ಕಲಾಪದ ಅವಧಿಕಡಿತವಾಗಿರುವುದರಿಂದ ಸಮಯದ ಸದುಪಯೋಗಪಡಿಸಿಕೊಳ್ಳಬೇಕೆಂಬ ಸ್ಪೀಕರ್ ಸೂತ್ರಕ್ಕೆ ಆಡಳಿತ ಮತ್ತು ಪ್ರತಿಪಕ್ಷ ಮಣೆ ಹಾಕಿದ್ದು, ಮಂಗಳವಾರ ಬೆಳಗಿನ ಅವಧಿಯು ಗದ್ದಲವಿಲ್ಲದೆ ಸರಾಗವಾಗಿ ನಡೆಯಿತು. ಕೆಣಕುವ, ಕುಟುಕುವ ಪ್ರತಿಪಕ್ಷದ ಪ್ರಯತ್ನಕ್ಕೆ ಆಡಳಿತ ಪಕ್ಷದ ಕಡೆಯಿಂದ ಮೌನದುತ್ತರ ಕಾಣಿಸಿತು. ಹಾಗೆಯೇ ದಿನದ ಆರಂಭದಲ್ಲಿ ಸರ್ಕಾರದ ಕಡೆಯಿಂದ ಕಾಗದ ಪತ್ರ ಮಂಡನೆಗೆ ಪ್ರತಿಪಕ್ಷ ಅಡ್ಡಿ ಮಾಡಲಿಲ್ಲ.
ಕರೊನಾ ಖರೀದಿ ಅವ್ಯವಹಾರ ಮತ್ತು ನಿರ್ವಹಣೆ ವಿಫಲತೆ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಂಡಿಸಿದ ನಿಲುವಳಿ ಸೂಚನೆ ಅಂಗೀಕರಿಸಿದ ಸ್ಪೀಕರ್, ನಿಯಮ 69ರ ಅಡಿ ಪ್ರಸ್ತಾವನೆ ಮಂಡನೆಗೆ ಮುನ್ನವೇ ಅವಕಾಶ ನೀಡಿದರು. ಈ ಮೂಲಕ ನಿಯಮ ಬದಲಾವಣೆ ವಿಚಾರದಲ್ಲಿ ಪ್ರತಿಬಾರಿ ನಡೆಯುತ್ತಿದ್ದ ಗುದ್ದಾಟಕ್ಕೆ ತೆರೆ ಎಳೆದರು. ಇನ್ನೂ ಮುಖ್ಯವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷದವರು ಯಾವುದೇ ಟೀಕೆ ಮಾಡಿದರೂ ಮಧ್ಯದಲ್ಲಿ ಪ್ರತಿಕ್ರಿಯೆ ನೀಡದೆ ಆಲಿಸುವಂತೆ ತಮ್ಮ ಪಕ್ಷದ ಸದಸ್ಯರಿಗೆ ಸೂಚಿಸಿದರು. ಹೀಗಾಗಿ ಇಡೀ ಅರ್ಧ ದಿನದ ಕಲಾಪದಲ್ಲಿ ಎರಡು ಬಾರಿ ಮಾತ್ರ ಆಡಳಿತ ಪಕ್ಷದಿಂದ ಪ್ರತಿಕ್ರಿಯೆ ಬಂತು. ಪ್ರತಿಪಕ್ಷ ನಾಯಕರು ಮಾತನಾಡುವಾಗ ಎದ್ದು ನಿಲ್ಲುತ್ತಿದ್ದ ಸಚಿವರನ್ನು ಸುಮ್ಮನೆ ಕೂರುವಂತೆ ಸಿಎಂ ತಾಕೀತು ಮಾಡಿದ್ದು ಸಹ ಕಾಣಿಸಿತು. ಅನೇಕ ಸಂದರ್ಭದಲ್ಲಿ ಉತ್ತರ ನೀಡಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಹತಹಿಸುತ್ತಿದ್ದುದೂ ಕಾಣಿಸಿತು. ಆದರೆ, ಸಿಎಂ ಪದೇಪದೆ ಹಿಂದಿರುಗಿ ನೋಡಿ ಎಲ್ಲರನ್ನೂ ಗಮನಿಸುತ್ತಿದ್ದುದರಿಂದ ಎಲ್ಲರೂ ಗಪ್​ಚುಪ್ ಆಗಿ ಕುಳಿತಿದ್ದರು.
ಬೆಳಗ್ಗೆ 10ಕ್ಕೆ ಕಲಾಪ ಆರಂಭ
ದಿನದ ಕಲಾಪ ಆರಂಭವಾಗುತ್ತಿದ್ದಂತೆ ಮಾತನಾಡಿದ ಸ್ಪೀಕರ್, ಸೋಮವಾರ ನಡೆದ ಕಲಾಪ ಸಲಹಾ ಸಮಿತಿ ಸಭೆ ಮುಖ್ಯಾಂಶವನ್ನು ಗಮನಕ್ಕೆ ತಂದರು. ಶನಿವಾರದವರೆಗೆ ಕಲಾಪ ನಡೆಯಲಿದ್ದು, ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಹಾಗೂ 3ರಿಂದ ಸಂಜೆ 6.30ರವರೆಗೆ ಕಲಾಪ ನಡೆಸಲು ನಿಶ್ಚಯಿಸಲಾಗಿದೆ. ಎಲ್ಲರೂ ಒಪ್ಪಿದ್ದು ಸಮಯದ ಸದುಪಯೋಗವಾಗಬೇಕು ಎಂದರು. ಹಾಗೆಯೇ, ಅಧಿವೇಶನ ಸಂದರ್ಭ ಭೇಟಿಗೆ ಬರುವ ನಿಯೋಗಗಳನ್ನು ಸಚಿವರು ಶಾಸಕರ ಭವನದಲ್ಲಿ ಅಥವಾ ಅವರ ನಿವಾಸದಲ್ಲಿ ಭೇಟಿ ಮಾಡಲು ವ್ಯವಸ್ಥೆ ಮಾಡಬೇಕು, ಅವರೆಲ್ಲ ವಿಧಾನಸೌಧಕ್ಕೆ ಬಾರದಂತೆ ನಿಯಂತ್ರಿಸುವ ಜವಾಬ್ದಾರಿ ನಿಮ್ಮದು ಎಂದು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
