುವುದಿಲ್ಲ. ಆದರೆ, ಬಾಟಲಿಯಲ್ಲಿ ಪೆಟ್ರೋಲ್ ಹಾಕುವಂತೆ ಕೇಳಿದರೆ ನಿರಾಕರಿಸುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸುಮುಖ್ ಶೃಂಗೇರಿ ಎಂಬುವರು ದೂರಿದರು. ಸಮಸ್ಯೆಯನ್ನು ಗಮನಕ್ಕೆ ತಂದಿದ್ದಕ್ಕೆ ಅಭಿನಂದನೆ. ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್ ಹೇಳಿದರು.
ಕರೊನಾ ಮುಕ್ತ ನಗರಕ್ಕೆ ಸಹಕರಿಸಿ!: ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಅಧಿಕಾರ ಪೊಲೀಸ್ ಇಲಾಖೆಯದ್ದೇ ಅಥವಾ ಬಿಬಿಎಂಪಿಯದ್ದೇ ಎಂಬ  ವಿಶ್ವನಾಥ್ ಎಂಬುವರು ಪ್ರಶ್ನೆಗೆ ಉತ್ತರಿಸಿದ ಪೊಲೀಸ್ ಆಯುಕ್ತರು, ಪೊಲೀಸ್ ಮತ್ತು ಬಿಬಿಎಂಪಿ ಇಬ್ಬರಿಗೂ ದಂಡ ವಿಧಿಸುವ ಅಧಿಕಾರವಿದೆ. ಕರೊನಾ ಮುಕ್ತ ಸುರಕ್ಷಿತ ಬೆಂಗಳೂರು ನಗರವನ್ನಾಗಿಸಲು ಪೊಲೀಸರ ಜತೆ ಕೈಜೋಡಿಸಿ. ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಯ್ದುಕೊಂಡು ದೈನಂದಿನ ವ್ಯವಹಾರಗಳಲ್ಲಿ ತೊಡಗುವಂತೆ ಮನವಿ ಮಾಡಿದರು.
ಲಂಚ ಕೇಳುವ ಪೊಲೀಸರ ಮಾಹಿತಿ ನೀಡಿ: ಕಾರಿನ ಗಾಜುಗಳಿಗೆ ಸನ್‌ಗ್ಲಾಸ್ ಗೋಚರತೆ ಎಷ್ಟಿರಬೇಕು ಎಂದು ಪ್ರಶ್ನಿಸಿದ ಎಸ್‌ಆರ್‌ಎಸ್ ಆಟೋ ಟೆಕ್ ಮಳಿಗೆಯವರು, ನಗರ ಸಂಚಾರ ಪೊಲೀಸರು ತಮಿಳುನಾಡು ನೋಂದಣಿ ಸಂಖ್ಯೆಯ ವಾಹನಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಲಂಚ ಪಡೆಯುತ್ತಾರೆ ಎಂದು ದೂರಿದರು.  ಅದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್, ಕಾರುಗಳ ಗಾಜುಗಳು ಕಡ್ಡಾಯವಾಗಿ ಶೇ. 50 ಗೋಚರತೆ ಹೊಂದಿರಬೇಕು. ನಿಮಗೆ ಯಾರಾದರೂ ಲಂಚಕ್ಕೆ ಬೇಡಿಕೆ ಇಟ್ಟರೆ ಅಂಥವರ ಹೆಸರು, ಸ್ಥಾನ ಮತ್ತು ಘಟನೆಯ ಸ್ಥಳದ ಮಾಹಿತಿಯನ್ನು ನಮ್ಮ ವ್ಯಾಟ್ಸ್ ಆ್ಯಪ್ 9480801000ಗೆ ಕಳುಹಿಸಿ. ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಭರವಸೆ ನೀಡಿದರು.
ಮತಾಂತರ ತಂದಿಟ್ಟ ಅವಾಂತರ – ತಾಯಿಯ ಅಂತ್ಯಸಂಸ್ಕಾರದ ವೇಳೆ ನಡೆಯಿತು ಫೈಟಿಂಗ್ !
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 15 =
Remember me
