ಬೆಂಗಳೂರು: ಜನರಿಂದ ಠೇವಣಿ ಸಂಗ್ರಹಿಸಿ ವಂಚನೆ ನಡೆಸಿರುವ ಮೂರು ಕಂಪನಿಗಳ ಆಸ್ತಿಯನ್ನು ಜಪ್ತಿ ಮಾಡಿ ಠೇವಣಿದಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಹಂತಹಂತವಾದ ಹೆಜ್ಜೆ ಇಟ್ಟಿದೆ.ಪಿಎಸಿಎಲ್ ಇಂಡಿಯಾ ಲಿಮಿಟೆಡ್ ಕಂಪನಿ (ಪರ್ಲ್ಸ್ ಆಗ್ರೋಟೆಕ್ ಕಾರ್ಪೊರೇಷನ್) ಮೋಸದ ವ್ಯವಹಾರದಲ್ಲಿ ತೊಡಗಿಕೊಂಡಿದ್ದು, ತನ್ನ ಠೇವಣಿದಾರರಿಗೆ ಠೇವಣಿ ಹಿಂದಿರುಗಿಸುವಲ್ಲಿ ವಿಲವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆದ್ದರಿಂದ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದರರ ಹಿತಾಸಕ್ತಿ ಸಂರಕ್ಷಣಾ ಅಧಿನಿಯಮದ ಅಡಿಯಲ್ಲಿ ನಿರ್ಧಿಷ್ಟಪಡಿಸಿದ ಉಪ ಬಂಧಗಳ ಪ್ರಕಾರ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅಧಿಸೂಚನೆಯಲ್ಲಿದೆ.ಈ ಹಣಕಾಸು ಸಂಸ್ಥೆಗೆ ಸೇರಿದ ಸ್ವತ್ತುಗಳು ವಿವಿಧ ಜಿಲ್ಲೆಗಳಲ್ಲಿ ಹರಡಿಕೊಂಡಿರಬಹುದು ಮತ್ತು ಠೇವಣಿದಾರರು ರಾಜ್ಯಾದ್ಯಂತ ವಾಸಿಸುತ್ತಿದ್ದಾರೆಂದು ಭಾವಿಸಿ, ಎಲ್ಲಾ ಠೇವಣಿದಾರರಿಂದ ಕ್ಲೇಮುಗಳನ್ನು ಆಹ್ವಾನಿಸುವ ಸಲುವಾಗಿ ಸಕ್ಷಮ ಪ್ರಾಧಿಕಾರವನ್ನು ಅಧಿಕೃತಗೊಳಿಸಲಾಗುತ್ತಿದೆ. ಐಎಂಎ ಸಕ್ಷಮ ಪ್ರಾಧಿಕಾರದ ವಿಶೇಷ ಅಧಿಕಾರಿಯನ್ನೇ ಪಿಎಸಿಎಸ್ ಸಕ್ಷಮ ಪ್ರಾಧಿಕಾರವಾಗಿ ನೇಮಕ ಮಾಡಲಾಗಿದೆ.ಅದೇ ರೀತಿ ಇಂಜಾಸ್ ಇಂಟರ್‌ನ್ಯಾಷನಲ್ ಅಂಡ್ ಅಸೋಸಿಯೇಟೆಡ್ ಗ್ರೂಪ್ ಆ್ ಕಂಪನೀಸ್ ಠೇವಣಿದಾರರಿಂದ ಗುಟ್ಟಾಗಿ ಹಾಗೂ ಕಾನೂನು ಬಾಹಿರವಾಗಿ ಠೇವಣಿಗಳನ್ನು ಅಥವಾ ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಮೋಸದ ವ್ಯವಗಾರ ತೊಗಡಿಸುವುದು ಹಾಗೂ ಅವಧಿ ಮುಗಿದ ಮೇಲೆ ಠೇವಣಿದಾರರಿಗೆ ಬಡ್ಡಿ ಹಾಗೂ ಇತರೆ ಖಾತರಿ ಪ್ರಯೋಜನ ನೀಡದೇ ಇರುವುದು ಸಿಐಡಿ ತನಿಖೆಯಿಂದ ಬಯಲಾಗಿದೆ.ಹಾಗೆಯೇ ಇಂಜಾಸ್ ಇಂಟರ್‌ ನ್ಯಾಷನಲ್ ಹಾಗೂ ಅವರ ಸಹವರ್ತಿಗಳು ಠೇವಣಿದಾರರಿಂದ ಸಂಗ್ರಹಿಸಿದ ಹಣದಿಂದ ಜಮೀನು, ಚರ ಹಾಗೂ ಸ್ಥಿರಾಸ್ತಿ ಅರ್ಜಿಸಿರುವುದು ಕಂಡುಬಂದಿದೆ. ಈ ಮೂಲಕ ಠೇವಣಿಯನ್ನು ಯಾವ ಉದ್ದೇಶಕ್ಕೆ ಸಂಗ್ರಹಿಸಲಾಗಿತ್ತೋ ಆ ಉದ್ದೇಶಕ್ಕೆ ಬಳಸದೇ ಬೇರೆ ಉದ್ದೇಶಕ್ಕೆ ಗಮನಕ್ಕೆ ಬಂದಿದೆ.ಮುಗ್ಧ ಜನರನ್ನು ವಂಚಿಸುವ ಉದ್ದೇಶದಿಂದ ಠೇವಣಿದಾರರ ಹಿತ ಕಾಪಾಡುವುದು ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಹಣಕಾಸು ಸಂಸ್ಥೆಯ ಹಣ ಅಥವಾ ಸ್ವತ್ತು, ಸಂಸ್ಥೆಯ ಪಾಲುದಾರರು, ನಿರ್ದೇಶಕರು, ವ್ಯವಸಾಪಕರು, ಸದಸ್ಯರ ಅಥವಾ ಇತರೆ ಯಾವುದೇ ವ್ಯಕ್ತಿಗಳ ಆಸ್ತಿಗೆ ಸಂಬಂಧಪಟ್ಟಿದ್ದರೆ ಅದನ್ನು ಜಪ್ತಿ ಮಾಡಲಿಕೊಳ್ಳಲು ನಿರ್ಧರಿಸಲಾಗಿದೆ.ಅಕ್ಷಯ ಗೋಲ್ಡ್ ಾರ್ಮ್ ಅಂಡ್ ವಿಲ್ಲಾಸ್ ಇಂಡಿಯಾ ಗ್ರೂಪ್ ಆ್ ಕಂಪನೀಸ್ ಠೇವಣಿದಾರರಿಂದ ಸಂಗ್ರಹಿಸಿದ ಹಣದಿಂದ ಜಮೀನು, ಚರ, ಸ್ಥಿರಾಸ್ತಿ ಅರ್ಜಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಮೂಲಕ ಅನ್ಯ ಉದ್ದೇಶಕ್ಕೆ ಬೇರೆ ಕಡೆ ವರ್ಗಾಯಿಸಿರುವುದು ಸ್ಪಷ್ಟವಾಗಿ ಗೋಚರಿಸಿದೆ.ಹೀಗಾಗಿ ಈ ಸಂಸ್ಥೆ ಹೆಸರಿನಲ್ಲಿರುವ ಅಥವಾ ಸಂಬಂಧಪಟ್ಟ ಇತರೆ ವ್ಯಕ್ತಿಗಳ ಹೆಸರಿನಲ್ಲಿ ಅರ್ಜಿಸಿದ ಚರ ಸ್ವತ್ತುಗಳನ್ನು ಜಪ್ತಿಮಾಡಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + fourteen =
Remember me
