|ಮೃತ್ಯುಂಜಯ ಕಪಗಲ್ಬೆಂಗಳೂರು
ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರ ನಾಯಕರ ನಿರಂತರ ಭೇಟಿ, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆಯಿಂದ ಆಡಳಿತ ಬಿಜೆಪಿಯಲ್ಲಿ ಹೆಚ್ಚಿರುವ ಉತ್ಸಾಹಕ್ಕೆ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಅಡ್ಡಗಾಲಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿ, ಎರಡನೇ ಪಟ್ಟಿಗೆ ಬಿಡುಗಡೆಗೆ ತಯಾರಿ ನಡೆಸಿದೆ. ಪ್ರತಿಪಕ್ಷ ಕಾಂಗ್ರೆಸ್ ಕೂಡ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಿ ಮೊದಲ ಪಟ್ಟಿ ತ್ವರಿತವಾಗಿ ಘೋಷಿಸಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲು ಸನ್ನದ್ಧವಾಗಿದೆ. ಆದರೆ ಬಿಜೆಪಿ ಪಾಳೆಯದಲ್ಲಿ ಮೇಲ್ನೋಟಕ್ಕೆ ಯಾವುದೇ ಸುಳಿವಿಲ್ಲ. ಆಂತರಿಕ ವಿಚಾರವಾಗಿ ಚಿಂತನ-ಮಂಥನ ನಡೆಸಿದೆ. ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಉದ್ದೇಶದಿಂದ ಮೂರನೇ ಸಮೀಕ್ಷೆ ಕಾರ್ಯವನ್ನೂ ಕೈಗೆತ್ತಿಕೊಂಡಿದೆ.
ಸಂಗ್ರಹಿಸಿದ ದತ್ತಾಂಶಗಳು, ಕ್ಷೇತ್ರಮಟ್ಟದ ಅಭಿಪ್ರಾಯಗಳು, ಸಮೀಕ್ಷೆ ವರದಿ ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ. ಆ ಮೂಲಕ ಉಮೇದುವಾರಿಕೆ ಯಾರೊಬ್ಬರು ಅರ್ಜಿ, ಸ್ವಪರಿಚಯ ಪತ್ರ ಹಿಡಿದು ಕಚೇರಿಗೆ ಅಲೆಯುವ ಅಗತ್ಯವಿಲ್ಲವೆಂದು ಸೂಚ್ಯವಾಗಿ ತಿಳಿಸಿದ್ದಾರೆ. ಪಕ್ಷದ ಶಾಸಕರು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ವರ್ಚಸ್ಸು ಉಳ್ಳವರು, ವಿವಿಧ ಆಯಾಮಗಳಿಂದ ಒಂದೇ ಹೆಸರು ಸೂಚಿತ ವಾದ 80 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಚುನಾವಣಾ ವೇಳಾಪಟ್ಟಿ ಅಧಿಕೃತವಾಗಿ ಪ್ರಕಟಿಸಿದ ನಂತರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕಾಂಗ್ರೆಸ್ ಯಾತ್ರೆ ವೇಳೆ ಕಳಚಿಬಿದ್ದ ಹಾರಗಳು; ಸೇಬು ಬಾಚಿಕೊಳ್ಳಲು ಮುಗಿಬಿದ್ದ ಕಾರ್ಯಕರ್ತರು!
