ಯಾದಗಿರಿ:ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ಇಂದು ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳ ಸದ್ದು ಮೊಳಗಿದ್ದು, ಜಿಲ್ಲಾ ಪಂಚಾಯಿತಿಯ ವಿರೋಧ ಪಕ್ಷದ ನಾಯಕ ಮರಿಲಿಂಗಪ್ಪ ಕರ್ನಾಳ್ ಮೇಲೆ ಭೀಕರ ಹಲ್ಲೆ ಮಾಡಲಾಗಿದೆ.
ಸುರಪುರ ತಾಲೂಕಿನ ಖಾನಾಪುರ ಎಸ್.ಎಚ್. ಕ್ಷೇತ್ರದ ಜಿಪಂ ಸದಸ್ಯರಾದ ಮರಿಲಿಂಗಪ್ಪ ಅವರು ಶಾಸಕ ರಾಜೂಗೌಡರ ಪರಮಾಪ್ತ. ಇಂದು ಬೆಳಗ್ಗೆ ಏಕಾಏಕಿ ದಾಳಿ ನಡೆಸಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮರಿಲಿಂಗಪ್ಪರನ್ನು ಮನಸೋಇಚ್ಛೆ ಕೊಚ್ಚಿ ಬಿಸಾಡಿ ಹೋಗಿದ್ದಾರೆ.ಇದನ್ನೂ ಓದಿರಿVIDEO| ಕರೊನಾಗೆ ಹೆದರಬೇಡಿ: ಪೊಲೀಸರಿಗೆ ಯೋಗ ಟೀಚರ್ ಆಗಿ ಧೈರ್ಯ ತುಂಬಿದ ಅಲೋಕ್​ ಕುಮಾರ್​!
ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಮರಿಲಿಂಗಪ್ಪ ಕರ್ನಾಳ್ ಅವರನ್ನು ಕೂಡಲೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು-ಬದುಕಿನ ನಡುವೆ ನರಳಾಡುತ್ತಿದ್ದಾರೆ. ಜಿಪಂ ಬಿಜೆಪಿ ಸದಸ್ಯ ಮರಿಲಿಂಗಪ್ಪರ ಮೇಲೆ ನಡೆದ ಮಾರಣಾಂತಿಕ ದಾಳಿಗೆ ಗಿರಿನಗರದ ಜನತೆ ಬೆಚ್ಚಿಬಿದ್ದಿದ್ದಾರೆ. ಮಾರಕಸ್ತ್ರವೊಂದನ್ನು ಸ್ಥಳದಲ್ಲೇ ದುಷ್ಕರ್ಮಿಗಳು ಬಿಟ್ಟು ಪರಾರಿಯಾಗಿದ್ದಾರೆ.
ಜೈಲಿಂದ ಬಿಡುಗಡೆಯಾದ ರೌಡಿ ಕೊರಂಗು ಕೃಷ್ಣನನ್ನು ಕರೆದೊಯ್ಯಲು ಬಂದದ್ದು 70 ಕಾರುಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + five =
Remember me
