ಬೆಂಗಳೂರು:ಉದ್ಯಮಿ ಶ್ರೀನಿವಾಸ ನಾಯ್ಡು ಮತ್ತು ಆತನ ಸಹಚರರು ಮಾಜಿ ಡಾನ್ ದಿ.ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ಲ್ಯಾವೆಲ್ಲೆ ರಸ್ತೆಯಲ್ಲಿರುವ ಖಾಝಿ ಹೋಟೆಲ್ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಈ ಸಂಬಂಧ ರಿಕ್ಕಿ ರೈ ಕಾರು ಚಾಲಕ ಸೋಮಶೇಖರ್ ಎಂಬುವರು ಕಬ್ಬನ್‌ಪಾರ್ಕ್ ಠಾಣೆಯಲ್ಲಿ ಶ್ರೀನಿವಾಸ ನಾಯ್ಡು ಮತ್ತು ಆತನ ಕಾರು ಚಾಲಕ ಹಾಗೂ ಇತರರ ವಿರುದ್ಧ ದೂರು ನೀಡಿದ್ದು ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನು ಘಟನೆ ಸಂಬಂಧ ಉದ್ಯಮಿ ಶ್ರೀನಿವಾಸನಾಯ್ಡು ಯಾವುದೇ ದೂರು ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಯಾವ ಸಮಯದಲ್ಲಿ ವ್ಯಾಯಾಮ ಒಳ್ಳೆಯದು?; ಈ ಅವಧಿಯೇ ಸೂಕ್ತವಂತೆ!
ಶುಕ್ರವಾರ ರಾತ್ರಿ ಲ್ಯಾವೆಲ್ಲೆ ರಸ್ತೆಯಲ್ಲಿರುವ ಖಾಝಿ ಹೋಟೆಲ್‌ಗೆ ರಿಕ್ಕಿ ರೈ ಬಂದಿದ್ದಾರೆ. ಅದೇ ವೇಳೆ ಉದ್ಯಮಿ ಶ್ರೀನಿವಾಸ ನಾಯ್ಡು ಕೂಡ ಬಂದಿದ್ದು, ಏಕಾಏಕಿ ಶ್ರೀನಿವಾಸನಾಯ್ಡು, ಆತನ ಕಾರು ಚಾಲಕ ಹಾಗೂ 3-4 ಮಂದಿ ಇತರರು ರಿಕ್ಕಿ ರೈ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ ರಿಕ್ಕಿ ರೈ ಹಣೆ ಭಾಗಕ್ಕೆ ಪೆಟ್ಟು ಬಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಪೊಲೀಸರು ಸ್ಥಳಕ್ಕೆ ಬರುತ್ತಿದಂತೆ ಶ್ರೀನಿವಾಸ ನಾಯ್ಡು ಅವರ ಜತೆಯಲ್ಲಿ ಇದ್ದವರು ಪರಾರಿಯಾಗಿದ್ದಾರೆ. ಈ ಸಂಬಂಧ ರಿಕ್ಕಿ ರೈ ಚಾಲಕ ನೀಡಿದ ದೂರಿನ ಅನ್ವಯ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2021ರ ಅಕ್ಟೋಬರ್‌ನಲ್ಲಿ ಸದಾಶಿವನಗರದ ಸಪ್ತಗಿರಿ ಅಪಾರ್ಟ್‌ಮೆಂಟ್‌ನಲ್ಲಿ ಶ್ರೀನಿವಾಸ್ ನಾಯ್ಡುಗೆ ಸೇರಿದ ರೇಂಜ್ ರೋವರ್ ಕಾರಿಗೆ ಬೆಂಕಿ ಇಟ್ಟ ಆರೋಪ ರಿಕ್ಕಿ ರೈ ಹಾಗೂ ಆತನ ಬೆಂಬಲಿಗರ ಮೇಲಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸದಾಶಿವನಗರ ಠಾಣಾ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳು ರಿಕ್ಕಿ ರೈ ಸೂಚನೆ ಅನ್ವಯ ಕಾರನ್ನು ಸುಟ್ಟಿರುವುದಾಗಿ ಹೇಳಿಕೆ ನೀಡಿದ್ದರು ಎನ್ನಲಾಗಿತ್ತು.
ಇದನ್ನೂ ಓದಿ:ಪ್ರವೀಣ್​ ನೆಟ್ಟಾರು ಪತ್ನಿಯ ಉದ್ಯೋಗ ವಿಚಾರ: ಸಿಎಂ ಅವರಿಂದ ಮಹತ್ವದ ನಿರ್ಣಯ
ಶ್ರೀನಿವಾಸನಾಯ್ಡು ಮತ್ತು ರಿಕ್ಕಿ ರೈ ಸ್ನೇಹಿತರಾಗಿದ್ದರು. ಮುತ್ತಪ್ಪ ರೈ ಜತೆಯೂ ಶ್ರೀನಿವಾಸನಾಯ್ಡು ವ್ಯವಹಾರ ಇಟ್ಟುಕೊಂಡಿದ್ದ. ಮುತ್ತಪ್ಪ ರೈ ಮೃತಪಟ್ಟ ಬಳಿಕ ಆ ಗ್ರೂಪ್‌ನಿಂದ ದೂರವಾಗಿದ್ದರು. ರಿಕ್ಕಿ ರೈ ಮತ್ತು ಶ್ರೀನಿವಾಸ ನಾಯ್ಡು ನಡುವೆ ಲಕ್ಷಾಂತರ ರೂ. ಹಣಕಾಸಿನ ವಿಚಾರಕ್ಕೆ ಮೊದಲಿನಿಂದಲೂ ಗಲಾಟೆ ನಡೆಯುತ್ತಿತ್ತು. ಶುಕ್ರವಾರ ಅನಿರೀಕ್ಷಿತವಾಗಿ ಹೋಟೆಲ್‌ಗೆ ಹೋದಾಗ, ಶ್ರೀನಿವಾಸ ನಾಯ್ಡು ಮತ್ತು ರಿಕ್ಕಿ ರೈ ಮುಖಾಮುಖಿ ಆಗಿದ್ದಾರೆ. ಆಗ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಶಿಕ್ಷಣ ಕ್ಷೇತ್ರದ ಪ್ರಗತಿಗೆ ಸರ್ಕಾರ ಆದ್ಯತೆ; ವಿಜಯವಾಣಿ-ದಿಗ್ವಿಜಯ ನ್ಯೂಸ್ ‘ಎಜುಕೇಷನ್ ಎಕ್ಸ್‌ಪೋ’ನಲ್ಲಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 8 =
Remember me