ಪೈಪೋಟಿಯ ಬಿಸಿ:ಆಕಾಂಕ್ಷಿಗಳ ಬೆಂಬಲಿಗರ ಮೂಲಕ ಪೈಪೋಟಿಯ ತೀವ್ರತೆ ಬಿಸಿ ರಾಜ್ಯ ನಾಯಕರಿಗೆ ತಟ್ಟಿದೆ. ಚನ್ನಗಿರಿ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಜಯಸಂಕಲ್ಪ ರಥಯಾತ್ರೆ ನಡೆಸಲು ಸಾಧ್ಯವಾಗಲಿಲ್ಲ. ಮೂಡಿಗೆರೆ ವಿಧಾನಸಭೆ ಕ್ಷೇತ್ರದಲ್ಲೂ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರೋಧಿಗಳು ಸಂಚಾರ ತಡೆ ನಡೆಸಿದರು. ಟಿಕೆಟ್ ಮೇಲೆ ಕಣ್ಣಿಟ್ಟವರ ಸಂಖ್ಯೆ ಬೆಳೆಯುತ್ತಿದ್ದು, ಪ್ರಭಾವಿಗಳ ಮುಖೇನ ಲಾಬಿಗೆ ಇಳಿದಿದ್ದಾರೆ. ಶ್ರೀಮಂತಪಾಟೀಲ್ ಹಾಗೂ ಮಹೇಶ್ ಕುಮಟಳ್ಳಿ ಪರವಾಗಿ ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ಬಹಿರಂಗ ವಕಾಲತ್ತಿಗೆ ಇಳಿದಿದ್ದಾರೆ. ಮತ್ತೊಂದೆಡೆ ಡಜನ್​ಗೂ ಹೆಚ್ಚು ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆಯಿದೆ. ಅಭ್ಯರ್ಥಿಗಳು ಭರಪೂರ ಹಾಗೂ ಬರ ಎರಡೂ ಇರುವ ಕಾರಣ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಪಕ್ಷ ಕಾದು ನೋಡುವ ತಂತ್ರ ಅನುಸರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..
ಪರಿಷತ್ ಬಿಸಿತುಪ್ಪ:ವಿಧಾನ ಪರಿಷತ್ ಸದಸ್ಯರಿಗೆ ಟಿಕೆಟ್ ಇಲ್ಲವೆಂಬ ಮಾನದಂಡವು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸಿದವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಡಾ.ವೈ.ಎ.ನಾರಾಯಣಸ್ವಾಮಿ (ಹೆಬ್ಬಾಳ), ಆಯನೂರು ಮಂಜುನಾಥ್ (ಶಿವಮೊಗ್ಗ) ಸದ್ಯಕ್ಕೆ ಆಕಾಂಕ್ಷಿ ಪಟ್ಟಿಯಲ್ಲಿರುವ ಹೆಸರುಗಳು. ಎಂಎಲ್​ಸಿಗಳಿಗೆ ಟಿಕೆಟ್ ನೀಡುವುದಿಲ್ಲ ಎಂದು ಖಾತರಿಯಾದ ಕಾರಣಕ್ಕೆ ಬಾಬುರಾವ್ ಚಿಂಚನಸೂರ್ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷಕ್ಕೂ ಗುಡ್​ಬೈ ಹೇಳಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭೆ ಹಾಗೂ ಬೆಳಗಾವಿ ಲೋಕಸಭೆ ಉಪ ಚುನಾವಣೆ, ಡಿಸಿಎಂ ಹುದ್ದೆಗಳ ಸೃಷ್ಟಿ ನಂತರ ರದ್ದು ಬೆಳವಣಿಗೆಗಳು ಪಕ್ಷದ ವರಿಷ್ಠರ ದ್ವಂದ್ವ ನಿಲುವಿಗೆ ನಿದರ್ಶನ. ಇದರಿಂದಾಗಿ ಅಲಿಖಿತ ನಿಯಮ, ಮಾನದಂಡಗಳಿಗೆ ದೃಢವಾಗಿ ನಿಲ್ಲುವ ಖಾತರಿಯಿಲ್ಲವೆಂದು ತಿಳಿದು, ಆಕಾಂಕ್ಷಿಗಳು ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ ಎನ್ನಲಾಗಿದೆ.
