ತುಮಕೂರು:ಚಾಕು ಹಿಡಿದ ವಿದೇಶಿ ಮಹಿಳೆಯರು ಪೊಲೀಸರ ಮೇಲೇ ಹಲ್ಲೆ ಮಾಡಿ ಹತ್ಯೆ ಮಾಡಲು ಯತ್ನಿಸಿದ ಪ್ರಕರಣ ನಡೆದಿದೆ. ಈ ಪ್ರಕರಣದಲ್ಲಿ ಸಬ್​ ಇನ್​ಸ್ಪೆಕ್ಟರ್​, ಪೊಲೀಸ್ ಕಾನ್​ಸ್ಟೆಬಲ್ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ತುಮಕೂರಿನ ದಿಬ್ಬೂರಿನಲ್ಲಿರುವ ವಿದೇಶಿ ಪ್ರಜೆಗಳ ನಿರಾಶ್ರಿತ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಸಬ್​ ಇನ್​ಸ್ಪೆಕ್ಟರ್ ಚಂದ್ರಕಲಾ, ಪೊಲೀಸ್ ಕಾನ್​ಸ್ಟೆಬಲ್ ತಾಸೀನಾ ಬಾನು, ನಿರಾಶ್ರಿತರ ಕೇಂದ್ರದ ಚಾಲಕ ಬಸವರಾಜು, ಅಡುಗೆ ಸಹಾಯಕಿ ಲಕ್ಷ್ಮೀ ಗಾಯಗೊಂಡವರು.
ಇದನ್ನೂ ಓದಿ:ಒಂದು ವರ್ಷದ ಅಂತರ.. ಅದೇ ಜಾಗ.. ಒಂದೇ ಥರದಲ್ಲಿ ಸಂಬಂಧಿಕರಿಬ್ಬರ ಸಾವು!
ಪಾಸ್​ಪೋರ್ಟ್ ಅವಧಿ ಮುಗಿದವರನ್ನು ಇರಿಸುವ ನಿರಾಶ್ರಿತರ ಕೇಂದ್ರದಲ್ಲಿದ್ದ ನಾಲ್ವರು ಉಗಾಂಡ ದೇಶದ ಮಹಿಳೆಯರು ಈ ಕೃತ್ಯವೆಸಗಿದ್ದಾರೆ. ನಿರಾಶ್ರಿತರ ಕೇಂದ್ರಕ್ಕೆ ಗ್ಯಾಸ್ ಸಿಲಿಂಡರ್ ನೀಡಲು ಹೋಗಿದ್ದಾಗ ಇವರನ್ನು ಕೊಠಡಿಯಲ್ಲಿ ಕೂಡಿ ಹಾಕಿದ ಉಗಾಂಡ ಮಹಿಳೆಯರು ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ.
ಇದನ್ನೂ ಓದಿ:ಪ್ರೀತಿಸಿ ಮನೆ ಬಿಟ್ಟು ಹೋಗಿ ಮದ್ವೆಯಾದ ಮಗಳು; ನೊಂದು ಪ್ರಾಣ ಕಳ್ಕೊಂಡ ತಾಯಿ!
ಈ ನಿರಾಶ್ರಿತರ ಕೇಂದ್ರದಲ್ಲಿ 30 ವಿದೇಶಿಗರು ಇದ್ದು, ಗ್ಯಾಸ್ ಸಿಲಿಂಡರ್ ನೀಡಲು ಹೋದಾಗ ನಾಲ್ವರು ಮಹಿಳೆಯರು ಇವರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಚಾಕುವಿನಿಂದ ಹಲ್ಲೆ ಮಾಡಿ ಹತ್ಯೆಗೆ ಯತ್ನಿಸಿದ್ದಾರೆ. ಪೊಲೀಸರು ಸೇರಿ ನಾಲ್ವರಿಗೂ ಕೈಕಾಲುಗಳಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬಸದಿಯಿಂದ ಇದ್ದಕ್ಕಿದ್ದಂತೆ ಜೈನಮುನಿ ನಾಪತ್ತೆ; ಭಕ್ತರಲ್ಲಿ ಆತಂಕ

ಇದು ಸಿಂಗಲ್​ ಆಗಿರುವವರಿಂದ ಮಿಂಗಲ್ ಆಗಲು ಗ್ರೀನ್​ ಸಿಗ್ನಲ್; ಪೇರಿಂಗ್ ಆಗಲೆಂದೇ ಪಿಯರ್ ರಿಂಗ್, ಏನಿದು ಹೊಸ ಟ್ರೆಂಡ್?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 + 12 =
Remember me
