ಬೆಂಗಳೂರು: ಹಿಂದೂ ಮುಸ್ಲಿಂ ಸಿಖ್ ಈಸಾಯಿ ಫೆಡರೇಷನ್ ಬೆಂಗಳೂರು ಸಂಘಟನೆ ಗುರುವಾರ ಫ್ರೀಡಂಪಾರ್ಕ್​ನಲ್ಲಿ ಆಯೋಜಿಸಿದ್ದ ಸಿಎಎ ಮತ್ತು ಎನ್​ಆರ್​ಸಿ ವಿರೋಧಿಸಿ ಸಮಾವೇಶದ ವೇದಿಕೆ ಮೇಲೆ ಅಮೂಲ್ಯ ಲಿಯೋನಾ ಎಂಬ ಯುವತಿ ಪಾಕ್ ಪರ ಘೋಷಣೆ ಕೂಗಿದ್ದಳು. ಇದರಿಂದಾಗಿ ಸಮಾವೇಶದ ಹಾದಿ ತಪ್ಪಿದ್ದು, ಎಲ್ಲರೂ ಆತಂಕಕ್ಕೆ ಒಳಗಾಗಿದ್ದರು.
ಅನಿರೀಕ್ಷಿತ ಬೆಳವಣಿಗೆ ಕಾರಣ, ಸಮಾವೇಶದ ಉದ್ದೇಶ ಈಡೇರದೇ ಹೋಗಿದೆ. ಎಲ್ಲರ ಗಮನವೂ ಆ ಯುವತಿ ಮೇಲೆ ಹೋಗಿದ್ದು, ಆ ಕ್ಷಣದ ಪ್ರತಿಕ್ರಿಯೆ ಹೀಗಿತ್ತು-ಅಮೂಲ್ಯ ಗೆ ಆಹ್ವಾನ ಕೊಟ್ಟಿಲ್ಲ. ಆಕೆ ಯಾರೆಂಬುದು ಗೊತ್ತಿಲ್ಲ. ತಾನಾಗೆ ಬಂದಿದ್ದಾಳೆ. ಸಮಾವೇಶಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಹೇಳಿಕೆ ಕೊಟ್ಟಿದ್ದಾಳೆ. ಅದೊಂದು ಕುತಂತ್ರದ ಕೆಲಸ. ಹಿಂದೂ-ಮುಸ್ಲಿಂರನ್ನು‌ ಒಗ್ಗೂಡಿಸುವ ಸಮಾವೇಶ. ಸಂವಿಧಾನದ ವಿರೋಧಿ ಹೇಳಿಕೆಗೆ ಅವಕಾಶ ಇಲ್ಲ. ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಹಿಂದಿನ ಉದ್ದೇಶ ಏನೆಂಬುದು ಪೊಲೀಸರು ತನಿಖೆ ಮೂಲಕ ಬಹಿರಂಗವಾಗಲಿ ಎಂದು ಜೆಡಿಎಸ್ ಮುಖಂಡ ಇಮ್ರಾನ್ ಪಾಷಾ ಹೇಳಿಕೆ ನೀಡಿದ್ದಾರೆ.
ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಈ ಬೆಳವಣಿಗೆಯಿಂದ ಸಿಡಿಮಿಡಿಗೊಂಡು, ಪಾಕಿಸ್ತಾನ ಪರ ಘೋಷಣೆ ಕೂಗಿದ ಯುವತಿಗೂ ನಮ್ಮ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ. ನಾವು ಇಂತಹ ಹೇಳಿಕೆಯನ್ನು ಒಪ್ಪುವುದಿಲ್ಲ. ಸಂಘಟಕರ ತಪ್ಪಿನಿಂದ ಈ ಯುವತಿ ಭಾಷಣ ಮಾಡಿದ್ದಾರೆ. ಅದಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದರಲ್ಲದೆ, ನಮ್ಮ ಪಾಲಿಗೆ ಭಾರತ್ ಜಿಂದಾಬಾದ್ ಆಗಿತ್ತು, ಮುಂದೆಯೂ ಭಾರತ್ ಜಿಂದಾಬಾದ್ ಆಗಿರಲಿದೆ ಎಂದರು.
Asadduduin Owaisi, AIMIM, in Bengaluru: I condemn this statement. The woman is not associated with us. Humare liye Bharat Zindabad tha, zindabad rahega.pic.twitter.com/DMe4Zvsc9L
— ANI (@ANI)February 20, 2020

VIDEO|ಫ್ರೀಡಂ ಪಾರ್ಕ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ನಡೆಯುತ್ತಿದ್ದ ಹೋರಾಟದಲ್ಲಿ ಪಾಕ್​ ಪರ ಘೋಷಣೆ ಕೂಗಿದ ಯುವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 16 =
Remember me
