ಬೆಂಗಳೂರು:ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗಲು ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಹೆಚ್ಚಿನ ನೆರವು ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಚಾನಲ್​ವತಿಯಿಂದ ನಡೆದ ಪೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 17 ಸಾವಿರಕ್ಕೂ ಹೆಚ್ಚು ಕಲಾವಿದರಿದ್ದು, ಬಹಳಷ್ಟು ಕಲಾವಿದರು ಸಂಕಷ್ಟದಲ್ಲಿರುವ ಬಗ್ಗೆ ಚರ್ಚೆ ಮಾಡಲಾಗಿದೆ. ತುರ್ತು ನೆರವು ಬೇಕಿದ್ದವರಿಗೆ ಸ್ಪಂದಿಸಲಾಗಿದೆ ಎಂದರು.
ಅಕಾಡೆಮಿಗಳ ಮೂಲಕ ಒಂದು ಸಾವಿರ ಫುಡ್ ಕಿಟ್ ಕೊಡುವ ವ್ಯವಸ್ಥೆ ಮಾಡಲಾಗಿದೆ. ಸ್ವಯಂ ಸೇವಾ ಸಂಸ್ಥೆಗಳ ಮೂಲಕವೂ ಅವರಿಗೆ ದವಸ ಧಾನ್ಯ ನೆರವು ಕೊಡಿಸಲಾಗುತ್ತಿದೆ ಎಂದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗಾಭರಣ, ರಂಗಕರ್ವಿು ಶ್ರೀನಿವಾಸ ಜಿ ಕಪ್ಪಣ್ಣ, ತಿಮ್ಮೇಗೌಡ ಸೇರಿದಂತೆ ಹಲವರ ಜೊತೆಗೆ ಸಭೆ ನಡೆಸಿ ಸಲಹೆ ಪಡೆಯಲಾಗಿದೆ ಎಂದರು.
ಪ್ರವಾಸೋದ್ಯಮಕ್ಕೆ ಯೋಜನೆ:ಜಾಗತಿಕವಾಗಿ 14 ಕೋಟಿ ಜನರು ಪ್ರವಾಸೋದ್ಯಮ ಅವಲಂಭಿಸಿದ್ದಾರೆ. ರಾಜ್ಯದಲ್ಲಿ 18 ಲಕ್ಷ ಜನ ಪ್ರವಾಸೋದ್ಯಮ ನಂಬಿ ಬದುಕಿದ್ದಾರೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 35 ಲಕ್ಷ ಜನ ಉದ್ಯಮ ಅವಲಂಭಿಸಿದ್ದಾರೆ. ಲಾಕ್​ಡೌನ್ ಬಳಿಕ ಪ್ರವಾಸೋದ್ಯಮ ಸುಧಾರಣೆಗಾಗಿ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.
ನಷ್ಟದ ಅಂದಾಜು ಮಾಡಿಲ್ಲ:ಪ್ರವಾಸೋದ್ಯಮಕ್ಕೆ ಎಷ್ಟು ನಷ್ಟವಾಗಿದೆ ಎನ್ನುವುದನ್ನು ಅಂದಾಜು ಮಾಡಿಲ್ಲ. ಪ್ರವಾಸಿಗರನ್ನೆ ಅವಲಂಭಿಸಿದ್ದ ಹೋಟೆಲ್, ಗೈಡ್​ಗಳು, ಟ್ರಾವಲ್ಸ್ ಸೇರಿ ಯಾರಿಗೂ ವ್ಯವಹಾರ ಇಲ್ಲ. ಪ್ರವಾಸಿ ಸ್ಥಳಗಳ ಸುತ್ತಮುತ್ತ ನಡೆಯುತ್ತಿದ್ದ ವಹಿವಾಟು ಬಂದ್ ಆಗಿದೆ. ಈ ಬಗ್ಗೆ ಪರಿಶೀಲನೆ ಮಾಡಿ ನಷ್ಟದ ಅಂದಾಜು ಮಾಡಲಾಗುವುದು ಎಂದರು.
