ಮೈಸೂರು:ಸಾಂಸ್ಕೃತಿಕ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಮೈಸೂರಿನಲ್ಲಿ ಧರ್ಮ ದಂಗಲ್​ ಕಿಡಿ ಹೊತ್ತಿಕೊಂಡಿದ್ದು, ರಾಜ್ಯಾದ್ಯಂತ ವ್ಯಾಪಕ ಸದ್ದು ಮಾಡುತ್ತಿದೆ. ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಾಡಿದ ಜಯತು ಜಯತು ಜೈ ಶ್ರೀರಾಮ ಹಾಡು ಕೋಲಾಹಲ ಸೃಷ್ಟಿಸಿದ್ದು, ಶ್ರೀಹರ್ಷ ಹಾಡಿದ ಈ ಹಾಡಿನಿಂದ ಕಾರ್ಯಕ್ರಮದಲ್ಲಿ ಗಲಾಟೆ ಶುರುವಾಗಿದೆ.
ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದ ಹಿಂದೂ ವಿದ್ಯಾರ್ಥಿಗೆ ಥಳಿಸಿದ ಘಟನೆ ನಡೆದಿದೆ. ಇದರ ಫೋಟೋ ಹಾಗೂ ವಿಡಿಯೋವನ್ನ ಸಂಸದ ಪ್ರತಾಪ್​ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಹಿಂದೂ ವಿದ್ಯಾರ್ಥಿಯ ಮೇಲೆ ಹಲ್ಲೆ ಖಂಡಿಸಿದ್ದಾರೆ.
ನಿನ್ನೆ ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಖ್ಯಾತ ಗಾಯಕ ಶ್ರೀಹರ್ಷ ಅವರು "ಜಯತು ಜಯತು ಜೈ ಶ್ರೀರಾಮ್" ಎಂದು ಹಾಡಿದಾಗ ಕಾರ್ಯಕ್ರಮವನ್ನು ಹಾಳುಗೆಡವಿದ್ದಲ್ಲದೆ ಒಬ್ಬ ಹಿಂದೂ ವಿದ್ಯಾರ್ಥಿಯನ್ನು ಥಳಿಸಿದ್ದಾರೆ. ಇದನ್ನೆಲ್ಲಾ ನೋಡಿಯೂ ಕೈಕಟ್ಟಿ ಕುಳಿತುಕೊಳ್ಳಬೇಕಾ?pic.twitter.com/FJTEPwKWWe
ಇದನ್ನೂ ಓದಿ:ಅಶ್ಲೀಲ ವಿಡಿಯೋ ಪ್ರಕರಣ; ಪ್ರಜ್ವಲ್ ರೇವಣ್ಣ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ: ರಾಷ್ಟ್ರೀಯ ಮಹಿಳಾ ಆಯೋಗ
ನಿನ್ನೆ ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಖ್ಯಾತ ಗಾಯಕ ಶ್ರೀಹರ್ಷ ಅವರು “ಜಯತು ಜಯತು ಜೈ ಶ್ರೀರಾಮ್” ಎಂದು ಹಾಡಿದಾಗ ಕಾರ್ಯಕ್ರಮವನ್ನು ಹಾಳುಗೆಡವಿದ್ದಲ್ಲದೆ ಒಬ್ಬ ಹಿಂದೂ ವಿದ್ಯಾರ್ಥಿಯನ್ನು ಥಳಿಸಿದ್ದಾರೆ. ಇದನ್ನೆಲ್ಲಾ ನೋಡಿಯೂ ಕೈಕಟ್ಟಿ ಕುಳಿತುಕೊಳ್ಳಬೇಕಾ ಎಂದು ಪ್ರಶ್ನಿಸಿದ್ದಾರೆ.
ಕಾರ್ಯಕ್ರಮದಲಲಿ ಖ್ಯಾತ ಗಾಯ ಶ್ರೀಹರ್ಷ ಜಯತು ಜಯತು ಜೈಶ್ರೀರಾಮ ಹಾಡು ಹಾಡಿದ್ದಾರೆ. ಈ ಹಾಡಿನಿಂದ ವಿದ್ಯಾರ್ಥಿಗಳ ಗುಂಪು ಕೆರಳಿದೆ. ಕಾರ್ಯಕ್ರಮದ ನಡುವೆ ಗಲಾಟೆ ಶುರುವಾಗಿದೆ. ಜೈಶ್ರೀರಾಮ ಹಾಡಿನಿಂದ ಕಾಲೇಜಿನಲ್ಲಿ ಧರ್ಮದಂಗಲ್ ಕಿಡಿ ಹೊತ್ತಿಕೊಂಡಿದೆ. ಘಟನೆ ಕುರಿತ ಮೂರು ವಿಡಿಯೋಗಳನ್ನು ಪ್ರತಾಪ್ ಸಿಂಹ ಹಂಚಿಕೊಂಡಿದ್ದಾರೆ. ಘಟನೆ ವಿರುದ್ಧ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 17 =
Remember me
