ಬೆಂಗಳೂರು:ವಿಧಾನಪರಿಷತ್ತಿಗೆ ಸದ್ಯದಲ್ಲೇ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಕೊಟ್ಟರೆ, ಪಕ್ಷ ಮಾಡಿರುವ 9 ಕೋಟಿ ರೂ. ಸಾಲ ಮರುಪಾವತಿಸುವ ಜವಾಬ್ದಾರಿಯನ್ನು ತಾವು ಹೊತ್ತುಕೊಳ್ಳುವುದಾಗಿ ಅನೇಕ ಆಕಾಂಕ್ಷಿಗಳು ಮುಂದೆ ಬಂದಿದ್ದಾರೆ.
ಈ ರೀತಿಯ ಆಫರ್‌ನೊಂದಿಗೆ ಕೆಲವರು ಈಗಾಗಲೇ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸಂಪರ್ಕಿಸಿದ್ದಾರೆ. ಇದರಲ್ಲಿ ಟಿಕೆಟ್ ಆಕಾಂಕ್ಷಿಯಾಗಿರುವ ಒಬ್ಬ ಮಾಜಿ ಸಚಿವರೂ ಇದ್ದಾರೆ. ಆದರೆ ಶಿವಕುಮಾರ್ ಈವರೆಗೆ ಈ ಆಫರ್ ಸ್ವೀಕರಿಸಿಯೂ ಇಲ್ಲ, ತಿರಸ್ಕರಿಯೂ ಇಲ್ಲ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ದೆಹಲಿ ಮತ್ತಿತರ ಕಡೆಗಳಿಂದ ಬರುವ ನಾಯಕರಿಗೆ ಹೋಟೆಲ್ ಕೊಠಡಿ ಕಾದಿರಿಸುವುದು, ಪಕ್ಷದ ಕಾರ‌್ಯಕ್ರಮ-ಪ್ರತಿಭಟನೆ ಮುಂತಾದವುಗಳ ಸಂದರ್ಭದಲ್ಲಿ ಬ್ಯಾನರ್, ಆಹ್ವಾನ ಪತ್ರಿಕೆ ಪ್ರಿಂಟ್ ಮಾಡಿಸುವುದು ಸೇರಿದಂತೆ ಪಕ್ಷದ ಅನೇಕ ಕೆಲಸಗಳಿಗಾಗಿ 9 ಕೋಟಿ ರೂ. ಸಾಲವಾಗಿದ್ದು, ಅದನ್ನು ಪಕ್ಷ ಇನ್ನೂ ತೀರಿಸಿಲ್ಲ ಎನ್ನಲಾಗಿದೆ.
ಇದನ್ನೂ ಓದಿಮದುವೆ ಮಂಟಪದಲ್ಲೇ ಹೈಡ್ರಾಮಾ: ಪತಿ ಎದುರೇ ಪ್ರೇಮಿಯ ಚುಂಬಿಸಿದಳು!
ಈ ತಿಂಗಳ 30ರಂದು ತೆರವಾಗಲಿರುವ ಮೇಲ್ಮನೆಯ 7 ಸ್ಥಾನಗಳನ್ನು ತುಂಬಲು ಈ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಇದೇ 18 ಕೊನೆಯ ದಿನ. 29ರಂದು ಚುನಾವಣೆ ನಿಗದಿಯಾಗಿದ್ದು, ವಿಧಾನಸಭೆ ಸದಸ್ಯರೇ ಇಲ್ಲಿ ಮತದಾರರು. ವಿಧಾನಸಭೆಯ ಈಗಿನ ಬಲಾಬಲ ನೋಡಿದರೆ ಬಿಜೆಪಿ 4 ಸೀಟುಗಳನ್ನು ಸುಲಭವಾಗಿ ಗೆಲ್ಲಲಿದೆ. ಕಾಂಗ್ರೆಸ್ 2 ಮತ್ತು ಜೆಡಿಎಸ್ 1 ಸ್ಥಾನ ಗೆಲ್ಲಲಿವೆ.
ಈ ಮಧ್ಯೆ, ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮಂಗಳವಾರ ತೆರಳಿ, ವಿಧಾನಪರಿಷತ್ ಚುನಾವಣೆಯ ಟಿಕೆಟ್ ಹಂಚಿಕೆ ಮತ್ತಿತರ ವಿಚಾರಗಳ ಕುರಿತು ಚರ್ಚೆ ನಡೆಸಿದರು.
ಗಡಗಡ ನಡುಗಿತು ಟ್ರಂಪ್​ ಕೈ, ಶುರುವಾಯ್ತು ಗುಮಾನಿ: ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + ten =
Remember me