ಅಥಣಿ ಮತಕ್ಷೇತ್ರದ ಟಿಕೆಟ್ ಅಂತಿಮ ಮಾಡುವವರು ಬಿಜೆಪಿಯ ಹೈಕಮಾಂಡ್. ಶಾಸಕ ಜಾರಕಿಹೊಳಿ ಏಕೆ ಅಪಾರ್ಥ ಮಾಡಿಕೊಂಡಿದ್ದಾರೆ ಗೊತ್ತಿಲ್ಲ. ಅವರ ಹೇಳಿಕೆ ಬಗ್ಗೆ ಟೀಕೆ-ಟಿಪ್ಪಣಿ ಕೊಡುವುದಿಲ್ಲ. ಅವರು ದೊಡ್ಡವರು, ಜಿಲ್ಲೆಯಲ್ಲಿ ಸಾಹುಕಾರ ಎಂದು ಖ್ಯಾತಿ ಪಡೆದಿದ್ದಾರೆ.
|ಲಕ್ಷ್ಮಣ ಸವದಿವಿಧಾನ ಪರಿಷತ್ ಸದಸ್ಯ
ಶಿವಮೊಗ್ಗ:ಕೆ.ಎಸ್.ಈಶ್ವರಪ್ಪ/ ಆಯನೂರು ಮಂಜುನಾಥ್/ ಡಾ.ಧನಂಜಯ ಸರ್ಜಿ, ಸೊರಬ: ಕುಮಾರ್ ಬಂಗಾರಪ್ಪ, ಮೇಘರಾಜ್, ಅಥಣಿ: ಮಹೇಶ್ ಕುಮಟಳ್ಳಿ/ ಲಕ್ಷ್ಮಣಸವದಿ, ಚನ್ನಗಿರಿ: ಮಾಡಾಳು ಮಲ್ಲಿಕಾರ್ಜುನ/ ತುಮ್ಕೋಸ್ ಅಧ್ಯಕ್ಷ ಶಿವಕುಮಾರ್, ಚಾಮರಾಜನಗರ: ಕೆಆರ್​ಡಿಸಿಎಲ್ ಅಧ್ಯಕ್ಷ ಎಂ.ರುದ್ರೇಶ್/ ಪ್ರೊ:ಮಲ್ಲಿಕಾರ್ಜುನಪ್ಪ, ಹನೂರು: ಪ್ರೀತಂ ನಾಗಪ್ಪ/ ಬೆಂಗಳೂರು ಮೂಲದ ಪ್ರಭಾವಿ ನಾಯಕ, ತುಮಕೂರು: ಜ್ಯೋತಿ ಗಣೇಶ್/ ಸೊಗಡು ಶಿವಣ್ಣ, ಮಾಲೂರು: ಹೂಡಿ ವಿಜಯಕುಮಾರ್/ ಮಂಜುನಾಥ್​ಗೌಡ, ಮೊಳಕಾಲ್ಮೂರು: ಮಾಜಿ ಶಾಸಕ ತಿಪ್ಪೇಸ್ವಾಮಿ/ ಪ್ರಭಾಕರ್ ಮ್ಯಾಸನಾಯಕ, ಹಗರಿಬೊಮ್ಮನಹಳ್ಳಿ: ನಿವೃತ್ತ ಐಎಎಸ್ ಅಧಿಕಾರಿ ಎಂ.ಲಕ್ಷ್ಮೀನಾರಾಯಣ/ ನೇಮಿರಾಜ್​ನಾಯಕ್, ಗಾಂಧಿನಗರ: ಎಸ್.ಎನ್.ಕೃಷ್ಣಯ್ಯಶೆಟ್ಟಿ/ ಸಪ್ತಗಿರಿಗೌಡ, ಮಾಗಡಿ: ಜೇಡರಹಳ್ಳಿಕೃಷ್ಣಪ್ಪ/ ಪ್ರಸನ್ನಗೌಡ/ ಕೃಷ್ಣಪ್ಪ, ಬ್ಯಾಟರಾಯನಪುರ: ತಮ್ಮೇಶ್​ಗೌಡ/ ಮುನೇಂದ್ರಕುಮಾರ್/ ಎ.ರವಿ, ಜಯನಗರ: ಎನ್.ಆರ್.ರಮೇಶ್/ ಸಿ.ಕೆ.ರಾಮಮೂರ್ತಿ, ಬಸವನಗುಡಿ: ತೇಜಸ್ವಿನಿ ಅನಂತಕುಮಾರ್/ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರರಾವ್, ಹೆಬ್ಬಾಳ: ಕಟ್ಟಾ ಸುಬ್ರಮಣ್ಯ ನಾಯ್ಡು/ ಎಂಎಲ್​ಸಿ ವೈ.ಎ.ನಾರಾಯಣಸ್ವಾಮಿ, ರಾಜಾಜಿನಗರ: ಎಸ್.ಸುರೇಶ್​ಕುಮಾರ್/ ಮಂಜುನಾಥ್, ವಿಜಯನಗರ: ಎಚ್.ರವೀಂದ್ರ/ ಉಮೇಶ್​ಶೆಟ್ಟಿ.
