ಬೆಂಗಳೂರು:ಮಾಜಿ ಸಂಸದರೊಬ್ಬರ ಪುತ್ರನನ್ನು ಊಟಕ್ಕೆಂದು ಕರೆದು ಬಳಿಕ ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಹಲ್ಲೆ ಮಾಡಿದ ಪ್ರಸಂಗವೊಂದು ಬೆಂಗಳೂರಿನಲ್ಲಿ ನಡೆದಿದೆ. ಕೊನೆಗೂ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಪಾರಾಗಿರುವ ಸಂಸದರ ಪುತ್ರ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಅಂಬೇಡ್ಕರ್ ಬೀದಿಯಲ್ಲಿನ ಸೂಜಿ ಕ್ಯೂ ಬಾರ್ ಆ್ಯಂಡ್​ ರೆಸ್ಟೋರೆಂಟ್​ನಲ್ಲಿ ಜ.23ರಂದು ಈ ಹಲ್ಲೆ ಪ್ರಕರಣ ನಡೆದಿದೆ. ಚಂದ್ರಶೇಖರ್ ಕುನ್ನೂರ್ ಹಲ್ಲೆಗೊಳಗಾಗಿರುವ ವ್ಯಕ್ತಿ. ಪ್ರಕರಣ ಸಂಬಂಧ ಚೇತನ್ ಹೆಗ್ಡೆ, ಪ್ರಶಾಂತ್ ರೆಡ್ಡಿ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಜ. 23ರ ರಾತ್ರಿ ಚಂದ್ರಶೇಖರ್ ಕುನ್ನೂರು ತಮ್ಮ ಸ್ನೇಹಿತರಾದ ಯುವರಾಜ್, ಪೃಥ್ವಿ ಗೌಡ, ಪ್ರಸನ್ನ ಜಯಪ್ಪ, ಶಿವಪ್ರಸಾದ್ ಅವರ ಜತೆ ಮಿರಾಜ್ ಹೋಟೆಲ್​ಗೆ ಊಟಕ್ಕೆಂದು ಹೋಗಿದ್ದರು. ಆಗ ಅಲ್ಲೇ ಇದ್ದ ಚೇತನ್ ಹೆಗ್ಡೆ ನಮ್ಮ ಹೋಟೆಲ್​ಗೆ ಹೋಗಿ ಊಟ ಮಾಡೋಣ ಎಂದು ಚಂದ್ರಶೇಖರ್​ ಅವರನ್ನು ಕರೆದಿದ್ದ. ಹೀಗಾಗಿ ಅವರು ಚೇತನ್ ಜತೆ ಸೂಜಿ ಕ್ಯೂ ಬಾರ್ ಆ್ಯಂಡ್ ರೆಸ್ಟೋರೆಂಟ್​ಗೆ ಹೋಗಿದ್ದರು.
ಇದನ್ನೂ ಓದಿ:‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!
ಅಷ್ಟರಲ್ಲಾಗಲೇ ರಾತ್ರಿ 11 ಗಂಟೆ ಆಗಿದ್ದು, ಕ್ಲೋಸಿಂಗ್ ಸಮಯವಾಗಿತ್ತು. ಬೇಗ ಊಟ ಬರಲಿ ಎಂದು ಕಾಯುತ್ತಿದ್ದಾಗ ಅಲ್ಲಿಗೆ ಬಂದ ಪ್ರಶಾಂತ್ ರೆಡ್ಡಿ ಚಂದ್ರಶೇಖರ್​ಗೆ ಅವಾಚ್ಯವಾಗಿ ನಿಂದಿಸಿದ್ದ. ಅದಕ್ಕೆ ಚೇತನ್ ಕೂಡ ಜೊತೆಯಾಗಿದ್ದು, ಇಬ್ಬರೂ ಚಂದ್ರಶೇಖರ್​ಗೆ ಗದರಿ ಹಲ್ಲೆ ನಡೆಸಿದ್ದರು. ಬಳಿಕ ಕಪಾಳಕ್ಕೆ ಹೊಡೆದು ಬಾಟಲಿ ಚೂರಿನಿಂದ ಚುಚ್ಚಲು ಮುಂದಾಗಿದ್ದರು. ಆಗ ಚಂದ್ರಶೇಖರ್​ ಅಲ್ಲಿಂದ ತಪ್ಪಿಸಿಕೊಂಡು ಪರಾರಿ ಆಗಿದ್ದರು. ಇವತ್ತು ತಪ್ಪಿಸಿಕೊಂಡರೂ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ ಎಂದು ಚೇತನ್ ಬೆದರಿಕೆ ಹಾಕಿದ್ದರಿಂದ ಚಂದ್ರಶೇಖರ್ ದೂರು ನೀಡಿ ಸೂಕ್ತ ಕ್ರಮಕ್ಕೆ ಮನವಿ ಮಾಡಿದ್ದಾರೆ. ಹಲ್ಲೆಗೊಳಗಾಗಿರುವ ಚಂದ್ರಶೇಖರ್​ ಧಾರವಾಡದ ಮಾಜಿ ಸಂಸದ ಮಂಜುನಾಥ್ ಅವರ ಪುತ್ರ.
ಇದನ್ನೂ ಓದಿ:ಪ್ರೀತಿಸುವ ನಾಟಕ, ಐದೇ ತಿಂಗಳಲ್ಲಿ ಲಿವಿಂಗ್ ಟುಗೆದರ್​; ಅವಳಾಗುತ್ತಿದ್ದಂತೆ ಗರ್ಭಿಣಿ, ಇವನು ಪರಾರಿ…
ಪ್ರಕರಣದಲ್ಲಿ ಪ್ರಶಾಂತ್ ರೆಡ್ಡಿ, ಚೇತನ್ ಹೆಗ್ಡೆ ಮಾತ್ರವಲ್ಲದೆ, ಕೋವಿಡ್ ನಿಯಮ ಉಲ್ಲಂಘಿಸಿರುವ ಸೂಜಿ ಕ್ಯೂ ಬಾರ್ ಆ್ಯಂಡ್​ ರೆಸ್ಟೋರೆಂಟ್​ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಂಚಕ ಪತಿಯ ಅರಸಿ ಬೆಂಗಳೂರಿಗೆ ಬಂದ್ಲು ಎರಡನೇ ಪತ್ನಿ; ಇವ ಶ್ರೀಮಂತರನ್ನೇ ನೋಡಿ ಮದ್ವೆ ಆಗಿ ಮೋಸ ಮಾಡ್ತಿದ್ದ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
