ಮೈಸೂರು:ಓವರ್​ ಟೇಕ್​ ಮಾಡಿದರು ಎಂಬ ಕಾರಣಕ್ಕೆ ಯುವಕನೋರ್ವ KSRTC ಬಸ್​​ ಚಾಲಕ ಹಾಗೂ ನಿರ್ವಾಹಕನನ್ನು ಹಿಡಿದು ಮನಸೋಇಚ್ಛೆ ಥಳಿಸಿರುವ ಘಟನೆ ಮೈಸೂರು ನಗರದಲ್ಲಿ ನಡೆದಿದೆ.
ಮೈಸೂರು ನಗರದ ಫೈವ್​ ಲೈಟ್​​ ವೃತ್ತದಲ್ಲಿ ಘಟನೆ ನಡೆದಿದ್ದು, ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಲಷ್ಕರ್ ಪೊಲೀಸ್​ ಠಾಣೆ ಸಿಬ್ಬಂದಿ ಹಲ್ಲೆಗೊಳಗಾದ ಚಾಲಕ ಹಾಗೂ ನಿರ್ವಾಹಕನನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ:ಸಾಮಾಜಿಕ ಜಾಲತಾಣಗಳಿಂದ ಹಣ ಗಳಿಸುತ್ತಿದ್ದೇನೆ ಎಂಬ ವಿಚಾರ ಸುಳ್ಳು: ವಿರಾಟ್​ ಕೊಹ್ಲಿ ಸ್ಪಷ್ಟನೆ
ಕನಕಪುರ-ಮೈಸೂರು ಮಾರ್ಗದ ಬಸ್​ ಮಳವಳ್ಳಿ ಮೂಲಕ ನಗರವನ್ನು ಪ್ರವೇಶಿಸಿದೆ. ಮಾರ್ಗಮಧ್ಯೆ ತನ್ನ ಸ್ಕೂಟರ್​ಅನ್ನು ಓವರ್​ಟೇಕ್​ ಮಾಡಿದರು ಎಂಬ ಕಾರಣಕ್ಕೆ ಯುವಕನೋರ್ವ ಬಸ್​ ಅಡ್ಡಗಟ್ಟಿ ಚಾಲಕನೊಂದಿಗೆ ಜಗಳ ತೆಗೆದಿದ್ದಾನೆ. ಬಳಿಕ ಚಾಲಕನನ್ನು ಏಕಾಏಕಿ ಬಸ್​ನಿಂದ ಹೊರಗೆಳೆದು ಹಲ್ಲೆ ನಡೆಸಿದ್ದಾನೆ. ಚಾಲಕನ ನೆರವಿಗೆ ಬಂದ ನಿರ್ವಾಹಕನ ಮೇಲೂ ಯುವಕ ಹಲ್ಲೆ ನಡೆಸಿ ಪುಂಡಾಟ ಮೆರೆದಿದ್ದಾನೆ.
ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಲಷ್ಕರ್​ ಪೊಲೀಸ್​ ಠಾಣೆ ಸಿಬ್ಬಂದಿ ಹಲ್ಲೆಗೊಳಗಾದವರನ್ನೂ ರಕ್ಷಿಸಿ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 1 =
Remember me