ಬೆಂಗಳೂರು:ರಾಜ್ಯ ಸಚಿವ ಸಂಪುಟ ಸಭೆ ಶುಕ್ರವಾರ ಸಂಜೆ 4ಕ್ಕೆ ನಿಗದಿಯಾಗಿದ್ದು, ಅಧಿಕೃತ ಕಾರ್ಯಸೂಚಿ ದೃಷ್ಟಿಯಿಂದ ಇದೇ ಕೊನೆಯ ಸಂಪುಟ ಸಭೆಯಾಗುವ ಸಾಧ್ಯತೆಗಳಿವೆ. ಬಸವರಾಜ ಬೊಮ್ಮಾಯಿ ಸಾರಥ್ಯದ ಬಿಜೆಪಿ ಸರ್ಕಾರ ಈಗಾಗಲೆ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದ್ದು, ರಾಜಕೀಯ ಮಹತ್ವದ ನಿರ್ಣಯಗಳನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳುವ ನಿರೀಕ್ಷೆಯಿದೆ. ಈ ಮೊದಲು ಮಾ.23ಕ್ಕೆ ಸಚಿವ ಸಂಪುಟ ಸಭೆ ಗೊತ್ತು ಪಡಿಸಲಾಗಿತ್ತು. ವಿವಿಧ ಕಾರಣಗಳಿಗೆ ಒಂದು ದಿನ ಮುಂದೂಡಿ ಶುಕ್ರವಾರ ಅಂತಿಮಗೊಳಿಸಿದ್ದು, ಪರಿಶಿಷ್ಟ ಜಾತಿ ಒಳಮೀಸಲು ಮತ್ತಿತರ ವಿಷಯಗಳು ಚರ್ಚೆಗೆ ಬರಬಹುದು ಎಂದು ಹೇಳಲಾಗುತ್ತಿದೆ.
