ಯಾದಗಿರಿ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿರುವ ಕಾಲಜ್ಞಾನಿ ಬಸವಣ್ಣನ ದೇವಸ್ಥಾನದಲ್ಲಿ ಪ್ರತಿ ಬಾರಿಯಂತೆ ಶಿವರಾತ್ರಿ ದಿನ ವಚನದ ನುಡಿ ಮೂಲಕ ಭವಿಷ್ಯ ನುಡಿಯಲಾಗುತ್ತದೆ. ,
ಕಾಲಜ್ಞಾನಿ ಬಸವಣ್ಣನವರ ವಚನಗಳನ್ನೆ ಪ್ರತಿ ವರ್ಷ ಶಿವರಾತ್ರಿ ಹಬ್ಬದ ದಿನ ನುಡಿಯುತ್ತಾರೆ. ಈ ಬಾರಿ ಶಿವರಾತ್ರಿಯಂದು ಭವಿಷ್ಯ ನುಡಿಯಲ್ಲಿ ‘ಶಿವರಾತ್ರಿ ನುಡಿಯಲ್ಲಿ ಪಕ್ಷಾಂತರಿಗಳಿಗೆ ಎಚ್ಚರಿಕೆ. ನುಡಿದಂತೆ ನಡೆಯುವರಿಗೆ ಮತ್ತೆ ಅಧಿಕಾರದ ಗದ್ದುಗೆ’ ಎನ್ನಲಾಗಿದೆ.
ವಚನ ನುಡಿಯಲ್ಲಿ ”ಪುಣ್ಯ ಸ್ತ್ರಿಯಳ ಒಲುಮೆ ಬಣ್ಣ ಭಜನೆ ಅಲ್ಲ. ತನ್ನ ಪುರುಷನೆ ತನಗೆ ಗತಿ ಎಂದು ಇದ್ದರೆ ಮನ್ನಣೆ ಉಂಟು ಶಿವನಲ್ಲಿ” ಎನ್ನಲಾಗಿದೆ.
ಶಿವರಾತ್ರಿ ನುಡಿಯನ್ನು ಹಲವು ಅರ್ಥದಲ್ಲಿ ವಿಶ್ಲೇಷಣೆ ಮಾಡಲಾಗಿದ್ದುಪಕ್ಷಾಂತರ,ಕುದುರೆ ವ್ಯಾಪಾರ ಮಾಡುವ ಪಕ್ಷದವರಿಗೆ ಶಾಸಕರಿಗೆ ಅಧಿಕಾರ ಯೋಗವಿಲ್ಲ. ಬಣ್ಣದ ಮಾತನಾಡುವರಿಗೆ ಈ ಬಾರಿ ಚುನಾವಣೆಯಲ್ಲಿ ಗೆಲುವು ಕಷ್ಟ. ನುಡಿದಂತೆ ನಡೆದುಕೊಳ್ಳುವರು ಜನರ ನಂಬಿಕೆ ಇಟ್ಟುಕೊಂಡವರಿಗೆ ಅಧಿಕಾರ ಗದ್ದುಗೆ ಎಂದು ಹೇಳಲಾಗಿದೆ.
ಈ ಹಿಂದೆ ಕೂಡ ಶಿವರಾತ್ರಿ ನುಡಿ ಭವಿಷ್ಯ ನಿಜವಾಗಿದೆ ಎಂದು ವಿಶ್ಲೇಷಕ ಬಸವರಾಜ ಭದ್ರಗೋಳ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + two =
Remember me
