ಉಡುಪಿ:ಪರ್ಯಾಯ ಪಲಿಮಾರು ಮಠದ ಕೊನೆಯ ಸಪ್ತೋತ್ಸವ ಗುರುವಾರ ರಾತ್ರಿ ಕೃಷ್ಣ ಮಠದಲ್ಲಿ ವೈಭವದಿಂದ ಆರಂಭಗೊಂಡಿದ್ದು, ಜ.15ರವರೆಗೆ ನಡೆಯಲಿದೆ. ಹಿಂದು ಧರ್ಮದ ಆಧಾರ ಗ್ರಂಥಗಳಾದ ನಾಲ್ಕು ವೇದಗಳು, ಪಂಚರಾತ್ರ, ಮಹಾಭಾರತ, ರಾಮಾಯಣ ಪಾರಾಯಣದೊಂದಿಗೆ ಸಪ್ತಶಾಸ್ತ್ರೋತ್ಸವ ಆಚರಿಸಲಾಗುತ್ತಿದೆ.
ಉತ್ಸವದ ಮೊದಲ ದಿನ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು ಸುವರ್ಣ ಪಲ್ಲಕ್ಕಿಯಲ್ಲಿರಿಸಿ ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆಯಿತು. ಮಹಾಪೂಜೆ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರೇಶ್ವರ ದೇವರು, ಗರುಡ ರಥದಲ್ಲಿ ಕೃಷ್ಣ ಮುಖ್ಯಪ್ರಾಣ ದೇವರ ಉತ್ಸವ ಮೂರ್ತಿಗಳನ್ನು ಸ್ಥಾಪಿಸಿ ರಥೋತ್ಸವ ನೆರವೇರಿಸಲಾಯಿತು. ಮೊದಲ ದಿನದಲ್ಲಿ ತಮಿಳುನಾಡಿನ ಶ್ರೀರಂಗಮ್ಂದ ಆಗಮಿಸಿದ ತ್ರಯೀ ವಿದ್ಯಾಪೀಠ ವಿದ್ಯಾರ್ಥಿಗಳು, ವಿದ್ವಾಂಸರು ಋಗ್ವೇದ ಪಾರಾಯಣ ಮಾಡಿದರು. 14ರಂದು ಮಕರ ಸಂಕ್ರಮಣ ದಿನ ಸಂಜೆ ಶ್ರೀಕೃಷ್ಣ, ಮುಖ್ಯಪ್ರಾಣ ದೇವರಿಗೆ ಮಧ್ವ ಸರೋವರದಲ್ಲಿ ತೆಪ್ಪೋತ್ಸವ, ಕೃಷ್ಣಮಠದ ವಾರ್ಷಿಕ ಜಾತ್ರೆಯಾಗಿರುವ ಸಪ್ತೋತ್ಸವದ ಕೊನೆಯ ದಿನ 15ರಂದು ಹಗಲು ರಥೋತ್ಸವ ‘ಚೂಣೋತ್ಸವ’ ನೆರವೇರಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + nineteen =
Remember me
