ಬೆಂಗಳೂರು:ವೇದ, ವೇದಾಂತ ವಿದ್ವಾಂಸರಾದ ಜ್ಯೋತಿಷಿ ಡಾ.ಪ್ರಸನ್ನಾಚಾರ್ಯ ಎಸ್.ಕಟ್ಟಿಯವರಿಗೆ ಜ್ಯೋತಿಷ್ಯ ಮಹಾಚಾರ್ಯ ಪ್ರಶಸ್ತಿ ನೀಡಲಾಯಿತು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಮೈಸೂರಿನ ಮಾಯಕಾರ ಗುರುಕುಲವು ಗವಿಪುರಂನ ಉದಯಭಾನು ಕಲಾ ಸಂಘದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
109ನೇ ರಾಷ್ಟ್ರೀಯ ಜ್ಯೋತಿಷ್ಯ ಸಮಾವೇಶದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಡಾ.ಪ್ರಸನ್ನಾಚಾರ್ಯರು ಮಂಡಿಸಿದ್ದ ‘ಜಾತಕದಲ್ಲಿ ಸಪ್ತಮಭಾವ ಚಿಂತನೆ’ ವಿಷಯಕ್ಕೆ ರಾಷ್ಟ್ರಮಟ್ಟದ ಜ್ಯೋತಿಷ್ಯ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಜ್ಯೋತಿಷ್ಯ ಮಹಾಚಾರ್ಯ ಮತ್ತು ಅತೀಂದ್ರಿಯ ವಿಜ್ಞಾನದ ವಿಶೇಷಜ್ಞ ಎಂಬ ಬಿರುದು ನೀಡಿ ಸತ್ಕರಿಸಿದರು.
ಮೂಲತಃ ಗದಗ ಜಿಲ್ಲೆಯವರಾದ ಕಟ್ಟಿಯವರು, ಬೆಂಗಳೂರಿನ ಉತ್ತರಾಧಿಮಠದ ಶ್ರೀ ಜಯತೀರ್ಥ ವಿದ್ಯಾಪೀಠದಲ್ಲಿ ವೇದ, ವೇದಾಂತ, ವಾಸ್ತು, ಜ್ಯೋತಿಷ್ಯ ಮತ್ತು ಪೌರೋಹಿತ್ಯದಲ್ಲಿ ವ್ಯಾಸಂಗ ಮಾಡಿದ್ದು, ಉತ್ತರ ಭಾರತದ ಹಲವು ವಿದ್ವಾಂಸರ ಬಳಿ ಅಧ್ಯಯನ ನಡೆಸಿದ್ದಾರೆ. ಈವರೆಗೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, ವಿವಿಧ ವಾಹಿನಿಗಳಲ್ಲಿ ಚಿಂತಕರಾಗಿ ಮತ್ತು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುವ ಮೂಲಕ ನಾಡಿಗೆ ಚಿರಪಚಿತರಾಗಿದ್ದಾರೆ.
ಸಮಾರಂಭದಲ್ಲಿ ಮಾಯಕಾರ ಗುರುಕುಲದ ಮುಖ್ಯಸ್ಥ ಡಾ. ವಿದ್ವಾನ್ ಮಧು ದೀಕ್ಷಿತ್, ವಿದ್ವಾನ್ ಗೋಪಾಲಕೃಷ್ಣ ಶರ್ಮಾ, ಡಾ.ಜಯಲಕ್ಷ್ಮಿ ಹೆಚ್.ಕೆ., ಗೋವಿಂದ ವೇದಪ್ರಕಾಶ್ ಶಾಂಡಿಲ್ಯ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
