ಬೆಂಗಳೂರು:ಸಿಕ್ಕಿ ಹಾಕಿಕೊಳ್ಳುತ್ತೇವೆ ಎನಿಸಿದಾಗ ಕಳ್ಳರು ಹಿಡಿಯಲು ಬಂದವರ ಮೇಲೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗುವುದು ಒಂದು ಸಾಮಾನ್ಯ ತಂತ್ರಗಾರಿಕೆ. ಇದೀಗ ಪೊಲೀಸ್ ಸಬ್​ ಇನ್​ಸ್ಪೆಕ್ಟರ್​ ಒಬ್ಬರ ಮೇಲೆಯೇ ಕಳ್ಳನೊಬ್ಬ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಸದ್ಯಕ್ಕೆ ಪರಾರಿಯಾಗಿದ್ದಾನೆ. ಬೆಂಗಳೂರಿನಲ್ಲಿ ಮಹದೇವಪುರದ ಸಬ್​ ಇನ್​ಸ್ಪೆಕ್ಟರ್​ ಹರಿನಾಥ್ ಅವರ ಬಲಗೈಗೆ ಗಾಯವಾಗಿದೆ. ಕೋಲಾರ ಜಿಲ್ಲೆಯ ಕೆಜಿಎಫ್​ನ ಸೂಸೈಪಾಳ್ಯದಲ್ಲಿ ನಿನ್ನೆ ರಾತ್ರಿ ಈ ಅಪರಾಧ ಪ್ರಕರಣ ಜರುಗಿದೆ. ಮನೆಗಳ್ಳತನ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯನ್ನು ಬಂಧಿಸಲು ಎಸ್​ಐ ಅಲ್ಲಿಗೆ ತೆರಳಿದ್ದರು.
ಆರೋಪಿ ಕೆಜಿಎಫ್​ನ ಸೂಸೈಪಾಳ್ಯದ ಅಪ್ಪೆನ್​ ಎಂಬಾತನನ್ನು ಪತ್ತೆ ಹಚ್ಚಿ ಬಂಧಿಸಿಕೊಂಡು ಬರಲು ಎಸ್​​ಐ ಹರಿನಾಥ್ ಬಾಬು ಅವರು ಮೂವರು ಸಿಬ್ಬಂದಿ ಜತೆ ನಿನ್ನೆ ತಡರಾತ್ರಿ ಕೆಜಿಎಫ್​ಗೆ ತೆರಳಿದ್ದರು. ಈ ವೇಳೆ ಆರೋಪಿ ಚಾಕುವಿನಿಂದ ಎಸ್​​ಐ ಮೇಲೆ ಹಲ್ಲೆ ಮಾಡಿದ್ದು. ಅವರ ಕೈಗೆ ಗಾಯವಾಗಿದೆ. ಆಗ ಎಸ್​ಐ ಫೈರಿಂಗ್ ಮಾಡಿದ್ದರೂ ಆರೋಪಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಮಹದೇವಪುರ ಠಾಣೆಯಿಂದ ತಡರಾತ್ರಿ ಆರೋಪಿಯನ್ನು ಬಂಧಿಸಲು ಸೂಸೈಪಾಳ್ಯಂಗೆ ಭೇಟಿ ನೀಡುವ ಮುನ್ನ ಸ್ಥಳೀಯ ಕೆಜಿಎಫ್ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ ಎನ್ನಲಾಗುತ್ತಿದೆ. ಆರೋಪಿ ಅಪ್ಪೆನ್ ವಿರುದ್ದ ಕೆಜಿಎಫ್ ಸೇರಿ ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ಇರುವುದು ತಿಳಿದುಬಂದಿದೆ. ಘಟನೆ ಸಂಬಂಧ ಕೆಜಿಎಫ್‍ನ ಅಂಡರ್​ಸನ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಸೆಕ್ಸ್ ವಿಡಿಯೋ ಬಹಿರಂಗ: ಜಾರಕಿಹೊಳಿ ಪರ ವಾಲ್ಮೀಕಿ ಪೀಠದ ಸ್ವಾಮೀಜಿ ಬ್ಯಾಟಿಂಗ್!

ಬ್ಯಾಂಕ್​ ವ್ಯವಹಾರದ ಬಗ್ಗೆ ಅನುಮಾನ; ಪಿಗ್ಮಿ ಹಣ ಹಿಂದಿರುಗಿಸುವಂತೆ ಮುಗಿಬಿದ್ದ ಖಾತೆದಾರರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + twenty =
Remember me