ಪ್ರಯೋಗದ ಚಿಂತನೆ:ಪಕ್ಷದ ವರಿಷ್ಠರು ಮತ್ತೊಂದು ಪ್ರಯೋಗಕ್ಕೆ ಕೈಹಾಕುವ ಚಿಂತನೆ ನಡೆಸಿದ್ದು, ಅಂತಿಮವಾದರೆ ಸಂಘ-ಪರಿವಾರಕ್ಕೆ ನಿರ್ದಿಷ್ಟ ಸ್ಥಾನಗಳನ್ನು ಬಿಟ್ಟುಕೊಡುವ ಸಾಧ್ಯತೆಗಳಿವೆ. ಬೆಂಗಳೂರು ನಗರ ಜಿಲ್ಲೆ, ಕರಾವಳಿ, ಮಲೆನಾಡು ಹಾಗೂ ಮಧ್ಯಕರ್ನಾಟಕ ಭಾಗ ಸೇರಿ 12 ರಿಂದ 15 ಕ್ಷೇತ್ರಗಳನ್ನು ಸಂಘ-ಪರಿವಾರಕ್ಕೆ ಬಿಟ್ಟುಕೊಡುವುದು ಈ ಚಿಂತನೆಯ ತಿರುಳಾಗಿದೆ. ವರ್ಚಸ್ಸು, ಸಾಮರ್ಥ್ಯ, ಜಾತಿ ಸಮೀಕರಣ ಇನ್ನಿತರ ಅಂಶಗಳ ಆಧಾರದಲ್ಲಿ ಸಂಘ-ಪರಿವಾರವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಮೂಡಿಗೆರೆ:ಎಂ.ಪಿ.ಕುಮಾರಸ್ವಾಮಿ, ಮಸ್ಕಿ: ಪ್ರತಾಪಗೌಡ ಪಾಟೀಲ್, ರಾಯಚೂರು: ಡಾ.ಶಿವರಾಜ್ ಪಾಟೀಲ್, ಹರಿಹರ: ಬಿ.ಪಿ.ಹರೀಶ್​ಗೆ ಸ್ವಪಕ್ಷೀಯರೇ ತಗಾದೆ ತೆಗೆದಿದ್ದು, ಹೊಸ ಮುಖಗಳಿಗೆ ಅವಕಾಶ ನೀಡಿ ಎಂಬ ಒತ್ತಡ ಹೇರಿದ್ದರೆ, ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿ, ತಮ್ಮ ಪುತ್ರನಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆಯಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು:ಮುಂದಿನ ವಿಧಾನಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಪಾಂಚಜನ್ಯ ಮೊಳಗಿಸಲು ರಾಜ್ಯಕ್ಕೆ ಬರಲಿದ್ದು, ಒಂದೇ ದಿನ ಮೂರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುವರು. ದಾವಣಗೆರೆಯಲ್ಲಿ ಮಾ. 25ರಂದು ನಡೆಯುವ ವಿಜಯಸಂಕಲ್ಪ ರಥಯಾತ್ರೆಗಳ ಮಹಾ ಸಂಗಮದ ಮೂಲಕ ಮೋದಿ ರಾಜಕೀಯ ಸಮಾವೇಶಕ್ಕೆ ಪದಾರ್ಪಣೆ ಮಾಡಲಿದ್ದಾರೆ.
ಆಡಳಿತ ಬಿಜೆಪಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪೂರ್ವ ತಾಲೀಮು ಶುರು ಮಾಡಿ, ಎರಡು ತಿಂಗಳು ಕಳೆದಿದ್ದು, ಜನವರಿಯಿಂದ ಮಾರ್ಚ್ 12ರವರೆಗ ಒಟ್ಟು ಆರು ಬಾರಿ ಮೋದಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ.
ಪ್ರತಿ ಭೇಟಿಯೂ ಅಧಿಕೃತ ಕಾರ್ಯಕ್ರಮ ಕೇಂದ್ರಿತ. ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳಡಿ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಅಥವಾ ಶಿಲಾನ್ಯಾಸ ನೆರವೇರಿಸಿದ್ದಾರೆ. ಇದೀಗ ಏಳನೇ ಬಾರಿ ರಾಜ್ಯಕ್ಕೆ ದೌಡಾಯಿಸಲಿದ್ದಾರೆ. ಒಂದು ದಿನದ ಪ್ರವಾಸವು ಖಾಸಗಿ, ಸರ್ಕಾರಿ ಮತ್ತು ರಾಜಕೀಯ ಸಮಾವೇಶಗಳ ಸಮ್ಮಿಲನವಾಗಿರುವುದು ಗಮನಾರ್ಹ. ಅಧಿಕೃತ ಮಾಹಿತಿ ಪ್ರಕಾರ ಮಾ.25ರ ಬೆಳಗ್ಗೆ ಎಚ್​ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದು, ಹೆಲಿಕಾಪ್ಟರ್​ನಲ್ಲಿ ಚಿಕ್ಕಬಳ್ಳಾಪುರಕ್ಕೆ ತೆರಳುವರು. ಶ್ರೀ ಮಧುಸೂದನ ಸಾಯಿ ಸಂಸ್ಥೆಯ ವೈದ್ಯಕೀಯ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆ ಉದ್ಘಾಟಿಸಿ ಬೆಂಗಳೂರಿಗೆ ಹಿಂತಿರುಗುವರು.
