ಬೆಂಗಳೂರು:ಬೆಂಗಳೂರಿನ ಕಾರ್ಪೋರೇಷನ್​ ಬ್ಯಾಂಕ್​ ಎಟಿಎಂನಲ್ಲಿ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್​ ಮೇಲೆ ನಡೆದಿದ್ದ ಏಳು ವರ್ಷಗಳ ಹಿಂದಿನ ಹಲ್ಲೆ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು, ಆತನೇ ಅಪರಾಧಿ ಎಂಬುದನ್ನು ಕೋರ್ಟ್​ ಘೋಷಿಸಿದೆ.ಬೆಂಗಳೂರಿನ ಬಿಬಿಎಂಪಿ ಕಚೇರಿ ಸಮೀಪದ ಜೀವ ವಿಮಾ ನಿಗಮದ ಕಟ್ಟಡದಲ್ಲಿರುವ ಕಾರ್ಪೋರೇಷನ್​ ಬ್ಯಾಂಕ್​ ಎಟಿಎಂಗೆ 2013ರ ನ. 11ರಂದು ಹೋಗಿದ್ದ ಜ್ಯೋತಿ ಉದಯ್ ಮೇಲೆ ವ್ಯಕ್ತಿಯೊಬ್ಬ ಗಂಭೀರವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದ. ಬಳಿಕ ತೀವ್ರ ಹುಡುಕಾಟದ ಮೇಲೆ ಪತ್ತೆ ಹಚ್ಚಿದ್ದ ಪೊಲೀಸರು 2017ರ ಮೇ 8ರಂದು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಎಸ್​.ಜೆ. ಪಾರ್ಕ್​ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣ ಸಂಬಂಧ ಸಿಸಿಎಚ್​ 65ರ ನ್ಯಾಯಾಧೀಶೆ ರಾಜೇಶ್ವರಿ ಅವರು ಇಂದು ಆದೇಶ ನೀಡಿದ್ದಾರೆ. ಆರೋಪಿ ಮಧುಕರ್ ರೆಡ್ಡಿ ವಿರುದ್ಧವಿದ್ದ ಆರೋಪ ಸಾಬೀತಾಗಿದ್ದು, ನಾಳೆ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಪ್ರಕರಣದ ಕುರಿತು ಸತತ‌ ಮೂರು ವರ್ಷಗಳಿಂದ ವಿಚಾರಣೆ ನಡೆದಿದ್ದು, ಸರ್ಕಾರ ಪರ ವಕೀಲ ಎಂ.ವಿ.ತ್ಯಾಗರಾಜ್ ವಾದ ಮಂಡಿಸಿದ್ದರು.
(ದಿಗ್ವಿಜಯ ನ್ಯೂಸ್)
ಕೈ ಕೊಟ್ಟ ಪ್ರೇಯಸಿಯ ಬರ್ತ್​ ಡೇ ಪಾರ್ಟಿಗೆ ಮಾಜಿ ಲವರ್ ಎಂಟ್ರಿ! ನೋಡನೋಡುತ್ತಿದ್ದಂತೆ ನಡೆಯಿತು ದುರಂತ

ಹೀಗೆಲ್ಲ ಟ್ವೀಟ್​ ಮಾಡಿದ್ರೆ ನಿಮ್​ ಅಕೌಂಟೇ ಬ್ಲಾಕ್​ ಆಗುತ್ತೆ ಹುಷಾರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + ten =
Remember me
