ಬೆಂಗಳೂರು:ಜನರ ನಾಡಿಮಿಡಿತ ಅರಿತು, ಕೈಗೊಂಡ ಸಣ್ಣದೊಂದು ಉಪಕ್ರಮದಿಂದ ರಾಜ್ಯ ಸರ್ಕಾರದ ಖಜಾನೆಗೆ ಬಂಪರ್ ಆದಾಯ ಹರಿದು ಬರಲಾರಂಭಿಸಿದೆ. ಬುಧವಾರ ಒಂದೇ ದಿನ 26,058 ಸ್ಥಿರಾಸ್ತಿಗಳು ನೋಂದಣಿಯಾಗಿ 331 ಕೋಟಿ ರೂ. ಆದಾಯ ಸಂಗ್ರಹವಾಗಿದ್ದು, ಮುದ್ರಾಂಕ ಮತ್ತು ನೋಂದಣಿ ಇಲಾಖೆ ಇತಿಹಾಸ ಹೊಸ ದಾಖಲೆ ಸೃಷ್ಟಿಯಾಗಿದೆ.
ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಹೆಚ್ಚಿಸಲು ಸರ್ಕಾರ ಈಗಾಗಲೇ ನಿರ್ಧರಿಸಿ, ಅ.1ರಿಂದ ಜಾರಿಗೆ ತರಲಾಗುವುದು ಎಂದು ಪ್ರಕಟಿಸಿದೆ. ಇದರಿಂದಾಗಿ ಸೆ.30ರೊಳಗೆ ಆಸ್ತಿ ಮಾಡಿಸುವವರ ಸಂಖ್ಯೆ ಹೆಚ್ಚಲಿದೆ ಎಂದು ಸರ್ಕಾರ ಅಂದಾಜಿಸಿತ್ತು.
ಈ ಹಿನ್ನೆಲೆಯಲ್ಲಿ ಉಪ ನೋಂದಣಾಧಿಕಾರಿ ಕಚೇರಿಗಳ ಅವಧಿಯನ್ನು ಸೆ.30ರವರೆಗೆ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ವಿಸ್ತರಿಸಿದೆ. ಜತೆಗೆ ಜನರ ಆಕ್ರೋಶಕ್ಕೆ ಗುರಿಯಾಗಿದ್ದ ಕಾವೇರಿ ತಂತ್ರಾಂಶ-2 ಸಮಸ್ಯೆ ಮುಕ್ತಗೊಳಿಸಿದೆ.
ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಬಯಸಿದ ದಿನ, ಸಮಯಕ್ಕೆ ನೋಂದಣಿ ಅವಕಾಶ ಜನರಿಗೆ ಲಭಿಸಿದ್ದು, ಸರ್ಕಾರಕ್ಕೆ ಾಯಿದೆ ತಂದುಕೊಟ್ಟಿದೆ. ಅ.1ರಿಂದ ಮಾರ್ಗಸೂಚಿ ದರ ಹೆಚ್ಚಲಿರುವುದು ಆಸ್ತಿಗಳ ನೋಂದಣಿ ಪ್ರಮಾಣ ಏರಿಕೆಯಾಗಿದ್ದಕ್ಕೆ ಮತ್ತೊಂದು ಕಾರಣ.
ಆಸ್ತಿ ನೋಂದಣಿ ಮತ್ತು ದಸ್ತಾವೇಜು ಪ್ರಕ್ರಿಯೆ ಬಿರುಸಿನಿಂದಾಗಿ ಮುದ್ರಾಂಕ ಮತ್ತು ನೋಂದಣಿ ಇಲಾಖೆಗೆ ಶುಲ್ಕ ರೂಪದಲ್ಲಿ ಭರ್ಜರಿ ಆದಾಯ ಸಂಗ್ರಹವಾಗುತ್ತಿದೆ.
ಕಳೆದ ಸೋಮವಾರ 15,936 ನೋಂದಣಿ ದಸ್ತಾವೇಜು ಪ್ರಕ್ರಿಯೆ ನಡೆದು 158.28 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಸೆ.22ರಂದು 12,955 ಆಸ್ತಿ ನೋಂದಣಿ, ದಸ್ತಾವೇಜು ಪ್ರಕ್ರಿಯೆಯಿಂದ 130.87 ಕೋ. ರೂ. ಸೆ.25ರಂದು 158.28 ಕೋ.ರೂ. ಆದಾಯ ಸರ್ಕಾರದ ಬೊಕ್ಕಸಕ್ಕೆ ಸೇರಿದೆ.
ಕಾವೇರಿ ತಂತ್ರಾಂಶ-2 ಆಸ್ತಿದಾರರಿಗೆ ವರದಾನವಾಗಿದೆ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಬಯಸಿದ ದಿನ ಸಮಯಕ್ಕೆ ಆಸ್ತಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆನ್‌ಲೈನ್ ಶುಲ್ಕ ಪಾವತಿಗೆ ವ್ಯವಸ್ಥೆಯನ್ನು ಈ ತಂತ್ರಾಂಶದಲ್ಲಿ ಅಳವಡಿಸಿದ್ದು, ರಾಜ್ಯದ 256 ಉಪ ನೋಂದಣಿ ಕಚೇರಿಗಳಲ್ಲಿ ಜೂ.25ರಂದು ಪೂರ್ಣ ಪ್ರಮಾಣದಲ್ಲಿ ಸುಧಾರಿತ ತಂತ್ರಾಂಶದಡಿಯೇ ಈ ಪ್ರಕ್ರಿಯೆ ನಡೆದಿದೆ.
ತಂತ್ರಾಂಶದ ಗರಿಷ್ಠ ಕಾರ್ಯಕ್ಷಮತೆ, ಮಧ್ಯವರ್ತಿಗಳ ಹಾವಳಿ ಮುಕ್ತ, ಸರಳ ಮತ್ತು ಸುಲಭ ಸೇವೆ ಲಭ್ಯತೆ, ಹಳೆಯ ಮಾರ್ಗಸೂಚಿ ದರದಲ್ಲಿ ಆಸ್ತಿ ನೋಂದಾಯಿಸಿ ಹೆಚ್ಚಿನ ಶುಲ್ಕದ ಇಳಿಸಿಕೊಳ್ಳುವ ಜನರ ಅಪೇಕ್ಷೆಯು ಈ ಲಿತಾಂಶ ತಂದುಕೊಟ್ಟಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − five =
Remember me
