ಶಿವಮೊಗ್ಗ:ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್​ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿದೆ.
ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದರೂ ಅದರ ಬಿಸಿ ಕಡಿಮೆಯಾದಂತೆ ಕಾಣುತ್ತಿಲ್ಲ. ಇದೀಗ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ನಜ್ರುಲ್​, ಅಬ್ರಾರ್​ ಹಾಗೂ ಸಂಗಡಿಗ ಬಿಜೆಪಿಗೆ ಮತ ಹಾಕಿದ್ದಕ್ಕೆ ಕುಪಿತಗೊಂಡು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಆತನ ವಾಹನವನ್ನು ಜಖಂಗೊಳಿಸಿರುವ ಘಟನೆ ಶಿವಮೊಗ್ಗದ ಸೋಮಿನಕೊಪ್ಪ ಬಡಾವಣೆಯಲ್ಲಿ ನಡೆದಿದೆ.
ಗಾಯಾಳು ಆಟೋ ಚಾಲಕ ಹರೀಶ್​ ರಾವ್​ ಎಂದಿನಂತೆ ಕೆಲಸ ಮಾಡುತ್ತಿದ್ದ ವೇಳೆ ನಜ್ರುಲ್​ ಅಲಿಯಾಸ್​ ಡಬ್ಬಾ, ಅಬ್ರಾರ್​ ಉರುಫ್​ ಇಡ್ಲಿ, ಹಾಗೂ ಇನ್ನೋರ್ವ ಆರೋಪಿ ಇವರ ಬಳಿ ಬಂದು ಖ್ಯಾತೆ ತೆಗೆದಿದ್ದಾರೆ.
ಈ ವೇಳೆ ಆರೋಪಿಗಳು ಹರೀಶ್​ಗೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಮತ ಹಾಕಿದ್ದೀಯಾ ಎಂದು ಕೇಳಿದ್ದಾರೆ. ಈ ವೇಳೆ ಸಂತ್ರಸ್ತ ತಾನು ಬಿಜೆಪಿಗೆ ವೋಟ್​ ಮಾಡಿರುವುದಾಗಿ ಹೇಳಿದ್ಧಾನೆ.
ಇದಕ್ಕೆ ಕುಪಿತಗೊಂಡು ಆರೋಪಿಗಳು ಚಾಲಕನ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿ ಆಟೋವನ್ನು ರಾಡ್​ನಿಂದ ಜಖಂಗೊಳಿಸಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ:ಸರ್ಕಾರಿ ಶಾಲೆ ಶಿಕ್ಷಕನಿಂದ ಬಾಲಕಿಯರಿಗೆ ಕಿರುಕುಳ; ಆರೋಪಿ ಅರೆಸ್ಟ್​​, ಪ್ರಾಂಶುಪಾಲ ಅಮಾನತು
ಘಟನೆ ನಡೆದ ಕೂಡಲ್ಲೇ ಜಖಂಗೊಂಡ ಆಟೋ ಸಮೇತ ಚಾಲಕ ಹರೀಶ್​ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿ ದುರು ಸಲ್ಲಿಸಿದ್ದಾರೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ವೇಳೆ ಮಾಜಿ ಡಿಸಿಎಂ ಕೆ.ಎಸ್​. ಈಶ್ವರಪ್ಪ ಹಾಗೂ ದೂರುದಾರ ಹರೀಶ್​ ಎದುರಾಗಿದ್ದು ತನಗಾದ ಬಗ್ಗೆ ಹೇಳಿಕೊಂಡು ರಕ್ಷಣೆ ನೀಡುವಂತೆ ಕೋರಿ ಮಾಜಿ ಸಚಿವರ ಕಾಲಿಗೆ ಬಿದ್ದಿದ್ದಾನೆ.
ಆಟೋ ಚಾಲಕನ ಮನವಿಗೆ ಸ್ಪಂದಿಸಿದ ಕೆ.ಎಸ್​. ಈಶ್ವರಪ್ಪ ಸಾಂತ್ವಾನ ಹೇಳಿದ್ದಾರೆ ಮತ್ತು 20,000 ಸಾವಿರ ರೂಪಾಯಿ ಪರಿಹಾರವನ್ನು ನೀಡಿದ್ದಾರೆ. ಕೂಡಲೇ ಜಿಲ್ಲಾ  ಜಿಲ್ಲಾ ರಕ್ಷಣಾಧಿಕಾರಿಗಳ ಬಳಿ ಮಾತನಾಡಿ ಆಟೋ ಚಾಲಕನಿಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
