ಬೆಂಗಳೂರು:ಆಂಧ್ರಪ್ರದೇಶದ ರೌಡಿಶೀಟರ್ ಮತ್ತು ಆತನ ಕಾರು ಚಾಲಕನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಆಂಧ್ರದ ಸುಪಾರಿ ಕಿಲ್ಲರ್‌ಗಳು ಎಂಬುದು ಕೆ.ಆರ್.ಪುರ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಆಂಧ್ರಪ್ರದೇಶದ ಮದನಪಲ್ಲಿಯ ರೌಡಿ ಶಿವಶಂಕರ್ ರೆಡ್ಡಿ (29) ಮತ್ತು ಕಾರು ಚಾಲಕ ಅಶೋಕ್ ರೆಡ್ಡಿ (33) ಎಂಬಾತನ ಮೇಲೆ ಕೆ.ಆರ್.ಪುರ ಬಳಿಯ ಕುರುಸೋನ್ನೇನಹಳ್ಳಿಯಲ್ಲಿ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್ ಸಮೀಪ ಗುರುವಾರ ಮಧ್ಯಾಹ್ನ ಗುಂಡಿನ ದಾಳಿ ನಡೆದಿತ್ತು.
ಶುಕ್ರವಾರ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಘಟನ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಮತ್ತೊಂದೆಡೆ 4 ವಿಶೇಷ ಪೊಲೀಸ್ ತಂಡಗಳು ಆರೋಪಿಗಳ ಬಂಧನಕ್ಕೆ ಬಲೆಬೀಸಿವೆ.
ಗುರುವಾರ ಮಧ್ಯಾಹ್ನ 12 ಗಂಟೆಗೆ ಕಪ್ಪು ಮತ್ತು ಕೆಂಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದಿರುವ ನಾಲ್ವರು ದುಷ್ಕರ್ಮಿಗಳು, ಏಕಾಏಕಿ 2 ಪಿಸ್ತೂಲ್‌ನಿಂದ ರೌಡಿ ಮೇಲೆ 10 ಸುತ್ತು ಗುಂಡಿನ ದಾಳಿ ನಡೆಸಿದ ಹಾಗೂ ಆರೋಪಿಗಳ ಚಲನವಲನದ ವಿಡಿಯೋ ಪತ್ತೆ ಆಗಿದೆ. ಕೃತ್ಯಕ್ಕೆ ಪಾಯಿಂಟ್-9 ಎಂಎಂ ಪಿಸ್ತೂಲ್ ಬಳಸಿದ್ದು, ರೌಡಿ ದೇಹದಲ್ಲಿ 5 ಗುಂಡುಗಳು, ಕಾರು ಚಾಲಕನ ಒಂದು ತಾಗಿದೆ. ಉಳಿದಂತೆ 4 ಗುಂಡುಗಳು ಸ್ಥಳದಲ್ಲಿ ಪತ್ತೆ ಆಗಿವೆ.
ಗುಂಡಿನ ದಾಳಿಗೆ ಒಳಗಾದ ಕಾರು ಚಾಲಕ, ಸ್ಥಳೀಯರ ಸಹಾಯದಿಂದ ಶಿವಶಂಕರ್ ರೆಡ್ಡಿಯನ್ನು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದನು ಆರೋಪಿಗಳು ಮರೆಯಲ್ಲಿ ನಿಂತು ಗಮನಿಸಿದ್ದಾರೆ. ಇದಾದ ಮೇಲೆ ಹೊಸಕೋಟೆ ಮಾರ್ಗವಾಗಿ ಆಂಧ್ರ ಗಡಿದಾಡಿರುವುದು ಸಿಸಿ ಕ್ಯಾಮರಾ ಮತ್ತು ಟೋಲ್‌ಯಿಂದ ಮಾಹಿತಿ ಲಭ್ಯವಾಗಿದೆ. ಹಳೇ ದ್ವೇಷಕ್ಕೆ ರೆಡ್ಡಿ ಹತ್ಯೆಗೆ ಸುಪಾರಿ ಕೊಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಆಂಧ್ರಪ್ರದೇಶ ಗ್ಯಾಂಗ್ ಕೈವಾಡ ಇರುವುದು ಗೊತ್ತಾಗಿದೆ.
ಈಗ ಈತನ ಕೊಲೆಗೆ ಸುಪಾರಿ ಕೊಟ್ಟಿದ್ದು ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ಹೀಗಾಗಿ ಆಂಧ್ರ ಜೈಲಿನಲ್ಲಿ ಇರುವ ಈತನ ಎದುರಾಳಿ ಗ್ಯಾಂಗ್‌ನ್ನು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳ ಗುರುತು ಪತ್ತೆ ಆಗಿದ್ದು, ಶೀಘ್ರದಲ್ಲಿಯೇ ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 15 =
Remember me
