ಬೆಂಗಳೂರು: ಶಾಸಕರು ತಮ್ಮ ಕ್ಷೇತ್ರಕ್ಕೆ ಅನುದಾನ ಕಡಿತ ಮಾಡಲಾಗಿದೆ ಎಂದು ಅಬ್ಬರಿಸುತ್ತಿದ್ದಾಗಲೇ ಆಡಳಿತ ಪಕ್ಷದ ಮುಖ್ಯ ಸಚೇತಕ ಸುನೀಲ್​ಕುಮಾರ್, ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರಕ್ಕೆ ಈ ಸರ್ಕಾರ ಬಿಡುಗಡೆ ಮಾಡಿದ ಮೊತ್ತವನ್ನು ಪ್ರಸ್ತಾಪಿಸಿದರು.
ನಮ್ಮ ಸರ್ಕಾರ ಯಾರಿಗೂ ತಾರತಮ್ಯ ಮಾಡಿಲ್ಲ, ಬೇಕಿದ್ದರೆ ಸಿದ್ದರಾಮಯ್ಯ ಕ್ಷೇತ್ರವನ್ನೇ ನೋಡಿ, ಬಾದಾಮಿ ಕ್ಷೇತ್ರಕ್ಕೆ 600 ಕೋಟಿ ರೂ. ಕೊಟ್ಟಿದ್ದೇವೆ ಎಂದು ಸುನೀಲ್ ಹೇಳುತ್ತಿದ್ದಂತೆ ಸಿದ್ದರಾಮಯ್ಯ ಸಿಟ್ಟಿಗೆದ್ದರು.
ಹೌದ್ರಿ 600 ಕೋಟಿ ರೂ. ತಗೊಂಡಿದ್ದೇನೆ, ನಾನು ಶಾಸಕನಿದ್ದೇನೆ, ಅನುದಾನ ಪಡೆಯಲು ಅರ್ಹನಿದ್ದೇನೆ. ಅನುದಾನ ಪಡೆಯುವುದು ನಮ್ಮ ಕ್ಷೇತ್ರದ ಜನರ ಹಕ್ಕು ಎಂದರು. ನಿಮ್ಮ ನಾಯಕರು 600 ಕೋಟಿ ರೂ. ಅನುದಾನ ಪಡೆದಿದ್ದಾರೆಂದು ಕಾಂಗ್ರೆಸ್ ಶಾಸಕರನ್ನು ಗುರಿಯಾಗಿಸಿ ಸುನೀಲ್ ಹೇಳುತ್ತಿದ್ದಂತೆ ಇನ್ನಷ್ಟು ಕೆರಳಿದ ಸಿದ್ದರಾಮಯ್ಯ, ನಿಮಗೆ ಇಷ್ಟವಿಲ್ಲ ಎಂದರೆ 600 ಕೋಟಿ ವಾಪಸ್ ತಗೊಳ್ಳಿ ಎಂದು ಪದೇಪದೆ ಹೇಳಿ ಸಿಟ್ಟು ಪ್ರದರ್ಶಿಸಿದರು.
ನನ್ನ ಒಬ್ಬನ ಕ್ಷೇತ್ರಕ್ಕೆ ಕೊಟ್ಟರೆ ಸಾಕೇ, ಬೇರೆ ಶಾಸಕರಿಗೆ ಕೊಡಬೇಡವೇ? ಬೇರೆ ಕ್ಷೇತ್ರಗಳಿಗೂ ಅನುದಾನ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು. ಆಗ ಸರ್ಕಾರದ ಕಡೆಯಿಂದ ಯಾವುದೇ ಉತ್ತರ ಬರಲಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 7 =
Remember me