ರ್ಪಾರ್ಕಿಂಗ್ ಶುಲ್ಕ ವಿನಾಯಿತಿ:ಕೆಎಸ್​ಟಿಡಿ ಮೂಲಕ ನಿರ್ವಹಣೆಯಾಗುತ್ತಿದ್ದ ಕಾರುಗಳನ್ನು ವಿಮಾನ ನಿಲ್ದಾಣ ಬಳಿಯೇ ಪಾರ್ಕ್ ಮಾಡಿರುವುದಕ್ಕೆ ವಿನಾಯಿತಿ ಕೋರಿದ ಚಾಲಕರ ಪೋನ್ ಮನವಿಗೆ ಸ್ಪಂಧಿಸಿದ ಸಚಿವರು, ವಿಮಾನ ನಿಲ್ದಾಣ ಪುನಾರಂಭವಾಗುವ ತನಕ ರ್ಪಾಂಗ್ ಶುಲ್ಕಕ್ಕೆ ವಿನಾಯಿತಿ ಕೊಡಿಸುವುದಾಗಿ ಭರವಸೆ ನೀಡಿದರು.
ಕಾರ್ವಿುಕರಿಗೆ ಎಲ್ಲ ನೆರವು: ವಿವಿಧ ಉದ್ದಿಮೆಗಳ ಕಾರ್ವಿುಕರಿಗೆ ಸರ್ಕಾರ ಎಲ್ಲ ರೀತಿ ನೆರವು ನೀಡುವ ಭರವಸೆ ನೀಡಿದೆ. ಕೆಲಸದಿಂದ ತೆಗೆಯುವಂತಿಲ್ಲ, ಸಂಬಳ ನೀಡಬೇಕು ಎಂದು ಸೂಚಿಸಿದೆ. ಲಾಕ್​ಡೌನ್ ಬಳಿಕ ಆ ಉದ್ಯಮದ ಸ್ಥಿತಿಗತಿ ನೋಡಿ ಮುಂದಿನ ಕ್ರಮ ತೀರ್ಮಾನ ತೆಗೆದುಕೊಳ್ಳಲಾ ಗುವುದು ಎಂದರು.
-ಠಿ;35 ಸಾವಿರ ಕೋಟಿ ನಷ್ಟ
ನಿಜಾಮುದ್ದೀನ್ ತಬ್ಲಿಘಿ ಮತ್ತು ನಂಜನೂಡಿನ ಜ್ಯುಬಿಲಿಯಂಟ್ ಪ್ರಕರಣಗಳು ಇಲ್ಲದೆ ಹೋಗಿದ್ದರೆ, ರಾಜ್ಯದಲ್ಲಿ ಇನ್ನು ಸುಸ್ಥಿರ ವಾತಾವರಣ ಇರುತ್ತಿತ್ತು. ದೇಶದಾದ್ಯಂತ ತಬ್ಲಿಘಿಗಳಿಂದಲೇ ಸೋಂಕಿತರು ಹೆಚ್ಚಾಗಿದ್ದು. ಲಾಕ್​ಡೌನ್​ನಿಂದಾಗಿ ಪ್ರತಿ ನಿತ್ಯ 35 ಸಾವಿರ ಕೋಟಿ ದೇಶಕ್ಕೆ ನಷ್ಟವಾಗುತ್ತಿದೆ ಎಂದರು. ಕರೊನಾ ವಿಶೇಷ ಸಂದರ್ಭದಲ್ಲಿ ಎಲ್ಲರೂ ಸರ್ಕಾರಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದರು.
ಮೊಸಳೆ ದವಡೆಗೆ ಸಿಲುಕಿದ್ದ ಮಗನನ್ನು ರಕ್ಷಿಸಲು ಪ್ರಾಣ ಪಣಕ್ಕಿಟ್ಟು ಕಾದಾಡಿದ ತಾಯಿ: ಮುಂದೇನಾಯ್ತು ಗೊತ್ತಾ ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
