ಬಾಗಲಕೋಟೆ:ಹಿಜಾಬ್​ ಧರಿಸಿ ತರಗತಿಗೆ ಹಾಜರಾಗುವ ಕುರಿತು ಭುಗಿಲೆದ್ದಿರುವ ವಿವಾದ-ಸಂಘರ್ಷ ಇದೀಗ ಹಿಂಸಾತ್ಮಕ ರೂಪಕ್ಕೆ ತಿರುಗಲಾರಂಭಿಸಿದೆ. ಹಿಜಾಬ್ ಸಂಬಂಧಿಸಿದ ಗಲಾಟೆ ಸಂದರ್ಭದಲ್ಲಿ ಶಿಕ್ಷಕರೊಬ್ಬರ ಮೇಲೆಯೇ ಕಬ್ಬಿಣದ ರಾಡ್​ನಿಂದ ಹಲ್ಲೆ ಮಾಡಲಾಗಿದೆ.
ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜ್​ನಲ್ಲಿ ನಡೆದ ಹಿಜಾಬ್ ಸಂಘರ್ಷದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ಬನಹಟ್ಟಿ ಖಾಸಗಿ ಶಾಲೆಯ ಶಿಕ್ಷಕ ಮಂಜುನಾಥ ನಾಯಕ (30) ಹಲ್ಲೆಗೊಳಗಾಗಿದ್ದಾರೆ.
ಹಿಜಾಬ್ ವಿವಾದ ತಾರಕಕ್ಕೆ ಏರಿದ್ದರಿಂದ ಪ್ರಕ್ಷುಬ್ಧ ಸ್ಥಿತಿಯಲ್ಲಿ ಇರುವ ಬನಹಟ್ಟಿ ನಗರದಲ್ಲಿ ಇಂದು ಕಲ್ಲು ತೂರಾಟ ನಡೆದಿದ್ದು, ಪೊಲೀಸರ ಲಾಠಿ ಪ್ರಹಾರದ ಬಳಿಕ ಗಲಾಟೆ ನಿಯಂತ್ರಣಕ್ಕೆ ಬಂದಿತ್ತು. ಇನ್ನೇನು ಪರಿಸ್ಥಿತಿ ತಿಳಿಯಾಯಿತು ಎನ್ನುವಾಗಲೇ ರಸ್ತೆ ದಾಟುತ್ತಿದ್ದ ಮಂಜುನಾಥ ನಾಯಕರ ಮೇಲೆ ಕಿಡಿಗೇಡಿಗಳು ರಾಡ್​ನಿಂದ ಹಲ್ಲೆ ಮಾಡಿದ್ದಾರೆ. ಅವರನ್ನು ತಕ್ಷಣ ಬನಹಟ್ಟಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಹಿಜಾಬ್​-ಕೇಸರಿ ಸಂಘರ್ಷದ ನಡುವೆ ಇದೇನಿದು ಮತ್ತೊಂದು?!
ಮದರಸಗೆ ಬರುತ್ತಿದ್ದ ಬಾಲಕಿಯರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಉಸ್ತಾದ್​ನ ಬಂಧನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