ಇದನ್ನೂ ಓದಿ:ಹತ್ತು ವರ್ಷಗಳಿಗೂ ಅಧಿಕ ಕಾಲ ಒಂದಾದ ಮೇಲೊಂದು ಹೆರಿಗೆ; 28ನೇ ವಯಸ್ಸಿನಲ್ಲೇ 9 ಮಕ್ಕಳ ಮಹಾತಾಯಿ!
ಮಧ್ಯಾಹ್ನ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಮೂಲಕ ವೈಟ್​ಫೀಲ್ಡ್ ಮೆಟ್ರೋ ಮಾರ್ಗ ಉದ್ಘಾಟಿಸಲಿದ್ದು, ಸುಮಾರು ಒಂದು ಕಿ.ಮೀ. ದೂರ ಅಂತರ ಕ್ರಮಿಸುವ ಸಾಧ್ಯತೆಗಳಿವೆ. ನಂತರ ದಾವಣಗೆರೆಗೆ ಪ್ರಯಾಣ ಬೆಳೆಸುವರು. ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಈ ಸಮಾವೇಶದ ಬಳಿಕ ಶಿವಮೊಗ್ಗ ವಿಮಾನ ನಿಲ್ದಾಣದಿಂದ ದೆಹಲಿಗೆ ಮರು ಪ್ರಯಾಣ ಬೆಳೆಸಲಿದ್ದಾರೆ.
ಅಮಿತ್ ಷಾ ಪ್ರವಾಸ:ಮೋದಿ ರಾಜ್ಯ ಪ್ರವಾಸ ಮುನ್ನಾ ದಿನ ಹಾಗೂ ಮರು ದಿನ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯ ಪ್ರವಾಸ ಕೈಗೊಳ್ಳುವರು. ಮಾ.24ರಂದು ಬೆಂಗಳೂರಿಗೆ ಆಗಮಿಸಿ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದು, ಕಾರ್ಯಕ್ರಮದ ರೂಪರೇಷೆ ಇನ್ನಷ್ಟೇ ಅಂತಿಮವಾಗಲಿದೆ. ಮಾ.26ರಂದು ಕಲ್ಯಾಣ ಕರ್ನಾಟಕದಲ್ಲಿ ಪ್ರವಾಸ ಮಾಡಲಿದ್ದಾರೆ. ಬೀದರ್ ಜಿಲ್ಲೆಯ ಗೋರಟದಲ್ಲಿ ಸರ್ದಾರ ವಲ್ಲಭಭಾಯ್ ಪುತ್ಥಳಿ ಅನಾವರಣ ಮಾಡುವ ಸಾಧ್ಯತೆಗಳಿವೆ. ಹೈದರಾಬಾದ್ ಸಂಸ್ಥಾನ ವಿಮೋಚನೆಗೆ ಹೋರಾಡಿ 200ಕ್ಕೂ ಹೆಚ್ಚು ಜನರು ಹುತಾತ್ಮರಾದ ಗ್ರಾಮವೇ ಗೋರಟ. ಕಲ್ಯಾಣಕರ್ನಾಟಕದ ಮತ್ತೊಂದು ಜಿಲ್ಲೆಗೂ ಷಾ ಭೇಟಿ ನೀಡುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲಿ ಅದೇ ದಿನ ಸಂಜೆ ಏರ್ಪಡಿಸಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + twenty =
Remember me
