ದೀಸ್ಪುರ್​:ಅಸ್ಸಾಂನಲ್ಲಿ ನಡೆಯುತ್ತಿರುವ ಭಾರತ್​ ಜೋಡೋ ನ್ಯಾಯ್​ ಯಾತ್ರೆಯನ್ನು ಹತ್ತಿಕ್ಕಲು ಅಲ್ಲಿನ ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ಅಸ್ಸಾಂ ಸಿಎಂ ಹಿಮಂತ್​ ಬಿಸ್ವಾ ಶರ್ಮ ಅವರು ಖಡಕ್​ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಅವರೇ 50 ಸಾವಿರವಲ್ಲ 500 ಕಿ.ಮೀ ಪ್ರಯಾಣದುದ್ದಕ್ಕೂ ಒಂದೇ ಒಂದು ಸ್ಥಳದಲ್ಲಿ 2 ಸಾವಿರ ಮಂದಿಯು ಕೂಡ ರಾಹುಲ್​ರನ್ನು ನೋಡಲು ಬರಲಿಲ್ಲ. ನೀವು ಪೋಸ್ಟ್​ ಮಾಡಿರುವ ವಿಡಿಯೋವನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ಗಮನಿಸಿ ಮತ್ತು ಅಲ್ಲಿರುವ ಜನಸಂಖ್ಯೆಯನ್ನು ಎಣಿಸಿ. ಅಸ್ಸಾಂ ಮಂದಿ ರಾಮನ ಜತೆಗಿರುತ್ತಾರೆ ಹೊರತು ರಾವಣನ ಜತೆಗಲ್ಲ ಎಂದು ಎಕ್ಸ್​ ಖಾತೆಯ ಮೂಲಕ ತಿರುಗೇಟು ನೀಡಿದ್ದಾರೆ.
Siddaramaiah avare,
50,000?Throughout the 500+ km journey not even 2,000 people came to see him at one place . Please look at the video you have posted and count the number of people.
Assam is with Ram and not with Ravana.https://t.co/X6H81eGc3P
— Himanta Biswa Sarma (@himantabiswa)January 23, 2024

ಸಿದ್ದರಾಮಯ್ಯ ಏನು ಹೇಳಿದ್ದರು?ಇಂದು ಮಧ್ಯಾಹ್ನ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಭಾರತ್​ ಜೋಡೋ ನ್ಯಾಯ ಯಾತ್ರೆಯನ್ನು ಪೊಲೀಸರು ತಡೆಯುತ್ತಿರುವ ವಿಡಿಯೋಗಳನ್ನು ಪೋಸ್ಟ್​ ಮಾಡಿ, ಯಾತ್ರೆಯನ್ನು ಹತ್ತಿಕ್ಕಲು ಸಿಎಂ ಹಿಮಂತ್​ ಬಿಸ್ವಾ ಶರ್ಮ ತೀವ್ರ ಕ್ರಮ ತೆಗೆದುಕೊಂಡಿರುವುದನ್ನು ನೋಡಿದರೆ, ಅವರಲ್ಲಿ ಯಾತ್ರೆಯ ಮೇಲೆ ಎಷ್ಟು ಭಯವಿದೆ ಎಂಬುದು ಬಹಿರಂಗವಾಗುತ್ತದೆ. ಯಾತ್ರಿಕರ ಮೇಲಿನ ದಾಳಿ, ಎಫ್​ಐಆರ್​ ದಾಖಲು ಮತ್ತು ದೇವಸ್ಥಾನ ಪ್ರವೇಶವನ್ನು ನಿರ್ಬಂಧಿಸುವುದನ್ನು ನೋಡಿದರೆ, ಬಿಸ್ವಾರ ಹತಾಶೆ ಹೆಚ್ಚಾಗಿರುವುದು ಕಾಣಿಸುತ್ತದೆ.
ರಾಹುಲ್​ ಗಾಂಧಿ ಸೇರಿದಂತೆ 50 ಸಾವಿರಕ್ಕೂ ಹೆಚ್ಚು ಯಾತ್ರಿಗಳನ್ನು ಗುವಾಹಟಿ ಗಡಿಯಲ್ಲೇ ತಡೆದು ನಿಲ್ಲಿಸಲಾಗಿದೆ. ರಾಹುಲ್​ ಅವರನ್ನು ಬಂಧಿಸಲು ರಾಜ್ಯದ ಸಂಪನ್ಮೂಲಗಳನ್ನು ಬಳಸುವ ಹಿಮಂತ್​ ಬಿಸ್ವಾ ಅವರ ಯೋಜನೆಯು ರಾಹುಲ್ ಗಾಂಧಿಯನ್ನು ತಡೆಯಲು ಸಾಧ್ಯವಿಲ್ಲ ಮತ್ತು ನ್ಯಾಯಕ್ಕಾಗಿ ನಮ್ಮ ಯಾತ್ರೆಯು ಮುಂದುವರಿಯುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಹಿಂತ್​ ತಿರುಗೇಟು ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
